»   » ಚಿತ್ರಗಳು: ದೊಡ್ಮನೆ ಮೊಮ್ಮಗಳ ಮದುವೆಯ ಅದ್ಧೂರಿ ಕ್ಷಣಗಳು

ಚಿತ್ರಗಳು: ದೊಡ್ಮನೆ ಮೊಮ್ಮಗಳ ಮದುವೆಯ ಅದ್ಧೂರಿ ಕ್ಷಣಗಳು

Posted By:
Subscribe to Filmibeat Kannada

ಅಂತೂ ಇಂತೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುದ್ದಿನ ಮಗಳ ಮದುವೆ ಮುಗಿಯಿತು. ದೊಡ್ಮನೆ ಮೊಮ್ಮಗಳು ತನ್ನ ಪತಿ ಡಾ.ದಿಲೀಪ್ ಜೊತೆ ಇನ್ನೇನು ಹೊಸ ಜೀವನ ಆರಂಭಿಸಲಿದ್ದಾರೆ.

ಮದುವೆ ಸಂಭ್ರಮ ಏನೋ ಮುಗಿದು ಹೋಯಿತು ಆದರೆ ಮದುವೆಯಾಗಿ ಹೊರಗಡೆ ಕಾಲಿಡುತ್ತಿರುವ ಮನೆ ಮಗಳನ್ನು ಹೊರಗಡೆ ಕಳಿಸಿ ಕೊಡುವುದು ಹಾಗೂ ಮಗಳಿಗೆ ವಿದಾಯ ಕೋರುವುದು ಸಾಮಾನ್ಯವಾಗಿ ಯಾವುದೇ ತಂದೆಯಾದವರಿಗೆ ಕಷ್ಟದ ಕೆಲಸ. [ಮುತ್ತಣ್ಣನ ಮಗಳ ಆರತಕ್ಷತೆಯ ಅದ್ಧೂರಿ ಸಮಾರಂಭ]

ಅಂದಹಾಗೆ ಶಿವಣ್ಣ-ಗೀತಾ ದಂಪತಿಗಳ ಪುತ್ರಿ ಡಾ.ನಿರುಪಮಾ ಅವರ ಮದುವೆ ಡಾ.ದಿಲೀಪ್ ಅವರೊಂದಿಗೆ ನಿನ್ನೆ (ಆಗಸ್ಟ್ 31)ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವೈಭವದಿಂದ ಜರುಗಿದೆ.[ಡಾ.ದಿಲೀಪ್, ನಿರುಪಮಾ ಸಪ್ತಪದಿ ತುಳಿದ ಚಿತ್ರಗಳು]

ಇನ್ನೂ ಮನೆ ಮಗಳನ್ನು ಮದುವೆ ಮಾಡಿ ಹೊರಗಡೆ ಕಳಿಸುವಾಗಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲಾ ತಂದೆ ತಾಯಂದಿರಿಗೆ ಆಗುವಂತೆ ಶಿವಣ್ಣ ದಂಪತಿಗಳಿಗೂ ಆಗಿದ್ದಂತು ಸತ್ಯ.[ಶಿವಣ್ಣನ ಮಗಳ ರಿಸೆಪ್ಷನ್ ನಲ್ಲಿ 'ಬಾಹುಬಲಿ' ರಾಜಮೌಳಿ]

ಡಾ.ರಾಜ್ ಅವರಿಗೆ ಅತ್ಯಂತ ಪ್ರೀತಿಯ ಮುದ್ದಿನ ಮೊಮ್ಮಗಳಾಗಿದ್ದ ನಿರುಪಮಾ ಅವರ ನಗುವಿನಲ್ಲಿಯೇ ತಮ್ಮ ಪ್ರೀತಿಯ ಅಪ್ಪಾಜಿಯನ್ನು ಶಿವಣ್ಣ ಕಾಣುತ್ತಿದ್ದರಂತೆ. ಹೀಗಿರುವಾಗ ಇಷ್ಟು ದಿನ ಒಟ್ಟಿಗೆ ಇದ್ದು, ಪ್ರೀತಿಯಿಂದ ಜೋಪಾನವಾಗಿ ಸಾಕಿ ಬೆಳೆಸಿದ ಮಗಳು ಇದೀಗ ಹುಟ್ಟಿ-ಬೆಳೆದ ಮನೆಗೆ ವಿದಾಯ ಕೋರುವಾಗ ಶಿವಣ್ಣ ದಂಪತಿಗಳಿಗೆ ಹೃದಯ ತುಂಬಿ ಬಂದಿದೆ.

ಇನ್ನೂ ನಿನ್ನೆ ನಡೆದ ಅದ್ಧೂರಿ ಮದುವೆಯ ಸಂಭ್ರಮದ ಕೆಲವೊಂದು ಅಮೂಲ್ಯ ಕ್ಷಣಗಳು ಹಾಗು ಸನ್ನಿವೇಶಗಳನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ....

ಪ್ರೀತಿಯ ಅಜ್ಜನಿಗೆ ಮುದ್ದು ಮೊಮ್ಮಗಳ ನಮನ

ನಟ ಸಾರ್ವಭೌಮ ಡಾ.ರಾಜ್ ಅವರ ಭಾವಚಿತ್ರಕ್ಕೆ ತ್ರಿಪುರ ವಾಸಿನಿಗೆ ಹೊರಡುವ ಮೊದಲು ಮನೆಯಲ್ಲಿ ವಂದಿಸಿದ ಪ್ರೀತಿಯ ಮೊಮ್ಮಗಳು, ಮದುಮಗಳು ಡಾ.ನಿರುಪಮಾ

ಪ್ರೀತಿಯ ಮಗಳ ಕೈ ಹಿಡಿದು ನಡೆಸಿದ ಮುತ್ತಣ್ಣ

ಅರಮನೆ ಮೈದಾನಕ್ಕೆ ಹೊರಡುವ ಮುಂಚೆ ಮದುಮಗಳು, ಮುದ್ದಿನ ಮಗಳು ನಿರುಪಮಾ ಕೈ ಹಿಡಿದು ಮಹಡಿಯಿಂದ ಕರೆ ತಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಮದುಮಗಳಿಗೆ ಸಿಹಿ ತಿನ್ನಿಸಿದ ಶಿವಣ್ಣ

ಮದುವೆ ಛತ್ರಕ್ಕೆ ಹೊರಡುವ ಮುನ್ನ ಮನೆಯಲ್ಲಿ ಮಗಳಿಗೆ ಸಿಹಿ ತಿನ್ನಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ತಾಳಿ ಕಟ್ಟುವ ಶುಭ ಮೂಹೂರ್ತ

ಒಂದು ಹೆಣ್ಣಿನ ಜೀವನದಲ್ಲಿ ಅತ್ಯಂತ ಅಮೂಲ್ಯ ಸಂದರ್ಭ ಅಂದ್ರೆ ಅದು ತಾಳಿ ಕಟ್ಟುವ ಸಮಯ. ಅಂದಹಾಗೆ ಶಿವಣ್ಣ ಪುತ್ರಿ ನಿರುಪಮಾ ಅವರ ಜೀವನದ ಅತ್ಯಮೂಲ್ಯ ಸಮಯ ತಾಳಿ ಕಟ್ಟುವ ಸಂದರ್ಭ

ಸಪ್ತಪದಿ ತುಳಿದ ನೂತನ ದಂಪತಿಗಳು

ಕುತ್ತಿಗೆಗೆ ಮೂರು ಗಂಟು ಬಿದ್ದ ನಂತರ ಹೆಣ್ಣಿನ ಜೀವನದ ಇನ್ನೊಂದು ಅಮೂಲ್ಯ ಸಂದರ್ಭ ಅಂದ್ರೆ ಪತಿಯ ಜೊತೆ ಸಪ್ತಪದಿ ತುಳಿಯುವುದು. ಇಲ್ಲಿ ನಿರುಪಮಾ ಪತಿ ದಿಲೀಪ್ ಕೈ ಹಿಡಿದು ಏಳು ಜನುಮಗಳ ಅನುಬಂಧವಾಗಿರುವ ಸಪ್ತಪದಿ ತುಳಿದರು

ಮದುವೆ ಶಾಸ್ತ್ರ

ಡಾ.ನಿರುಪಮಾ ಹಾಗೂ ಡಾ.ದಿಲೀಪ್ ದಂಪತಿಗಳು ಮದುವೆ ಶಾಸ್ತ್ರದ ಕಾರ್ಯಗಳಲ್ಲಿ ಬ್ಯುಸಿಯಾದ ಪರಿ ನೋಡಿ

ಮದುಮಗಳ ಸುಂದರ ಮುಗುಳುನಗೆ

ಮದುಮಗಳು ನಿರುಪಮಾ ಅವರು ಮುಖದಲ್ಲಿ ನಾಚಿಕೆ ತುಂಬಿಕೊಂಡು ಸುಂದರವಾಗಿ ಮುಗುಳು ನಕ್ಕ ಒಂದು ಅಮೂಲ್ಯ ಕ್ಷಣ

ಮಗಳು ಅಳಿಯನನ್ನು ಕರೆತಂದ ಶಿವಣ್ಣ

ನಿನ್ನೆ (ಆಗಸ್ಟ್ 31) ಸಂಜೆ ನಡೆದ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಮಗಳು-ಅಳಿಯನ ಕೈ ಹಿಡಿದು ಕರೆತಂದ ಶಿವಣ್ಣ ದಂಪತಿಗಳು. ಮದುಮಗಳು ತಿಳಿಗೆಂಪು ಬಣ್ಣದ ರೇಶೀಮೆ ಸೀರೆಯಲ್ಲಿ ಮಿಂಚಿದರೆ ಮದುಮಗ ದಿಲೀಪ್ ಸೂಟ್ ನಲ್ಲಿ ಕಂಗೊಳಿಸುತ್ತಿದ್ದರು. ಶಿವರಾಜ್ ಕುಮಾರ್, ಗೀತಾ ದಂಪತಿಗಳು ಕೂಡ ಕಲರ್ ಫುಲ್ ಡ್ರೆಸ್ಸ್ ನಲ್ಲಿ ಮಿಂಚುತ್ತಿದ್ದರು.

    English summary
    After the grand wedding and reception, Dr Nirupama the elder daughter of Shivarajkumar and grand daughter of Dr Rajkumar has started a new life with hubby Dr Dileep. This sad moment of daughter's 'vidaai' is the most toughtest phase to any father. We are sure even our Hatrick Hero Shivarajkumar is experiencing the same situation in real!!.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada