For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಸಿನಿಮಾ ನೋಡುತ್ತಾರಂತೆ ಪ್ರಧಾನಿ ನರೇಂದ್ರ ಮೋದಿ?

  By ಫಿಲ್ಮಿಬೀಟ್ ಡೆಸ್ಕ್
  |

  ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ದೇಶಾದ್ಯಂತ ಅಷ್ಟೇ ಅಲ್ಲ, ವಿಶ್ವದಲ್ಲಿ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲಿ ಎಲ್ಲಾ ಕಡೆ ಫೇಮಸ್ ಆಗಿದೆ. ಸಿನಿಮಾ ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. 'ಕಾಂತಾರ' ಭಾರತೀಯ ಚಿತ್ರರಂಗದ ಬೆಸ್ಟ್ ಸಿನಿಮಾಗಳಲ್ಲೊಂದು ಅಂತ ಸರ್ಟಿಫಿಕೇಟ್ ನೀಡುತ್ತಿದ್ದಾರೆ.

  'ಕಾಂತಾರ' ಸಿನಿಮಾವನ್ನು ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ಜನರು ನೋಡಿ ಆನಂದಿಸುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲಿ ಸಿನಿಮಾ ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ 'ಕಾಂತಾರ' ಅಭಿಮಾನಿಗಳನ್ನು ಖುಷಿ ಪಡಿಸುವ ಸುದ್ದಿಯೊಂದು ಹರಿದಾಡುತ್ತಿದೆ.

  ಪ್ರಧಾನಿ ಮೋದಿಯಿಂದ 'ಕಾಂತಾರ' ಸಿನಿಮಾ ವೀಕ್ಷಣೆ?

  'ಕಾಂತಾರ' ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂ ನೀಡುತ್ತಿದ್ದಾರೆ. ಆಚಾರ-ವಿಚಾರಗಳು ಬೇರೆ ಇದ್ದರೂ, ಅದನ್ನೆಲ್ಲಾ ಮರೆತು ಸಿನಿಮಾ ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ರಿಲೀಸ್ ಆದಲ್ಲಿಂದಲೂ ಈ ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ 'ಕಾಂತಾರ' ಸಿನಿಮಾ ನೋಡುತ್ತಾರೆ ಅನ್ನೋ ಚರ್ಚೆ ಕೂಡ ಆಗುತ್ತಿದೆ.

  ನರೇಂದ್ರ ಮೋದಿ ನೆವೆಂಬರ್ 14 ರಂದು 'ಕಾಂತಾರ' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಜೊತೆ ಮೋದಿ ಸಿನಿಮಾ ನೋಡಲು ವೇದಿಕೆ ಸಜ್ಜಾಗಿದೆ ಅನ್ನೋದು ಸದ್ಯದ ಸುದ್ದಿ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇದೂವರೆಗೂ ರಿಷಬ್ ಶೆಟ್ಟಿಯಾಗಲಿ, ನಿರ್ಮಾಣ ಸಂಸ್ಥೆಯಾಗಲಿ ಅಥವಾ ಪ್ರಧಾನಿ ಕಚೇರಿಯಿಂದ ಸ್ಪಷ್ಟತೆ ಸಿಕ್ಕಿಲ್ಲ.

  ನವೆಂಬರ್‌ನಲ್ಲಿ ಕರ್ನಾಟಕಕ್ಕೆ ಮೋದಿ!

  ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಹೀಗಾಗಿ ಮೋದಿ ನವೆಂಬರ್‌ನಲ್ಲಿ ಮತ್ತೆ ಕರ್ನಾಟಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾಂತಾರ ಸಿನಿಮಾವನ್ನು ವೀಕ್ಷಿಸಬಹುದು ಎಂದು ಅಂದಾಜಿಸಲಾಗಿದೆ.

  PM Naredra Modi to watch Kantara movie with Rishabh Shetty Oon Nov 14th

  ಇನ್ನು 'ಕಾಂತಾರ' ಸಿನಿಮಾ ಕೇವಲ ಕರ್ನಾಟಕದಲ್ಲಿಯೇ 100 ಕೋಟಿ ರೂಪಾಯಿಯನ್ನು ಕಲೆಹಾಕಿದೆ. ಇನ್ನೊಂದು ಕಡೆ ತೆಲುಗಿನಲ್ಲಿ ಸುಮಾರು 16 ಕೋಟಿ ರೂಪಾಯಿ ಈಗಾಗಲೇ ಕಲೆಕ್ಷನ್ ಮಾಡಿದ್ದು, ಹಿಂದಿಯಲ್ಲೂ ಉತ್ತಮ ಗಳಿಕೆ ಕಾಣುತ್ತಿದೆ ಎನ್ನಲಾಗಿದೆ.

  English summary
  PM Naredra Modi to watch Kantara movie with Rishabh Shetty Oon Nov 14th, Know More,
  Wednesday, October 19, 2022, 23:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X