»   » ಸನ್ನಿ ಜೊತೆ ಸೃಜಾ 'ಹಾಟ್' ಫೋಟೋ ಶೂಟ್

ಸನ್ನಿ ಜೊತೆ ಸೃಜಾ 'ಹಾಟ್' ಫೋಟೋ ಶೂಟ್

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಟಾರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬಹಳ ಮುತುವರ್ಜಿ ವಹಿಸಿ ಮಾಡಿರುವ ಬಹುನಿರೀಕ್ಷೆಯ ಫ್ಯಾಮಿಲಿ ರೋಮ್ಯಾಂಟಿಕ್ ಎಂರ್ಟಟೈನರ್ ಚಿತ್ರ 'ಲವ್ ಯೂ ಆಲಿಯಾ' ಪ್ರೇಕ್ಷಕರನ್ನು ತುಂಬಾ ಕಾಯಿಸಿದ ನಂತರ ಇದೀಗ ಗೌರಿ-ಗಣೇಶ ಹಬ್ಬ (ಸೆಪ್ಟೆಂಬರ್ 17) ದಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ.

  'ಲವ್ ಯೂ ಆಲಿಯಾ', ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಬಹು ದೊಡ್ಡ ಸ್ಟಾರ್ ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್, ಪರಭಾಷಾ ನಟಿ ಭೂಮಿಕಾ ಚಾವ್ಲಾ, ಬಾಲಿವುಡ್ ನ ಮಾದಕ ತಾರೆ ಸನ್ನಿ ಲಿಯೋನ್, ಸೃಜನ್ ಲೋಕೇಶ್, ಚಂದನ್, ಸಂಗೀತಾ ಚೌವ್ಹಾಣ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಮಿಂಚ್ತಾರೆ ರವಿಚಂದ್ರನ್]

  ಬಾಲಿವುಡ್ ನ ಮಾದಕ ತಾರೆ ಸನ್ನಿ ಲಿಯೋನ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಮೂಲಗಳ ಮಾಹಿತಿ ಪ್ರಕಾರ ಸನ್ನಿ ಕೇವಲ ಐಟಂ ಸಾಂಗ್ ನಲ್ಲಿ ಮಾತ್ರವಲ್ಲದೇ ಟಾಕಿ ಪೋರ್ಷನ್ ನಲ್ಲೂ ಕಾಣಿಸಿಕೊಂಡಿದ್ದಾರಂತೆ. ಇನ್ನು ಬಹಳ ದಿನಗಳ ನಂತರ ಪ್ರೇಕ್ಷಕರು ತೆರೆ ಮೇಲೆ ಸನ್ನಿ ಬೆಡಗು ಬಿನ್ನಾಣ ನೋಡಲು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ.

  'ಜೋಗಿ' ಪ್ರೇಮ್ ಅವರ 'ಡಿಕೆ' ಚಿತ್ರದಲ್ಲಿ ಸೇಸಮ್ಮ ಎಂಬ ಐಟಂ ಹಾಡಿನ ಮೂಲಕ ಸೊಂಟ ಬಳುಕಿಸಿ ಗಾಂಧಿನಗರದ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದರು. ಇದೀಗ ಇಂದ್ರಜಿತ್ ಲಂಕೇಶ್ ಅವರ 'ಲವ್ ಯೂ ಆಲಿಯಾ' ಚಿತ್ರದ ಮೂಲಕ ಮತ್ತೊಮ್ಮೆ ಸನ್ನಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. [ಸೆಪ್ಟೆಂಬರ್ ನಲ್ಲಿ 'ಲವ್ ಯು ಆಲಿಯ' ರಿಲೀಸ್ ಫಿಕ್ಸ್]

  ಇದೀಗ ಸೃಜನ್ ಲೋಕೇಶ್ ಹಾಗೂ ಸನ್ನಿ ಲಿಯೋನ್ ಅವರ ಹಾಟ್ ಪೋಟೋ ಶೂಟ್ ಫಿಲ್ಮಿಬೀಟ್ ಗೆ ಲಭ್ಯವಾಗಿದ್ದು, ನೋಡಲು ಸ್ಲೈಡ್ ಕ್ಲಿಕ್ ಮಾಡಿ...

  ಸನ್ನಿ ಲಿಯೋನ್-ಸೃಜನ್ ಲೋಕೇಶ್

  'ಲವ್ ಯೂ ಆಲಿಯಾ' ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ಸನ್ನಿ ಲಿಯೋನ್ ಫೊಟೋ ಶೂಟ್ ನಲ್ಲಿ ಹಾಟ್ ಫೋಸ್. ಚಿತ್ರದಲ್ಲಿ ಚಂದನ್, ಸಂಗೀತಾ ಚೌವ್ಹಾಣ್, ಭೂಮಿಕಾ ಚಾವ್ಲಾ, ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್ ಮುಂತಾದವರು ಮಿಂಚಿದ್ದಾರೆ

  'ಬೇಬಿ ಡಾಲ್' ಸನ್ನಿ ಲಿಯೋನ್

  ಬಿಟೌನ್ ನಲ್ಲಿ ಬೇಬಿ ಡಾಲ್ ಅಂತಾನೇ ಖ್ಯಾತಿ ಗಳಿಸಿರುವ ಸನ್ನಿ ಲಿಯೋನ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯೂ ಆಲಿಯಾ' ಚಿತ್ರದಲ್ಲಿ ಸೃಜನ್ ಲೋಕೇಶ್ ಅವರೊಂದಿಗೆ ಕಾಮಾಕ್ಷಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಜೊತೆಗೆ ಚಿತ್ರದ ಮಾತಿನ ಭಾಗದಲ್ಲೂ ಸ್ವಲ್ಪ ಕಾಣಿಸಿಕೊಂಡಿದ್ದಾರೆ.

  ಸೃಜಾ ಜೊತೆ ಬೇಬಿ ಡಾಲ್ ಹಾಟ್ ಫೋಸ್

  ಹಾಟ್ ನಟಿ ಸನ್ನಿ ಲಿಯೋನ್ ಸೃಜಾ ಅವರ ಜೊತೆ 'ಲವ್ ಯೂ ಆಲಿಯಾ' ಹಾಡಿನ ಚಿತ್ರೀಕರಣದ ನಂತರ ಫೊಟೋ ಒಂದಕ್ಕೆ ಹಾಟ್ ಫೋಸ್ ನೀಡಿದ ಪರಿ

  ರೋಮ್ಯಾಂಟಿಕ್ ಕಥೆಯಾಧರಿಸಿದ ಚಿತ್ರ

  'ಲವ್ ಯೂ ಆಲಿಯಾ' ಚಿತ್ರ ಫ್ಯಾಮಿಲಿ ಎಂರ್ಟಟೈನರ್ ಜೊತೆಗೆ ಪಕ್ಕಾ ರೋಮ್ಯಾಂಟಿಕ್ ಕಥೆಯನ್ನಾಧರಿಸಿದ್ದು, ಪ್ರೇಕ್ಷಕರ ಹೃದಯದ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಬಹುದು

  ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಸನ್ನಿ

  ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯೂ ಆಲಿಯಾ' ಚಿತ್ರದಲ್ಲಿ ಮಲ್ಟಿ ಸ್ಟಾರರ್ ಮಿಂಚಿದ್ದಾರೆ. ಸೆಪ್ಟೆಂಬರ್ 17 ರಂದು ಚಿತ್ರ ತೆರೆ ಕಾಣುತ್ತಿದೆ

  ಇಂದ್ರಜಿತ್ ಲಂಕೇಶ್, ಸೃಜನ್, ಸನ್ನಿ ಲಿಯೋನ್

  ಚಿತ್ರದ ಪ್ರೆಸ್ ಮೀಟ್ ಸಂದರ್ಭದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಸನ್ನಿ ಲಿಯೋನ್ ಹಾಗೂ ಸೃಜನ್ ಲೋಕೇಶ್ ಫೋಸ್

  English summary
  Star director Indrajith Lankesh is gearing up for his much awaited movie 'Luv U Alia' After the long wait, the movie is releasing as treat for Ganesha-Gauri festival on Sep 17. The multi-starrer movie includes Chandan, Sangeetha Chauhan, Crazy Star Ravichandran, Bhumika Chawla, Sunny Leone, Srujan Lokesh. Abhinaya Chakravarthy aka Sudeep will play himself in the romantic entertainer, Luv U Alia.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more