twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ಸರ್ಜಾ ಅಭಿಮಾನಿಗಳ ವಿರುದ್ಧ 58 ಪ್ರಕರಣ ದಾಖಲು

    |

    ಇತ್ತೀಚೆಗಷ್ಟೆ ಹೃದಯಾಘಾತದಿಂದ ಮರಣಕ್ಕೀಡಾದ ನಟ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Recommended Video

    ಚಿರು ಸರ್ಜಾ ಅಭಿಮಾನಿಗಳ ವಿರುದ್ಧ 4 ಪೊಲೀಸ್ ಠಾಣೆಗಳಲ್ಲಿ ಕಂಪ್ಲೇಂಟ್ | Case against Chiranjeevi Sarja Fans

    ಚಿರಂಜೀವಿ ಸರ್ಜಾ ಅವರ ಅಂತಿಮ ದರ್ಶನದ ವೇಳೆ ಸಾಮಾಜಿಕ ಅಂತರ ಪಾಲಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ನಾಲ್ಕು ಪ್ರತ್ರೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

    ಹೃದಯ ಕಲಕುತ್ತದೆ ಚಿರಂಜೀವಿ ಸರ್ಜಾ ಕುರಿತ ಮೇಘನಾ ರಾಜ್ ಬರಹಹೃದಯ ಕಲಕುತ್ತದೆ ಚಿರಂಜೀವಿ ಸರ್ಜಾ ಕುರಿತ ಮೇಘನಾ ರಾಜ್ ಬರಹ

    ಚಿರಂಜೀವಿ ಸರ್ಜಾ ಅಂತಿಮ ದರ್ಶನದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಕೊರೊನಾ ತಡೆ ನಿಯಮಾವಳಿಗಳನ್ವಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುವ ಕಾರಣ ಪ್ರಕರಣ ದಾಖಲಿಲಾಗಿದೆ.

    ಒಟ್ಟು 58 ಪ್ರಕರಣ ದಾಖಲಾಗಿವೆ

    ಒಟ್ಟು 58 ಪ್ರಕರಣ ದಾಖಲಾಗಿವೆ

    ತಲಘಟ್ಟಪುರ, ಬನಶಂಕರಿ, ಜಯನಗರ, ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಒಟ್ಟು 58 ಪ್ರಕರಣಗಳು ಇದೇ ಘಟನೆ ಸಂಬಂಧ ದಾಖಲಾಗಿವೆ. ಕೊರೊನಾ ರೋಗ ನಿಯಂತ್ರಣ ನಿಯಮ ಉಲ್ಲಂಘನೆ ಅಡಿಯಲ್ಲಿ ಈ ಪ್ರಕರಣಗಳು ದಾಖಲಾಗಿವೆ.

    ನೂರಾರು ಅಭಿಮಾನಿಗಳು ಸೇರಿದ್ದರು

    ನೂರಾರು ಅಭಿಮಾನಿಗಳು ಸೇರಿದ್ದರು

    ಜೂನ್ 7 ರ ಭಾನುವಾರ ಚಿರಂಜೀವಿ ಸರ್ಜಾ ಅವರು ನಿಧನವಾಗಿದ್ದರು. ಅದೇ ದಿನದಂದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿರಂಜೀವಿ ಮೃತದೇಹವಿದ್ದ ಆಸ್ಪತ್ರೆ ಬಳಿ ನೂರಾರು ಮಂದಿ ಅಭಿಮಾನಿಗಳು ಸೇರಿದ್ದರು. ಬನಶಂಕರಿ ಠಾಣಾ ವ್ಯಾಪ್ತಿಯ ಚಿರಂಜೀವಿ ಸರ್ಜಾ ಮನೆಯ ಬಳಿ ಅಂತಿಮ ದರ್ಶನದ ವೇಳೆಯೂ ಸಾಕಷ್ಟು ಮಂದಿ ಅಭಿಮಾನಿಗಳು ಸೇರಿದ್ದರು.

    .ಮಗುವಾಗಿ ನೀನು ನಮ್ಮ ಮಡಿಲಿಗೆ ಬಂದ್ಬಿಡು ಕಂದ: ಕುಟುಂಬಸ್ಥರಿಂದ ಚಿರುಗೆ ಭಾವನಾತ್ಮಕ ಪತ್ರ.ಮಗುವಾಗಿ ನೀನು ನಮ್ಮ ಮಡಿಲಿಗೆ ಬಂದ್ಬಿಡು ಕಂದ: ಕುಟುಂಬಸ್ಥರಿಂದ ಚಿರುಗೆ ಭಾವನಾತ್ಮಕ ಪತ್ರ

    ಪ್ರಕರಣ ದಾಖಲಿಸಲು ಅನುಮತಿ ಕೋರಲಾಗಿತ್ತು

    ಪ್ರಕರಣ ದಾಖಲಿಸಲು ಅನುಮತಿ ಕೋರಲಾಗಿತ್ತು

    ಚಿರಂಜೀವಿ ಸರ್ಜಾ ಮೃತದೇಹದ ಅಂತಿಮ ಯಾತ್ರೆ ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಡೆಯಿತು ಈ ವೇಳೆಯೂ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲದ ಅನುಮತಿ ಕೋರಲಾಗಿತ್ತು, ಅನುಮತಿ ದೊರೆತ ನಂತರ ನಾಲ್ಕೂ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

    ಸರ್ಜಾ ಕುಟುಂಬದ ವಿರುದ್ಧ ಹಿತಾಸಕ್ತಿ ಅರ್ಜಿ ದಾಖಲು

    ಸರ್ಜಾ ಕುಟುಂಬದ ವಿರುದ್ಧ ಹಿತಾಸಕ್ತಿ ಅರ್ಜಿ ದಾಖಲು

    ಚಿರು ಅಂತಿಮ ದರ್ಶನ ಹಾಗೂ ಅಂತಿಮ ಕಾರ್ಯ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲವೆಂದು ವ್ಯಕ್ತಿಯೊಬ್ಬರು ಸರ್ಜಾ ಕುಟುಂಬದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಇದರ ವಿಚಾರಣೆ ನಡೆಯಬೇಕಿದೆ.

    ಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿ: ಕುಟುಂಬದಿಂದ ಮಾಧ್ಯಮಗಳಿಗೆ ಮನವಿಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿ: ಕುಟುಂಬದಿಂದ ಮಾಧ್ಯಮಗಳಿಗೆ ಮನವಿ

    ವಿಡಿಯೋ ಚಿತ್ರೀಕರಣ ಮಾಡಿರುವ ಪೊಲೀಸರು

    ವಿಡಿಯೋ ಚಿತ್ರೀಕರಣ ಮಾಡಿರುವ ಪೊಲೀಸರು

    ಚಿರಂಜೀವಿ ಸರ್ಜಾ ಅಂತಿಕಕಾರ್ಯ ಕನಕಪುರ ರಸ್ತೆ ಬಳಿಯ ನೆಲಗುಳಿ ಗ್ರಾಮದಲ್ಲಿ ನಡೆಯಿತು. ಅಂತಿಮ ದರ್ಶನ, ಅಂತಿಮ ಕಾರ್ಯ ಸೇರಿ ಪ್ರತಿಹಂತದ ವಿಡಿಯೋ ಚಿತ್ರೀಕರಣವನ್ನು ಪೊಲೀಸರು ಮಾಡಿದ್ದಾರೆ. ತನಿಖೆ ನಂತರ ಚಾರ್ಜ್‌ಶೀಟ್ ಸಲ್ಲಿಕೆ ಆಗಲಿದೆ.

    ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್‌ಗೆ ಗೌರವ ಸಲ್ಲಿಸಿದ ಗೂಗಲ್ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್‌ಗೆ ಗೌರವ ಸಲ್ಲಿಸಿದ ಗೂಗಲ್

    English summary
    Police registered cases against Chiranjeevi Sarja's fans for not maintaining social distance while last rites of Chiranjeevi Sarja.
    Thursday, June 18, 2020, 15:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X