For Quick Alerts
  ALLOW NOTIFICATIONS  
  For Daily Alerts

  ನನ್ನ ಕನಸಿನ ತಾರಾಗಣ ಹೀಗಿದೆ: ಲೂಸಿಯಾ ಪವನ್

  By ಜೇಮ್ಸ್ ಮಾರ್ಟಿನ್
  |

  ನಾನು ಬರೆಯುತ್ತಿರುವ ಹೊಸ ಸ್ಕ್ರಿಪ್ಟ್ ಗೆ ನನ್ನ ಕನಸಿನ ತಾರಾಗಣ ಹೀಗಿದೆ ಎಂದು ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

  ಲೂಸಿಯಾ ಚಿತ್ರದ ನಿರೂಪಣೆ, ಕಥಾ ಸಂಕೀರ್ಣತೆಯ ಕೆಲವು ಅಂಶಗಳನ್ನು ಹೊಸ ಸಿನಿಮಾದಲ್ಲೂ ಅಳವಡಿಸಿಕೊಳ್ಳುತ್ತಿದ್ದೇನೆ ಹೀಗಾಗಿ, ಲೂಸಿಯಾ ಮಾಡಿದ ಗಳಿಕೆಯ ಅರ್ಧದಷ್ಟು ಈ ಚಿತ್ರ ಗಳಿಸುವ ನಿರೀಕ್ಷೆ ನನಗಿಲ್ಲ! ಆದರೆ, ಲೂಸಿಯಾಗಿಂತ ಎರಡುಪಟ್ಟು ಜಾಗತಿಕವಾಗಿ ಈ ಚಿತ್ರ ಗುರುತಿಸಲ್ಪಡುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ.

  ಈ ಚಿತ್ರದ ಕಥೆ ಎಷ್ಟು ಗಟ್ಟಿಯಾಗಿದೆಯೋ ಅದಕ್ಕೆ ತಕ್ಕ ಪ್ರತಿಭಾವಂತ ನಟ, ನಟಿಯರ ಅಗತ್ಯವಿದೆ. ನನ್ನ ಹೊಸ ಚಿತ್ರಕ್ಕೆ ಬೇಕಾದ ತಾರಾಗಣ ಸಿಕ್ಕರೆ ನನ್ನ ಕನಸು ನನಸಾಗುತ್ತದೆ. ಈ ತಾರಾಗಣದ ಜತೆಗೆ ಹೊಸ ನಾಯಕ ನಟ, ನಟಿಯರನ್ನು ಹಾಕಿಕೊಂಡು ಕಮರ್ಷಿಯಲ್ ಆಗಿ ಚಿತ್ರವನ್ನು ಮುಂದಿಡುವ ಪ್ರಯತ್ನ ಮಾಡುತ್ತೇನೆ ಎಂದು ಪವನ್ ಬರೆದುಕೊಂಡಿದ್ದಾರೆ.

  ಪವನ್ ಅವರ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿರುವ ಈ ಮಾತುಗಳಿಗೆ ಅಭಿಮಾನಿಗಳು, ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಾವಿರಾರು ಲೈಕ್ ಗಳು ನೂರಾರು ಕಾಮೆಂಟ್ ಗಳನ್ನು ಪುಟ ಕಂಡಿದೆ. ಅಚ್ಯುತ್ ಕುಮಾರ್ ಅವರನ್ನು ಮರೆಯಬೇಡಿ ಎಂದು ಕೆಲವರು ಪವನ್ ಗೆ ಸಲಹೆಯನ್ನೂ ನೀಡಿದ್ದಾರೆ.

  ಪವನ್ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿರುವ ಮನದಾಳದ ಮಾತಿಗೆ ಸಿಕ್ಕಿರುವ ಪ್ರತಿಕ್ರಿಯೆ ಏನು? ಲೂಸಿಯಾ ನಂತರ ಪವನ್ ಹೆಣೆದಿರುವ ಕಥೆ ಎಂಥದ್ದು? ಪವನ್ ಡ್ರೀಮ್ ತಾರಾಗಣದಲ್ಲಿ ಯಾರಿದ್ದಾರೆ? ಮುಂದೆ ನೋಡಿ....

  ಪವನ್ ಅವರ ಮುಂದಿನ ಚಿತ್ರದ ನಾಯಕಿ ಯಾರು?

  ಪವನ್ ಅವರ ಮುಂದಿನ ಚಿತ್ರದ ನಾಯಕಿ ಯಾರು?

  ಇಲ್ಲಿ ಹಾಕಿರುವ ಚಿತ್ರದ ಸ್ಕೆಚ್ ಮಾದರಿಯಲ್ಲಿರುವ ಹೊಸ ಪ್ರತಿಭಾವಂತ ನಟಿಗಾಗಿ ಹುಡುಕಾಟ ಜಾರಿಯಲ್ಲಿದೆ. ಹೆಚ್ಚಿನ ವಿವರ ನಂತರ ಹೇಳುತ್ತೇನೆ ಎಂದ ಪವನ್.

  ವೈವಿಧ್ಯಮಯ ನಟ ಅನಂತ್ ಗೆ ವಿಭಿನ್ನ ಪಾತ್ರ

  ವೈವಿಧ್ಯಮಯ ನಟ ಅನಂತ್ ಗೆ ವಿಭಿನ್ನ ಪಾತ್ರ

  ಭಾರತೀಯ ಚಿತ್ರರಂಗದ ವೈವಿಧ್ಯಮಯ ನಟ ಅನಂತ್ ಗೆ ವಿಭಿನ್ನ ಪಾತ್ರ ಸೃಷ್ಟಿಸುತ್ತಿದ್ದಾರಂತೆ ಪವನ್ ಕುಮಾರ್

  ಪ್ರತಿಭಾವಂತ ನಟ ಅವಿನಾಶ್ ಅವರು ಬೇಕಂತೆ

  ಪ್ರತಿಭಾವಂತ ನಟ ಅವಿನಾಶ್ ಅವರು ಬೇಕಂತೆ

  ಪವನ್ ಅವರು ಹೆಣೆಯುತ್ತಿರುವ ಕಥೆಯಲ್ಲಿನ ಪ್ರಮುಖ ಪಾತ್ರಕ್ಕೆ ಅವಿನಾಶ್ ಅವರ ನಟನೆ ಅವಶ್ಯವಿದೆಯಂತೆ

  ಪೋಷಕ ಪಾತ್ರಧಾರಿಯಾಗಿ ಅನು ಪ್ರಭಾಕರ್

  ಪೋಷಕ ಪಾತ್ರಧಾರಿಯಾಗಿ ಅನು ಪ್ರಭಾಕರ್

  ಪೋಷಕ ಪಾತ್ರಧಾರಿಯಾಗಿ ಅನು ಪ್ರಭಾಕರ್ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಸಕ್ಕರೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನು ಅವರು ಈಗ ದಾಂಪತ್ಯ ಜೀವನ ಅಂತ್ಯಗೊಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿರುವುದರಿಂದ ಅನು ನಟನೆ ಬಗ್ಗೆ ಸ್ಪಷ್ಟನೆ ಇಲ್ಲ.

  ರಾಜ್ಯ ಪ್ರಶಸ್ತಿ ವಿಜೇತೆ ಭಾವನಾಗೂ ಸ್ಥಾನ

  ರಾಜ್ಯ ಪ್ರಶಸ್ತಿ ವಿಜೇತೆ ಭಾವನಾಗೂ ಸ್ಥಾನ

  ಪವನ್ ಒಡೆಯರ್ ಅವರ ಕನಸಿನ ಕಥೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತೆ ಭಾವನಾಗೂ ಸ್ಥಾನ ಕಲ್ಪಿಸಲಾಗಿದೆ.

  ಇಷ್ಟಕ್ಕೂ ಪವನ್ ಹೊಸ ಚಿತ್ರದ ಕಥೆ ಏನು?

  ಇಷ್ಟಕ್ಕೂ ಪವನ್ ಹೊಸ ಚಿತ್ರದ ಕಥೆ ಏನು?

  ಇಷ್ಟಕ್ಕೂ ಪವನ್ ಹೊಸ ಚಿತ್ರದ ಕಥೆ ಏನು? ಎಂಬ ಕುತೂಹಲ ಇದ್ದೇ ಇದೆ. ಲೂಸಿಯಾ ನಂತರ ಮತ್ತೊಂದು ಲೂಸಿಯಾ ಮಾದರಿ ಚಿತ್ರ ನೀಡಲು ಪವನ್ ಗೂ ಇಷ್ಟವಿಲ್ಲ. ಆದರೆ, ಈ ಹೊಸ ಸಿನಿಮಾ ಕೂಡಾ ಸೈಕಾಲಾಜಿಕಲ್ ಕಥೆ ಹೊಂದಿದೆ ಎಂದು ಪವನ್ ಹೇಳಿದ್ದಾರೆ. ಈಗಾಗಲೇ ತಮ್ಮ ಗೆಳೆಯರಿಗೆ ಕಥೆ ಹೇಳಿದ್ದಾರಂತೆ.

  English summary
  Sandalwood director Pawan Kumar, who caught the attention of the moviegoers with his critically acclaimed movie Lucia, has kick-started his next project. The actor took to his micro-blogging site to talk about his forthcoming movie. Click on slides to view the photos of Pawan Kumar's dream cast in his next...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X