For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ ಜನ್ಮದಿನ: ವರನಟನನ್ನು ಸ್ಮರಿಸಿದ ರಾಜಕೀಯ ಗಣ್ಯರು

  |

  ಏಪ್ರಿಲ್ 24 ಕನ್ನಡ ಸಿನಿ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಇಂದು ಡಾ.ರಾಜ್ ಅವರ 92ನೇ ವರ್ಷದ ಜನ್ಮದಿನಾಚರಣೆಯ ಸಡಗರ. ಅಭಿಮಾನಿಗಳು ಮತ್ತು ಗಣ್ಯರು ಶುಭ ಕೋರುವ ಮೂಲಕ ರಾಜ್ ಸ್ಮರಣೆ ಮಾಡಿದ್ದಾರೆ. ಪ್ರತಿವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಾವಳಿಯ ಪರಿಣಾಮ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದಿದೆ.

  Recommended Video

  ಅಪ್ಪನಿಗೆ Puneeth Rajkumar ರಿಂದ ಹೃದಯಸ್ಪರ್ಶಿ ಗೀತೆಯ ಕೊಡುಗೆ | Filmibeat Kannada

  ಕರ್ಫ್ಯೂ ನಡುವೆಯೂ ಅಭಿಮಾನಿಗಳು ಸರಳವಾಗಿ ರಾಜ್ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕವೇ ಡಾ.ರಾಜ್ ಗೆ ಶುಭಾಶಯ ಕೋರುತ್ತಿದ್ದಾರೆ. ಸಿನಿ ಗಣ್ಯರು ಮಾತ್ರವಲ್ಲದೆ ರಾಜಕೀಯ ಗಣ್ಯರು ವಿಶ್ ಮಾಡುತ್ತಿದ್ದಾರೆ. ಮುಂದೆ ಓದಿ..

  ಡಾ. ರಾಜ್ ಜನ್ಮದಿನದಂದು ಹಂಸಲೇಖರಿಂದ ಗಿರಿರಾಜ್ ಕೃತಿ ಲೋಕಾರ್ಪಣೆಡಾ. ರಾಜ್ ಜನ್ಮದಿನದಂದು ಹಂಸಲೇಖರಿಂದ ಗಿರಿರಾಜ್ ಕೃತಿ ಲೋಕಾರ್ಪಣೆ

  ಸಿಎಂ ಯಡಿಯೂರಪ್ಪ

  ಸಿಎಂ ಯಡಿಯೂರಪ್ಪ

  'ಭಾರತೀಯ ಚಿತ್ರರಂಗ ಕಂಡ ಮೇರು ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ಡಾ.ರಾಜ್ ಕುಮಾರ್ ಜನ್ಮದಿನದಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು. ನಾಡು ಎಂದೂ ಮರೆಯದ ಸಾಂಸ್ಕೃತಿಕ ಶಕ್ತಿಯಾಗಿ ಬೆಳೆದು, ತಮ್ಮ ಕಲಾ ಪ್ರೌಢಿಮೆಯ ಜೊತೆಗೆ ಹೃದಯವಂತಿಕೆಯಿಂದ ಜನಮನ ಗೆದ್ದ ಡಾ.ರಾಜ್ ಅವರು ನಾಡು ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ' ಎಂದು ಎಂದು ರಾಜ್ಯದ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  ಹೆಚ್.ಡಿ ದೇವೇಗೌಡ

  ಹೆಚ್.ಡಿ ದೇವೇಗೌಡ

  'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ, ಗಾನ ಗಂಧರ್ವ ಡಾ. ರಾಜ್ ಕುಮಾರ್ ಅವರ ಜನ್ಮದಿನೋತ್ಸವದ ಶುಭಾಶಯಗಳು. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿದ್ದಾರೆ' ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಶುಭಕೋರಿದ್ದಾರೆ.

  ಆರೋಗ್ಯ ಸಚಿವ ಸುಧಾಕರ್

  ಆರೋಗ್ಯ ಸಚಿವ ಸುಧಾಕರ್

  'ಇಂದು ವರನಟ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್ ಕುಮಾರ್ ರವರ ಜನ್ಮ ದಿನ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಹೀಗೆ ವಿಭಿನ್ನ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ವಿಶಿಷ್ಟ ಛಾಪನ್ನು ಮೂಡಿಸಿರುವ ಅಣ್ಣಾವ್ರು ಕನ್ನಡಿಗರ ಜನಮಾನಸದಲ್ಲಿ ಅಜರಾಮರಾಗಿದ್ದಾರೆ.' ಎಂದಿದ್ದಾರೆ.

  ಡಾ.ರಾಜ್ ಕುಮಾರ್ ಜನ್ಮದಿನ: ಧ್ರುವತಾರೆಯನ್ನು ನೆನೆದ ಸಿನಿ ತಾರೆಯರುಡಾ.ರಾಜ್ ಕುಮಾರ್ ಜನ್ಮದಿನ: ಧ್ರುವತಾರೆಯನ್ನು ನೆನೆದ ಸಿನಿ ತಾರೆಯರು

  ಬಿ.ಸಿ ಪಾಟೀಲ್

  ಬಿ.ಸಿ ಪಾಟೀಲ್

  'ಅತ್ಯದ್ಭುತ ನಟನೆ ಹಾಗೂ ಗಾಯನದಿಂದ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಮೇರು ನಟ, ಪದ್ಮಭೂಷಣ ಡಾ. ರಾಜಕುಮಾರ ಅವರ ಜನ್ಮದಿನೋತ್ಸವದಂದು ಅಗಣಿತ ಪ್ರಣಾಮಗಳು.' ಎಂದು ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.

  ಶ್ರೀರಾಮುಲು

  ಶ್ರೀರಾಮುಲು

  'ಸಾಮಾಜಿಕ ಸಂದೇಶವುಳ್ಳ ಸಿನಿಮಾ ಮೂಲಕ ಒಂದಿಡೀ ಪೀಳಿಗೆಗೆ ಮೌಲ್ಯಗಳನ್ನು ತಿಳಿಸಿದವರು, ಪೌರಾಣಿಕ, ಪ್ರೇಮಕತೆ, ಹಾಸ್ಯ, ಪೋಷಕ ಪಾತ್ರ. ಹೀಗೆ ಯಾವುದೇ ಪಾತ್ರವಾದರೂ ಸರಿ ಜೀವ ತುಂಬಿ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದ ನಮ್ಮೆಲ್ಲರ ಅಣ್ಣಾವ್ರು ಶ್ರೀ ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು' ಎಂದು ಟ್ವೀಟ್ ಮಾಡಿದ್ದಾರೆ.

  English summary
  Politicians Remember Dr Rajkumar On his Birth Anniversary.
  Saturday, April 24, 2021, 15:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X