For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಪುನೀತ್ ಅಭಿಮಾನಿಗಳಿಗೆ ಲಾಠಿ ಏಟು

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಚಿತ್ರ ಇಂದು (ಡಿಸೆಂಬರ್ 20) ರಾಜ್ಯದಾದ್ಯಂತ ತೆರೆಕಂಡಿದೆ. ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ಒಂದು ಸಣ್ಣ ಅಹಿತಕರ ಘಟನೆ ಮೈಸೂರಿನಿಂದ ವರದಿಯಾಗಿದೆ.

  ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ಪುನೀತ್ ಅಭಿಮಾನಿಗಳು ತುಂಬು ಉತ್ಸಾಹದಿಂದಲೇ ಬಂದರು. 'ಯಾರೇ ಕೂಗಾಡಲಿ' ಚಿತ್ರವೇನೋ ಶುರುವಾಯಿತು. ಆದರೆ ಇದ್ದಕ್ಕಿದ್ದಂತೆ ವಿದ್ಯುತ್ ಕೈಕೊಟ್ಟಿದೆ. ಶೋ ನಿಂತಿದೆ. ಎಷ್ಟು ಹೊತ್ತು ಕಾದರೂ ಪ್ರದರ್ಶನ ಶುರುವಾಗಲಿಲ್ಲ.

  ಪುನೀತ್ ಅಭಿಮಾನಿಗಳ ಪಿತ್ತ ಕೆರಳಿದೆ. ಆವೇಶಭರಿತ ಕೆಲವರು ಸಂಗಮ್ ಚಿತ್ರಮಂದಿರದ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ಮನವೊಲಿಸಲು ಪ್ರಯತ್ನಿಸಿ ಕಡೆಗೆ ಲಘು ಲಾಠಿ ಪ್ರಹಾರಕ್ಕೆ ಮೊರೆಹೋಗಬೇಕಾಯಿತು.

  ಬಳಿಕ ಶೋ ಆರಂಭಿಸಿದ ಕಾರಣ ಅಭಿಮಾನಿಗಳು ಸ್ವಲ್ಪ ಕೂಲ್ ಆದರು. ಸಾಮಾನ್ಯವಾಗಿ ಪುನೀತ್ ಚಿತ್ರಗಳು ಬಿಡುಗಡೆಯಾದಾಗ ಟಿಕೆಟ್ ಸಿಗಲಿಲ್ಲ ಎಂದೋ ಇನ್ನೊಂದು ಕಾರಣಕ್ಕೋ ಲಾಠಿ ಪ್ರಹಾರವಾಗುವುದು ಸಾಮಾನ್ಯ. ಸಮುದ್ರ ಖಣಿ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ಭಾವನಾ, ಯೋಗೀಶ್, ಸಿಂಧು ಲೋಕನಾಥ್, ನಿವೇದಿತಾ, ರವಿಶಂಕರ್, ಮಾಳವಿಕಾ, ಗಿರೀಶ್ ಕಾರ್ನಾಡ್ ಮುಂತಾದವರಿದ್ದಾರೆ. ಚಿತ್ರ ವಿಮರ್ಶೆ ಓದಿ. (ಒನ್ಇಂಡಿಯಾ ಕನ್ನಡ)

  English summary
  Due to power failure Puneet Rajkumar's 'Yaare Koogadali' show cancels in Mysore Sangam theatre. Some furious fans are breaks down the window glass and create tense in the theatre premises. At this moment police resorted lathicharge to disperse the fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X