»   » ಮುಂಬೈನಲ್ಲಿ ನಿಧಿ ಸುಬ್ಬಯ್ಯ ಜೊತೆ ವಿನಯ್ ರಾಜ್ ಕುಮಾರ್

ಮುಂಬೈನಲ್ಲಿ ನಿಧಿ ಸುಬ್ಬಯ್ಯ ಜೊತೆ ವಿನಯ್ ರಾಜ್ ಕುಮಾರ್

Posted By:
Subscribe to Filmibeat Kannada

'ಅಣ್ಣಾ ಬಾಂಡ್' ಸಿನಿಮಾ ಆದ್ಮೇಲೆ ನಟಿ ನಿಧಿ ಸುಬ್ಬಯ್ಯ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. 'ಡೈರೆಕ್ಟ್ ಇಶ್ಕ್ ಹೋ ಗಯಾ', 'ಲವ್ ಶಾಗುನ್' ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲೇ ಬಿಜಿಯಾಗಿರುವ ನಟಿ ನಿಧಿ ಸುಬ್ಬಯ್ಯ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.

ಇನ್ನೂ ನಮ್ಮ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಕೂಡ ಟ್ರೈನಿಂಗ್ ಅಂತ ಮಾಯಾನಗರಿಗೆ ಹಾರಿದ್ದಾರೆ. ಅಲ್ಲಿ, ಜಾನ್ ಅಬ್ರಹಾಂ ಮತ್ತು ಕರೀನಾ ಕಪೂರ್ ಜೊತೆ ಕ್ಲೋಸ್ ಆಗಿರುವ ವಿನಯ್ ಇತ್ತೀಚೆಗಷ್ಟೇ ನಿಧಿ ಸುಬ್ಬಯ್ಯ ಜೊತೆ ಕಾಣಿಸಿಕೊಂಡಿದ್ದಾರೆ. [ಅರೆ ವಾಹ್! ಜಾನ್ ಜೊತೆ 3G ಮೆಗಾ ಪವರ್ ಸ್ಟಾರ್]

Picture perfect; Vinay Rajkumar and Nidhi Subbaiah in Mumbai

ವಿನಯ್ ಮತ್ತು ನಿಧಿ ಸುಬ್ಬಯ್ಯ ಜೊತೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಜಿಲೇಬಿಯಂತೆ ಸೇಲ್ ಆಗುತ್ತಿದೆ. ಫೋಟೋ ನೋಡಿದ ತಕ್ಷಣ ಕಥೆ ಕಟ್ಟಬೇಕಾಗಿಲ್ಲ. [ಅಲ್ಲು ಅರ್ಜುನ್ ಜೊತೆ ವಿನಯ್ ಗ್ರ್ಯಾಂಡ್ ಪಾರ್ಟಿ]

ವಿನಯ್ ಮತ್ತು ನಿಧಿ ಸುಬ್ಬಯ್ಯ ಒಳ್ಳೆ ಫ್ರೆಂಡ್ಸ್. ಮುಂಬೈನಲ್ಲೇ ಇಬ್ಬರೂ ಇರುವುದರಿಂದ ಮೀಟ್ ಮಾಡಿ ಡಿನ್ನರ್ ಮಾಡಿದ್ದಾರೆ ಅಷ್ಟೆ. ವಿನಯ್ ಹೊಸ ಚಿತ್ರಕ್ಕೆ ನಿಧಿ ಸುಬ್ಬಯ್ಯ ವಿಶ್ ಮಾಡಿದ್ದಾರೆ. ನೀವೂ ಒಮ್ಮೆ ಫೋಟೋ ನೋಡಿ ಸುಮ್ಮನ್ನಾಗಿ.

English summary
Vinay Rajkumar and Nidhi Subbaiah are clicked hanging out in Mumbai. Check out the picture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada