»   » 'ವಜ್ರಕಾಯ'ದಲ್ಲಿ ಸೆಂಚುರಿ ಸ್ಟಾರ್ ಜೊತೆ ರಾಕಿಂಗ್ ಸ್ಟಾರ್?!

'ವಜ್ರಕಾಯ'ದಲ್ಲಿ ಸೆಂಚುರಿ ಸ್ಟಾರ್ ಜೊತೆ ರಾಕಿಂಗ್ ಸ್ಟಾರ್?!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರ ಸುದ್ದಿಯಾಗುತ್ತಿರುವುದು ಒಂದೆರಡು ವಿಶೇಷತೆಗಳಿಂದಲ್ಲ. ಶಿವಣ್ಣನ ಎಂಟ್ರಿ ಸಾಂಗ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್, ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ, ಕಾಲಿವುಡ್ ನ ಶಿವಕಾರ್ತಿಕೇಯನ್ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿ ಗಾಂಧಿನಗರದಲ್ಲಿ ಧೂಳೆಬ್ಬಿಸಿದ್ದರು.

ಇದೆಲ್ಲವನ್ನೂ ಇದೇ 'ಫಿಲ್ಮಿಬೀಟ್ ಕನ್ನಡ' ನೀವು ಓದಿದ್ದೀರಾ. ಇದೀಗ 'ವಜ್ರಕಾಯ' ಅಡ್ಡದಿಂದ ಬಂದಿರುವ ಹೊಚ್ಚ ಹೊಸ ಫೋಟೋ ಇಲ್ಲಿದೆ ನೋಡಿ....


picture-perfect-yash-and-shivarajkumar-together-on-the-sets-of-vajrakaya

ಯೆಸ್, ರಾಕಿಂಗ್ ಸ್ಟಾರ್ ಯಶ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ವಜ್ರಕಾಯ' ಸೆಟ್ ನಲ್ಲಿ ಒಟ್ಟಾಗಿ ತೆಗೆಸಿಕೊಂಡಿರುವ ಫೋಟೋ ಇದು.


ವಾವ್....! ಇಬ್ಬರು ಒಟ್ಟಾಗಿ ಆಕ್ಟ್ ಮಾಡ್ತಿದ್ದಾರಾ..? ಅಂತ ನಮ್ಮನ್ನ ಕೇಳ್ಬೇಡಿ. ಯಾಕಂದ್ರೆ, ಈ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರ ಇಲ್ಲ. ನಿರ್ದೇಶಕ ಹರ್ಷ ಕೂಡ ಎಲ್ಲಾ ಸಸ್ಪೆನ್ಸ್ ನಲ್ಲಿಟ್ಟಿದ್ದಾರೆ.


ಎಲ್ಲಾ ಸ್ಟಾರ್ ಗಳು ಒಟ್ಟಾಗಿ ಕುಣಿದು ಕುಪ್ಪಳಿಸಿದ ಹಾಡಿಗೂ, ಯಶ್ ಗೂ ಯಾವುದೇ ಸಂಬಂಧ ಇಲ್ಲ. ಅದು ಬಿಟ್ಟು 'ವಜ್ರಕಾಯ' ಚಿತ್ರದಲ್ಲಿ ಯಶ್ ಗೆ ಸ್ಪೆಷಲ್ ರೋಲ್ ಇದ್ಯಾ? ಗೊತ್ತಿಲ್ಲ. ಆದ್ರೆ, 'ವಜ್ರಕಾಯ' ಸೆಟ್ ಗೆ ಯಶ್ ಭೇಟಿ ಕೂಟ್ಟಿರೋದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ['ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...]


yash

ಈ ಹಿಂದೆ 'ಧೀರ ರಣವಿಕ್ರಮ' ಶೂಟಿಂಗ್ ಸ್ಪಾಟ್ ಗೂ ಯಶ್ ಭೇಟಿ ನೀಡಿ ಅಭಿಮಾನಿಗಳ ಕಣ್ಣರಳಿಸಿದ್ದರು. ಇಲ್ಲೂ ಅದೇ ರೀತಿ ಸ್ನೇಹಪೂರ್ವಕವಾಗಿ ವಿಸಿಟ್ ಹಾಕಿದ್ರೆ, ಅಚ್ಚರಿ ಇಲ್ಲ.


'ಭಜರಂಗಿ' ಚಿತ್ರದ ನಂತ್ರ ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ ನಲ್ಲಿ ರೆಡಿಯಾಗುತ್ತಿರುವ ಚಿತ್ರ 'ವಜ್ರಕಾಯ'. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ 'ವಜ್ರಕಾಯ' ಟಾಪ್ ನಲ್ಲಿದೆ. ಒಂದು ವೇಳೆ ಇದೇ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಒಂದಾಗಿದ್ದರೆ, ಅವರ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.

English summary
Rocking Star Yash was spotted recently on the sets of Vajrakaya starring Shivarajkumar. It is still not clear whether Yash is playing cameo role in Vajrakaya directed by A.Harsha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada