»   » ಪ್ರಿಯಕರನ ಕೊಲೆ ಆರೋಪದಲ್ಲಿ ಬೆಂಗಳೂರು ನಟಿ

ಪ್ರಿಯಕರನ ಕೊಲೆ ಆರೋಪದಲ್ಲಿ ಬೆಂಗಳೂರು ನಟಿ

By: ರವಿಕಿಶೋರ್
Subscribe to Filmibeat Kannada

ಹಣಕ್ಕಾಗಿ ತನ್ನ ಪ್ರಿಯಕರನನ್ನು ಕೊಲೆ ಮಾಡಿಸಿದ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ನಟಿ ಶ್ರುತಿ ಚಂದ್ರಲೇಖಾ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆಕೆಯೇ ಕೊಲೆ ಮಾಡಿಸಿ ಈಗ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ.

ಪೊಲೀಸರು ತಮ್ಮ ಹಿಂದೆ ಬಿದ್ದಿದ್ದಾರೆ ಎಂಬ ವಿಷಯವನ್ನು ಗ್ರಹಿಸಿದ ಶ್ರುತಿ ಚಂದ್ರಲೇಖಾ ಈಗ ನಾಪತ್ತೆಯಾಗಿದ್ದಾರೆ. ಹತ್ಯೆಗೆ ಗುರಿಯಾದ ನಟ ಎಸ್. ರೊನಾಲ್ಡ್ ಪೀಟರ್ ಪ್ರಿನ್ಜೋ (35). ಕೆಲವು ಚಿತ್ರಗಳಲ್ಲಿ ಸಹ ನಟನಾಗಿ ಅಭಿನಯಿಸಿದ್ದಾರೆ ಪೀಟರ್.

ತಮಿಳುನಾಡಿನ ತಿರುನೇಲ್ ವೇಳಿ ಜಿಲ್ಲೆಯ ಪೀಟರ್ ಅವರಿಗೆ ಬೆಂಗಳೂರು ಮೂಲದ ಶ್ರುತಿ ಚಂದ್ರಲೇಖಾ ಪರಿಚಯವಾಗಿ ಇವರಿಬ್ಬರೂ ಚೆನ್ನೈನ ಮದುರವಾಯಲ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಜನವರಿ 13ರಂದು ತಿರುನೇಲ್ ವೇಳಿಯಿಂದ ಚೆನ್ನೈಗೆ ಬರುತ್ತಿರಬೇಕಾದರೆ ಪೀಟರ್ ಕಾಣೆಯಾಗಿದ್ದರು.

ಪೀಟರ್ ಕಾಣೆಯಾಗಿದ್ದಾರೆ ಎಂದು ಶ್ರುತಿ ಅವರು ಮದುರವಾಯಲ್ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 1ರಂದು ದೂರು ನೀಡುತ್ತಾರೆ. ತನ್ನ ಸಹೋದರ ಕಾಣೆಯಾಗಿದ್ದಾನೆ ಎಂದು ಪೀಟರ್ ಅಣ್ಣ ಜಸ್ಟಿನ್ ಅವರು ಪಾಳಯಂಕೊಟ್ಟೈ ಪೊಲೀಸರಿಗೆ ದೂರು ನೀಡಿರುತ್ತಾರೆ.

ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಅಚ್ಚರಿ

ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಅಚ್ಚರಿ ವಿಷಯ ಗೊತ್ತಾಗುತ್ತದೆ. ಶ್ರುತಿ ಅವರೇ ತನ್ನ ಪ್ರಿಯಕರ ಪೀಟರ್ ನನ್ನು ಹತ್ಯೆ ಮಾಡಿಸಿ ಪಾಳಯಂಕೋಟೈನಲ್ಲಿ ಆತನ ಶವವನ್ನು ಹೂತಿಟ್ಟಿರುವ ಮಾಹಿತಿ ಸಿಗುತ್ತದೆ.

ಪೊಲೀಸರ ಬಂಧನದಲ್ಲಿ ಹಂತಕರು

ಬಾಡಿಗೆ ಹಂತಕರ ಮೂಲಕ ಶ್ರುತಿ ಅವರು ಈ ಹತ್ಯೆಯನ್ನು ಮಾಡಿಸಿದ್ದಾಗಿ ಪೊಲೀಸರು ವಿಚಾರಣೆಯಲ್ಲಿ ದೃಢಪಡುತ್ತದೆ. ಬಾಡಿಗೆ ಹಂತಕರಾದ ಪ್ರಿನ್ಸನ್, ರಾಜ್, ವಿಜಯ್ ಹಾಗೂ ರಫೀಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಹೂತಿಟ್ಟಿದ್ದ ಶವ ಹೊರತೆಗೆದ ಪೊಲೀಸರು

ಆಶೀರ್ವಾದ್ ನಗರದಲ್ಲಿ ಹೂತಿಟ್ಟಿದ್ದ ಪೀಟರ್ ಶವವನ್ನು ಹೊರತೆಗೆದು ಶವಪರೀಕ್ಷೆ ನಿರ್ವಹಿಸಿದರು ಪೊಲೀಸರು. ಈ ಪ್ರಕರಣದ ಪ್ರಮುಖ ಆರೋಪಿ ಜಾನ್ ಪ್ರಿನ್ಸೆಸ್ ನನ್ನು ಪೊಲೀಸರು ಈಗಾಗಲೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವ್ಯಾಪರದಲ್ಲಿ ನಷ್ಟ ಉಂಟಾಗಿದ್ದೇ ಕೊಲೆಗೆ ಕಾರಣ

ತಾನು, ಪೀಟರ್, ಉಮಾಚಂದ್ರನ್ ಕಲೆತು ಆನ್ ಲೈನ್ ವ್ಯಾಪಾರವೊಂದರಲ್ಲಿ ನಗದು ಡಿಪಾಜಿಟ್ ಮಾಡಿದ್ದೆವು. ಆದರೆ ಅದರಲ್ಲಿ ನಷ್ಟ ಉಂಟಾದ ಕಾರಣ ಪೀಟರ್ ನಮ್ಮನ್ನು ಬಿಟ್ಟು ಬೆಂಗಳೂರಿನಲ್ಲಿ ಸೆಟ್ಲ್ ಆಗಿ ಕೋಟ್ಯಾಂತರ ರುಪಾಯಿ ಸಂಪಾದಿಸಿದ್ದಾಗಿ ಜಾನ್ ಪ್ರಿನ್ಸಸ್ ಪೊಲೀಸರಿಗೆ ತಿಳಿಸಿದ್ದಾನೆ.

ಪೀಟರ್ ಹಾಗೂ ಶ್ರುತಿ ನಡುವೆ ಭಿನ್ನಾಭಿಪ್ರಾಯ

ಶ್ರುತಿ ಜೊತೆಗೆ ಪೀಟರ್ ಗೆ ಪರಿಚಯವಾಗಿ ಮದುರವಾಯಲ್ ನಲ್ಲಿ ಸಂಸಾರ ಮಾಡುತ್ತಿದ್ದ. ಏತನ್ಮಧ್ಯೆ ಪೀಟರ್ ಗೆ ಕೆಲವು ಯುವಕರ ಪರಿಚಯವಾಗಿದೆ. ಇದರಿಂದ ಪೀಟರ್ ಹಾಗೂ ಶ್ರುತಿ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಪೀಟರ್ ಬಳಿ ಇರುವ ಕೋಟ್ಯಾಂತರ ರುಪಾಯಿ ಲಪಟಾಯಿಸಬೇಕೆಂದು ಶ್ರುತಿ ಪ್ಲಾನ್ ಮಾಡುತ್ತಾರೆ. ಜಾನ್ ಪ್ರಿನ್ಸಸ್ ನನ್ನು ಭೇಟಿಯಾಗಿ ಪೀಟರ್ ನನ್ನು ಮುಗಿಸಲು ಸ್ಕೆಚ್ ಹಾಕುತ್ತಾರೆ.

ಪೊಲೀಸರ ವಿಚಾರಣೆಯಲ್ಲಿ ಹೊರಬಿದ್ದ ಸತ್ಯಗಳು

ತಾನೂ ಪೀಟನ್ ನಿಂದ ನಷ್ಟ ಹೋಗಿದ್ದ ಹಿನ್ನೆಲೆಯಿಂದ ಪ್ರಿನ್ಸಸ್ ಇದಕ್ಕೆ ಒಪ್ಪಿ ಪೀಟರ್ ನನ್ನು ಕಿಡ್ನಾಪ್ ಮಾಡಿ ಬಳಿಕ ಆತನ ಕತ್ತುಹಿಸುಕಿ ಸಾಯಿಸುತ್ತಾರೆ. ಉಮಾಚಂದ್ರನ್, ಪ್ರಿನ್ಸನ್, ರಾಜ್ ಸಹಾಯದೊಂದಿಗೆ ಪೀಟರ್ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಪಾಳಯಂಕೊಟ್ಟೈನ ಆಶಿರ್ವಾದಂ ಎಂಬ ಪ್ರದೇಶದಲ್ಲಿ ಹೂಳುತ್ತಾರೆ. ಪೊಲೀಸರ ವಿಚಾರಣೆಯಲ್ಲಿ ಇದಿಷ್ಟು ವಿವರಗಳು ಹೊರಬಿದ್ದಿವೆ. ಈಗ ಶ್ರುತಿ ಅವರು ತಲೆಮರೆಸಿಕೊಂಡಿರುವುದು ಆಕೆಯ ಮೇಲೆ ಅನುಮಾನ ಇನ್ನಷ್ಟು ಬಲವಾಗಿದೆ.

English summary
Police are on the lookout for two persons, including Bangalore based small-time actress Shruti Chandralekha, for allegedly murdering a businessman at Maduravoyal in Chennai, and burying the body here. The police said S. Ronald Peter Prinzo (35) of Parappaadi–Ilankulam Main Road, who was running computer centres at a few places, wound up the business after he suffered a huge loss.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada