Just In
Don't Miss!
- Sports
ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!
- Automobiles
ವಿನೂತನ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಫೋರ್ಸ್ ಗೂರ್ಖಾ ಎಸ್ಯುವಿ
- News
ಲಾಲು ಪ್ರಸಾದ್ ಆರೋಗ್ಯ ಮತ್ತಷ್ಟು ಗಂಭೀರ: ರಾಂಚಿಯಿಂದ ದೆಹಲಿಗೆ ಏರ್ಲಿಫ್ಟ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮ್ಮ-ಮಗನ ಯಾವ ಜೋಡಿ ನಿಮಗೆ ಹೆಚ್ಚು ಇಷ್ಟ.? ಫೋಟೋಗಳನ್ನ ನೋಡಿ ಹೇಳಿ
ಸ್ಯಾಂಡಲ್ ವುಡ್ ಸ್ಟಾರ್ ನಟ-ನಟಿಯರ ಸಿನಿಮಾಗಳ ಬಗ್ಗೆ ತಿಳಿದಿರುವ ಅಭಿಮಾನಿಗಳಿಗೆ ಅವರ ಖಾಸಗಿ ಜೀವನದ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ತಾರೆಯರು ಅಷ್ಟೇ ಸಿನಿಮಾ ಕಾರ್ಯಕ್ರಮಗಳಲ್ಲಿ ಅವರ ಅಪ್ಪ-ಅಮ್ಮ-ತಮ್ಮ-ತಂಗಿ ಯಾರನ್ನ ಕೂಡ ಹೆಚ್ಚಾಗಿ ಕರೆದುಕೊಂಡು ಬರುವುದಿಲ್ಲ.
ಆದ್ರೆ, ಅವರ ಕುಟುಂಬದ ಕಾರ್ಯಕ್ರಮಗಳಲ್ಲಿ ಅಥವಾ ಬರ್ತಡೇ ದಿನ ಮಾತ್ರ ಅವರ ಪರಿಚಯ ಆಗುತ್ತೆ. ಅದಿರಲಿ ಬಿಡಿ, ಎಷ್ಟು ಜನ ಹೀರೋಗಳ ಅಮ್ಮಂದಿರನ್ನ ನೀವು ನೋಡಿದ್ದೀರಾ.? ಅಲ್ಲೊಬ್ಬರು, ಇಲ್ಲೊಬ್ಬರು ಸ್ಟಾರ್ ನಟರ ಅಮ್ಮಂದಿರ ಫೋಟೋಗಳನ್ನ ನೋಡಿರ್ತೀರಾ.
ಪರವಾಗಿಲ್ಲ ಬಿಡಿ, ಈಗ ಒಂದೇ ಕಡೆ ಎಲ್ಲ ಪ್ರಮುಖ ಕಲಾವಿದರ ಅಮ್ಮಂದಿರನ್ನ ನೋಡುವ ಅವಕಾಶ ನಿಮಗೆ ಸಿಗುತ್ತಿದೆ. ಹೌದು, ರವಿಚಂದ್ರನ್, ಅಂಬರೀಶ್, ಸೇರಿದಂತೆ ಇಂದಿನ ಟಾಪ್ ನಟರ ಮದರ್ಸ್ ಬಗ್ಗೆ ನಾವು ಹೇಳುತ್ತೇವೆ. ಮುಂದೆ ಓದಿ....

ತ್ರಿಮೂರ್ತಿಗಳ ಶಕ್ತಿ ಪಾರ್ವತಮ್ಮ
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಹಿಂದಿನ ಶಕ್ತಿ ಅವರ ಅಮ್ಮ ಪಾರ್ವತಮ್ಮ ರಾಜ್ ಕುಮಾರ್. ಡಾ ರಾಜ್ ಕುಮಾರ್ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದರು. ಇಂತಹ ವೇಳೆಯಲ್ಲಿ ಹೆಚ್ಚು ಕಾಲ ಹೊರಗಡೆಯೇ ಉಳಿದುಕೊಳ್ಳಬೇಕಿತ್ತು. ಆಗ ಪಾರ್ವತಮ್ಮ ಅವರು ತಮ್ಮ ಮಕ್ಕಳಿಗೆ ಯಾವುದೇ ಕೊರಗಿಲ್ಲದೆ ಈ ಮಟ್ಟಕ್ಕೆ ತರುವಲ್ಲಿ ಶ್ರಮ ವಹಿಸಿದ್ದಾರೆ.

ತೂಗುದೀಪ ಕುಟುಂಬದ ಮೀನಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ. ದರ್ಶನ್ ಅವರ ತಂದೆ ಖ್ಯಾತ ನಟ ತೂಗುದೀಪ ಶ್ರೀನಿವಾಸ ಅವರು ನಿಧನರಾದ ನಂತರ ದರ್ಶನ್, ದಿನಕರ್ ಹಾಗೂ ಮಗಳ ಭವಿಷ್ಯ ರೂಪಿಸಿದ ಪ್ರಮುಖ ವ್ಯಕ್ತಿ.

ಸುದೀಪ್ ಹಿಂದಿನ ಶಕ್ತಿ
ಕಿಚ್ಚ ಸುದೀಪ್ ಅವರ ತಾಯಿ ಸರೋಜ ಸಂಜೀವ. ಸುದೀಪ್ ಅವರು ಸಿನಿಮಾರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದಲೂ ಅವರ ತಾಯಿ ಕಿಚ್ಚನಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ.

ರಾಕಿಂಗ್ ಸ್ಟಾರ್ ಮದರ್
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ. ಚಿಕ್ಕವಯಸ್ಸಿನಿಂದಲೂ ಯಶ್ ಗೆ ಸಪೋರ್ಟ್ ಮಾಡುತ್ತಾ ಬಂದಿರುವ ಪುಷ್ಪಾ ಅವರು, ಮಗನ ಖುಷಿಯಲ್ಲಿ ಸಂತೋಷ ಕಂಡಿದ್ದಾರೆ.

ವಿನೋದ್ ರಾಜ್ ಗೆ ನಿಜವಾದ ದೇವರು
ಕನ್ನಡದ ಡ್ಯಾನ್ಸಿಂಗ್ ಕಿಂಗ್ ವಿನೋದ್ ರಾಜ್ ಅವರು ಹಿರಿಯ ನಟಿ ಲೀಲಾವತಿ ಅವರ ಏಕೈಕ ಪುತ್ರ. ಮಗನ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಂತಿದ್ದ ದಿಟ್ಟ ಮಹಿಳೆ. ಮಗನ ಚಿತ್ರಗಳನ್ನ ನಿರ್ಮಿಸಿದ್ದಾರೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ಮಗನಿಗೆ ಜೊತೆಯಾಗಿದ್ದಾರೆ.

ನವರಸ ನಾಯಕನ ದೈವ
ನವರಸ ನಾಯಕ ಜಗ್ಗೇಶ್ ಅವರ ತಾಯಿ ನಂಜಮ್ಮ ಶಿವಲಿಂಗಪ್ಪ. ಜಗ್ಗೇಶ್ ಅವರ ತಾಯಿ ಪ್ರೀತಿ ಎಂತಹದ್ದು ಅಂದ್ರೆ, ತಮ್ಮ ಭುಜದ ಮೇಲೆ ಅಮ್ಮನ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಜಗ್ಗೇಶ್ ತಮ್ಮ ತಾಯಿಯ ಆಸೆ ಪೂರೈಸಲು ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ಸಾರ್ವಜನಿಕ ಗಣಪತಿ ದೇವಾಲಯವೊಂದನ್ನು ನಿರ್ಮಿಸಿದ್ದಾರೆ.

ದುನಿಯಾ ಋಣ
ಕನ್ನಡದ ಕರಿ ಚಿರಿತೆ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ರುದ್ರಪ್ಪ. ನಟ ಯೋಗೇಶ್ ಅವರ ಅಜ್ಜಿ ಕೂಡ ಇವರೇ. ಕಷ್ಟದ ದಿನ ಎದುರಿಸಿ ಯಶಸ್ಸು ಕಂಡ ದುನಿಯಾ ವಿಜಯ್ ಇಂಡಸ್ಟ್ರಿಯಲ್ಲಿ ಇಂದು ಸೂಪರ್ ಸ್ಟಾರ್ ನಟ.

ಉಪೇಂದ್ರ ಮತ್ತು ಅಮ್ಮ
ರಿಯಲ್ ಸ್ಟಾರ್ ಉಪೇಂದ್ರ ಅವರದ್ದು ತುಂಬು ಕುಟುಂಬ. ತಂದೆ-ತಾಯಿ-ಮಕ್ಕಳು ಎಲ್ಲರೂ ಒಟ್ಟಿಗೆ ಸಂತೋಷದಿಂದ ಇದ್ದಾರೆ. ಉಪೇಂದ್ರ ಅವರ ಅನ್ನ ಅನುಸೂಯ.

ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಅವರ ತಾಯಿ ಸುಲೋಚನ ಅವರಿಗೆ ಮಾತ್ರ ನಂಬಿಕೆ ಇತ್ತಂತೆ. ಅವರ ತಂದೆ ಯಾವಾಗಲು ಬೈಯುತ್ತಿದ್ದರು. ಆದ್ರೆ, ಅಮ್ಮ ಮಾತ್ರ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಇದರ ಪರಿಣಾಮ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಆಗಿದ್ದಾರೆ.
ತಾಯಿ ಕಂಡಂತೆ ಗೋಲ್ಡನ್ ಸ್ಟಾರ್ ಗಣೇಶ್ ಅಂದು ಹೇಗಿದ್ದರು?

ರವಿಚಂದ್ರನ್ ತಾಯಿ
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಲ್ ಅವರಂದ್ರೆ ರವಿ ಸರ್ ಗೆ ತುಂಬ ಪ್ರೀತಿ. ತಾಯಿಗೂ ಕೂಡ ಮಗನ ಮೇಲೆ ಎಲ್ಲಿಲ್ಲದ ಮಮಕಾರ. ಅಮ್ಮಮ ಮಗನ ಈ ಫೋಟೋ ಅಷ್ಟೇ ಮುದ್ದಾಗಿದೆ.

ಅಂಬರೀಶ್ ತಾಯಿ
ಇನ್ನು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ತಾಯಿ ಪದ್ಮಮ್ಮ. ದೊಡ್ಡ ಕುಟುಂಬದಲ್ಲಿ ಜನಿಸಿದ ಅಂಬಿ ಚಿಕ್ಕವಯಸ್ಸಿನಿಂದಲೂ ಸ್ವಲ್ಪ ರೆಬೆಲ್ ಆಗಿದ್ದರು. ಈಗಲೂ ಹಾಗೆಯೇ ಇದ್ದಾರೆ.
ಚಿತ್ರಕೃಪೆ: ಚಿತ್ರಲೋಕ