For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ', 'ಪೈಲ್ವಾನ್' ಟ್ರೇಲರ್ ಗಳನ್ನು ಹಿಂದೆ ಹಾಕಿದ 'ಪೊಗರು'

  |
  Pogaru Dialogue Trailer Got 10 Million Views | FILMIBEAT KANNADA

  'ಪೊಗರು' ಸಿನಿಮಾದ ಟ್ರೇಲರ್ ಯೂ ಟ್ಯೂಬ್ ನಲ್ಲಿ ಬಿರುಗಾಳಿಯಂತೆ ಮುಂದು ಸಾಗುತ್ತಿದೆ. ದಿನದಿಂದ ದಿನಕ್ಕೆ ಟ್ರೇಲರ್ ಹೆಚ್ಚು ಹೆಚ್ಚು ಹಿಟ್ಸ್ ಪಡೆದುಕೊಳ್ಳುತ್ತಿದೆ. ಇದೀಗ ಟ್ರೇಲರ್ ಗೆ 10 ಮಿಲಿಯನ್ ಹಿಟ್ಸ್ ಸಿಕ್ಕಿದೆ.

  ಕನ್ನಡದಲ್ಲಿ ಇತ್ತೀಚಿಗೆ ಬಂದ ದೊಡ್ಡ ಸಿನಿಮಾಗಳ ಟ್ರೇಲರ್ ದಾಖಲೆಯನ್ನು 'ಪೊಗರು' ಅಳಿಸಿ ಹಾಕಿದೆ. ದರ್ಶನ್ ಅಭಿನಯದ 'ಕುರುಕ್ಷೇತ್ರ' ಹಾಗೂ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಟ್ರೇಲರ್ ಅನ್ನು 'ಪೊಗರು' ಹಿಂದೆ ಹಾಕಿದೆ.

  ಧ್ರುವ ಸರ್ಜಾ ಪವರ್ ಪ್ರೂವ್ ಮಾಡಿದ 'ಪೊಗರು': 18 ಗಂಟೆಗಳಲ್ಲಿ ಇಷ್ಟೊಂದು ಹಿಟ್ಸ್ಧ್ರುವ ಸರ್ಜಾ ಪವರ್ ಪ್ರೂವ್ ಮಾಡಿದ 'ಪೊಗರು': 18 ಗಂಟೆಗಳಲ್ಲಿ ಇಷ್ಟೊಂದು ಹಿಟ್ಸ್

  'ಕುರುಕ್ಷೇತ್ರ' ಹಾಗೂ 'ಪೈಲ್ವಾನ್' ಟ್ರೇಲರ್ ಗಳು 4 ಮಿಲಿಯನ್ ಹಿಟ್ಸ್ ಪಡೆದುಕೊಂಡಿದ್ದು, 'ಪೊಗರು' 10 ಮಿಲಿಯನ್ ವೀಕ್ಷಣೆ ಪಡೆದಿದೆ. 'ಯುವರತ್ನ' ಟೀಸರ್ ಸಹ 3 ಮಿಲಿಯನ್ ಹಿಟ್ಸ್ ಪಡೆಯಲು ಮಾತ್ರ ಸಾಧ್ಯವಾಗಿದೆ. ಆನಂದ್ ಆಡಿಯೋದಲ್ಲಿ ಟ್ರೇಲರ್ ಅಕ್ಟೋಬರ್ 23 ರಂದು ಬಿಡುಗಡೆಯಾಗಿತ್ತು.

  'ಪೊಗರು' ಧ್ರುವ ಸರ್ಜಾ ಅಭಿನಯದ ಸಿನಿಮಾವಾಗಿದೆ. ಸದ್ಯಕ್ಕೆ ಚಿತ್ರದ ಮಾಸ್ ಡೈಲಾಗ್ ಗಳು ತುಂಬಿಕೊಂಡಿರುವ ಟ್ರೇಲರ್ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಟ್ರೇಲರ್ ಬಹಳ ಇಷ್ಟ ಆಗಿದ್ದು, ಈ ಮಟ್ಟಕ್ಕೆ ಹಿಟ್ ಆಗಿದೆ. ಆದರೆ, ಟ್ರೇಲರ್ ಎಲ್ಲ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತಿದೆ.

  'ಪೊಗರು' ಚಿತ್ರೀಕರಣ ಜಾಗಕ್ಕೆ ಬೆಂಕಿ ಬಿದ್ದಿಲ್ಲ : ಚಿತ್ರತಂಡದ ಸ್ಪಷ್ಟನೆ'ಪೊಗರು' ಚಿತ್ರೀಕರಣ ಜಾಗಕ್ಕೆ ಬೆಂಕಿ ಬಿದ್ದಿಲ್ಲ : ಚಿತ್ರತಂಡದ ಸ್ಪಷ್ಟನೆ

  ನಂದ ಕಿಶೋರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಬರಲಿದೆ. ರಶ್ಮಿಕಾ ಮಂದಣ್ಣ ಸಿನಿಮಾ ನಾಯಕಿಯಾಗಿದ್ದಾರೆ.

  English summary
  Kannada actor Dhruva Sarja and Rashmika Mandanna starrer Pogaru dialogue trailer got 10 million views.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X