For Quick Alerts
  ALLOW NOTIFICATIONS  
  For Daily Alerts

  ಯುಗಾದಿ ಹಬ್ಬದ ಪ್ರಯುಕ್ತ ಬಂದ ತಾರೆಯರ ಹೊಸ ಲುಕ್ ಗಳಿವು

  |

  ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ಚಿತ್ರಪ್ರಿಯರಿಗೆ ಭರಪೂರ ಮನಂರಜನೆ ಸಿಕ್ಕಿದೆ. ಹಬ್ಬ ಅಂದ್ರೆನೆ ಸಂಭ್ರಮ ಅಭಿಮಾನಿಗಳಿಗೆ ಈ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡಿದೆ ಕನ್ನಡ ಚಿತ್ರರಂಗ. ಅಂದ್ರೆ, ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಹೊಸ ಚಿತ್ರಗಳ ಹೊಸ ಲುಕ್ ಮತ್ತು ಪೋಸ್ಟರ್ ಗಳು ರಿಲೀಸ್ ಆಗಿವೆ.

  ಹಬ್ಬದೂಟದ ಜೊತೆಗೆ ನೆಚ್ಚಿನ ನಟನಟಿಯರ ಹೊಸ ಲುಕ್ ಮತ್ತು ಟೀಸರ್ ರಿಲೀಸ್ ಮಾಡುವ ಮೂಲಕ ಸಡಗರ ಹೆಚ್ಚಿಸಿದೆ. ಈಗಾಗಲೆ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ, ಧ್ರುವ ಸರ್ಜಾ ಅಭಿನಯದ ಪೊಗರು, ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರದ ಲುಕ್ ರಿವೀಲ್ ಆಗಿದೆ.

  ಇದರ ಜೊತೆಗೆ ಇನ್ನು ಸಾಕಷ್ಟು ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗುವ ಸಾಧ್ಯತೆ ಇದೆ. ಯುಗಾದಿ ಹಬ್ಬಕ್ಕೆ ಕನ್ನಡ ಚಿತ್ರರಂಗದಿಂದ ಅಭಿಮಾನಿಗಳಿಗೆ ಸಿಕ್ಕ ಟ್ರೀಟ್ ಏನು? ನೆಚ್ಚಿನ ನಟಿಯರ ಹೊಸ ಲುಕ್ ಹೇಗಿದೆ? ಮುಂದೆ ಓದಿ..

  'ಪೊಗರು' ಚಿತ್ರದ ಲುಕ್ ರಿಲೀಸ್

  'ಪೊಗರು' ಚಿತ್ರದ ಲುಕ್ ರಿಲೀಸ್

  ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಹೊಸ ಲುಕ್ ಯುಗಾದಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಮತ್ತು ದಾಡಿ ಬಿಟ್ಟಿರುವ ಧ್ರುವ ಸರ್ಜಾ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಪೋಸ್ಟರ್ ನಲ್ಲಿ ನಟೋರಿಯಸ್ ಎಂದು ಬರೆಯಲಾಗಿದೆ. ಈ ಪೋಸ್ಟರ್ ನೋಡುತ್ತಿದ್ದರೆ ಚಿತ್ರದಲ್ಲಿ ಧ್ರುವ ನೆಗಿಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. 'ಪೊಗರು' ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

  'ದೇವಕಿ'ಯಾಗಿ ಪ್ರಿಯಾಂಕಾ ಎಂಟ್ರಿ

  'ದೇವಕಿ'ಯಾಗಿ ಪ್ರಿಯಾಂಕಾ ಎಂಟ್ರಿ

  ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಚಿತ್ರದ ಲುಕ್ ಕೂಡ ಯುಗಾದಿ ಹಬ್ಬದ ಗಿಫ್ಟಾಗಿ ಅಭಿಮಾನಿಗಳಿಗೆ ಸಿಕ್ಕಿದೆ. ಈಗಾಗಲೆ ಪುಟ್ಟ ಟೀಸರ್ ಮೂಲಕ ಚಿತ್ರ ಪ್ರೇಕ್ಷಕರ ಮನಗೆದ್ದಿರುವ 'ದೇವಕಿ' ಹಬ್ಬದ ಪ್ರಯುಕ್ತ ರಕ್ತ ಸಿಕ್ತವಾಗಿರುವ ಪ್ರಿಯಾಂಕಾ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಪ್ರಿಯಾಂಕಾ ಪುತ್ರಿ ಕೂಡ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಲೋಹಿತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದೇವಕಿ' ಸದ್ಯದಲ್ಲೆ ಚಿತ್ರರಂಗಕ್ಕೆ ಬರಲಿದೆ

  Kavacha Review : ಅಂಧನ ಜೀವನದ ಅಂದವಾದ ಸಿನಿಮಾ

  ಪೊಲೀಸ್ ಆಫೀಸರ್ ಆಗಿ ಬಂದ ಶಿವಣ್ಣ

  ಪೊಲೀಸ್ ಆಫೀಸರ್ ಆಗಿ ಬಂದ ಶಿವಣ್ಣ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಗನ್ ಹಿಡಿದು ಓಡುತ್ತಿರುವ ಫೋಟೋ ಶಿವಣ್ಣನ ಅಭಿಮಾನಿಗಳಿಗೆ ಕಿಕ್ ಏರಿಸುತ್ತಿದೆ. ಸಾಹಸ ನಿರ್ದೇಶಕ ರವಿ ವರ್ಮ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ರುಸ್ತುಂ' ಚಿತ್ರದ ಟ್ರೈಲರ್ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.

  'ದೇವಕಿ' ಟೀಸರ್ ಹಿಟ್ : ಉಪ್ಪಿ ಮಗಳನ್ನು ಸ್ವಾಗತಿಸಿದ ಸ್ಟಾರ್ ಗಳು

  'ಏಕಲವ್ಯ' ಆಗಿ ಬಂದ ರಾಣಾ

  'ಏಕಲವ್ಯ' ಆಗಿ ಬಂದ ರಾಣಾ

  ಏಕಲವ್ಯ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಚಿತ್ರ. ಪ್ರೇಮ್ ನಿರ್ದೇಶದಲ್ಲಿ ಮೂಡಿ ಬರುತ್ತಿರುವ 'ಏಕಲವ್ಯ' ಚಿತ್ರದ ರಾಣಾ ಲುಕ್ ಕೂಡ ರಿಲೀಸ್ ಆಗಿದೆ. ಸ್ಮೋಕ್ ಮಾಡುತ್ತಿರುವ ರಾಣಾ ಗೆಟಪ್ 'ಏಕಲವ್ಯ' ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  English summary
  Kannada actor Druva Sarja starrer 'Pogaru', priyanka upendra starrer devaki movie poster and shivaraj kumar starrer rustum movie poster released on ugadi special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X