twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕಪ್: ರಾಜ್ ಹೆಸರಲ್ಲಿ ಎಲ್ಲೆಲ್ಲೂ 'ರಾಜ್'ಕೀಯ

    By ಜೀವನರಸಿಕ
    |

    2012ರ ನಂತರ ರಾಜ್ ಕಪ್ ನಡೆದಿರಲಿಲ್ಲ. ನಡೆದಿರಲಿಲ್ಲ ಯಾಕೆ ನಡೆಸೋ ತಾಕತ್ತು ಯಾರಿಗೂ ಇಲ್ಲ. ಅಂತಹಾ ರಿಸ್ಕನ್ನ ಯಾರೂ ತೆಗೆದುಕೊಳ್ಳೋಕೆ ತಯಾರಿಲ್ಲ. ಆದ್ರೆ ನೃತ್ಯ ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಶ್ ಗೆ ಆ ಛಾತಿಯಿದೆ.

    ಈಗ ನಿರ್ಮಾಪಕ ಸ್ನೇಹಿ ಒಕ್ಕೂಟವನ್ನೂ ಮಾಡಿರೋ ರಾಜೇಶ್ ಕಷ್ಟಪಟ್ಟು ರಾಜ್ ಕಪ್ ನಡೆಸುತ್ತಿದ್ದಾರೆ. ಬೇರೆಯರಿಗೆ ಅಷ್ಟು ರಿಸ್ಕು ತೆಗೆದುಕೊಳ್ಳೋ ಧೈರ್ಯ ಮತ್ತು ಟೈಮು ಇದ್ದಿದ್ರೆ 2013ರಲ್ಲಿ ರಾಜ್ ಕಪ್ ನಡೆಯುತ್ತಿತ್ತು. ಅಂತಹಾ ಪ್ರಯತ್ನವನ್ನ ಯಾರೂ ಮಾಡಿಲ್ಲ. [ಬೆಂಗಳೂರಲ್ಲಿ ರಾಜ್ ಕಪ್ 2 ದಿನಗಳ ರಂಗಿನಾಟ]

    ಆದ್ರೆ ಈ ವರ್ಷ ರಾಜ್ ಕಪ್ ಪಂದ್ಯಾವಳಿಯನ್ನ ರಾಜೇಶ್ ಅಂಡ್ ಟೀಂ ಕಷ್ಟಪಟ್ಟು ನಡೆಸ್ತಿದೆ. ಇತ್ತೀಚೆಗೆ ಹಾಸನದಲ್ಲಿ ಎರಡು ದಿನ ರಾಜ್ ಕಪ್ ಅಷ್ಟೇನೂ ಸುದ್ದಿಯಾಗದೆ ನಡೆದು ಹೋಗಿದೆ. ಆದ್ರೆ ರಾಜ್ ಕಪ್ ನೊಳಗೆ ರಾಜಕೀಯವೇ ಹೆಚ್ಚಾಗಿದೆ ಅನ್ನೋ ಸುದ್ದಿ ಈಗ ಹೊರಬಂದಿದೆ.

    ಸಿಸಿಎಲ್ ತಂಡದ ಒಬ್ಬ ಸದಸ್ಯರೂ ಇರಲಿಲ್ಲ

    ಸಿಸಿಎಲ್ ತಂಡದ ಒಬ್ಬ ಸದಸ್ಯರೂ ಇರಲಿಲ್ಲ

    ಈ ವರ್ಷದ ರಾಜ್ ಕಪ್ ನಲ್ಲಿ ಕಿಚ್ಚ ಸುದೀಪ್ ತಂಡವಾದ ಕರ್ನಾಟಕ ಬುಲ್ಡೋಜರ್ಸ್ ನ ಯಾವ ಆಟಗಾರರೂ ಇರಲಿಲ್ಲ. ಇದಕ್ಕೆ ಕಿಚ್ಚನೇ ಕಾರಣ ಅನ್ನೋ ಗಾಸಿಪ್ ಜೋರಾಗಿದೆ.

    ಸುದೀಪ್ ಬೇಡ ಅಂದ್ರಾ..

    ಸುದೀಪ್ ಬೇಡ ಅಂದ್ರಾ..

    ಸಿಸಿಎಲ್ ತಂಡದಲ್ಲಿದ್ದ ಸದಸ್ಯರಿಗೆ ರಾಜ್ ಕಪ್ ನಲ್ಲಿ ಭಾಗವಹಿಸದಂತೆ ಸುದೀಪ್ ಮನವಿ ಮಾಡಿದ್ರು ಅನ್ನೋ ಸುದ್ದಿ ಕೂಡ ಗಾಂಧಿನಗರದಲ್ಲಿ ಸುಳಿದಾಡ್ತಿದೆ.

    ಯಾಕೆ ಹೀಗಾಯ್ತು..

    ಯಾಕೆ ಹೀಗಾಯ್ತು..

    2012ರಲ್ಲಿ ರಾಜ್ ಕಪ್ ನಡೆದಿದ್ದು ಗುಲ್ಬರ್ಗ, ಬಿಜಾಪುರ, ಬಾಗಲಕೋಟೆಯಲ್ಲಿ. ಬೆಂಗಳೂರಿಂದ ಯಾವುದೋ ಮೂಲೆಯಲ್ಲಿದ್ದ ಪಂದ್ಯಾವಳಿಗೇನೇ ಸ್ಟಾರ್ ಗಳ ದಂಡು ಹರಿದುಬಂದಿತ್ತು. ಆದ್ರೆ ಹತ್ತಿರದ ಹಾಸನಕ್ಕೆ ಸ್ಟಾರ್ ಗಳೇ ಬಂದಿರಲಿಲ್ಲ.

    ಪುನೀತ್ ತಂಡದ ಕಿರಿಕ್ಕು

    ಪುನೀತ್ ತಂಡದ ಕಿರಿಕ್ಕು

    ಪವರ್ ಸ್ಟಾರ್ ಪ್ರತಿನಿಧಿಸೋ ಮಾಧ್ಯಮದ ಆಟಗಾರರು ಈ ಬಾರಿ ವೃತ್ತಿಪರ ಆಟಗಾರರನ್ನ ತಂಡದಲ್ಲಿ ಆಡಿಸ್ತಿದ್ದಾರೆ ಅನ್ನೋ ವಿರೋಧವೂ ವ್ಯಕ್ತವಾಯ್ತು. ಮಾಧ್ಯಮದವ್ರು ರಾಜ್ ಕಪ್ ನಲ್ಲಿ ಆಡೋದಾದ್ರೆ ಕೇವಲ ಸಿನಿಮಾ ವರದಿಗಾರರ ತಂಡವನ್ನ ಮಾತ್ರ ಆಡಿಸಲಿ ಅಂತ ಉಳಿದ ತಂಡಗಳು ಆಗ್ರಹಿಸಿದ್ವು.

    ಇದ್ದಿದ್ದೇ ತಕರಾರು

    ಇದ್ದಿದ್ದೇ ತಕರಾರು

    ಪುನೀತ್ ತಂಡದವ್ರು ಮಾತ್ರ ಅಲ್ಲ. ಈ ಬಾರಿ ರಕ್ಷಿತ್ ಶೆಟ್ಟಿ ನಾಯಕತ್ವದ ತಂಡದಲ್ಲಿ ಕೂಡ ಒಬ್ಬ ಡಿವಿಷನ್ ಲೆವೆಲ್ ಆಟಗಾರ ಇದ್ದಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಯ್ತು.

    ಮನರಂಜನೆಯ ಆಟದಲ್ಯಾಕೆ ಸ್ಪರ್ಧೆ?

    ಮನರಂಜನೆಯ ಆಟದಲ್ಯಾಕೆ ಸ್ಪರ್ಧೆ?

    ರಾಜ್ ಕಪ್ ಆಡೋದು ಸದಾ ಬಿಜಿ ಇರೋ ಚಿತ್ರರಂಗದವ್ರು ಒಂದೆರೆಡು ದಿನ ಒಟ್ಟಾಗಿ ಸೇರೋಕೆ. ಇಲ್ಲೂ ಸ್ಪರ್ಧೆ, ಜಿದ್ದಾಜಿದ್ದಿ ಯಾಕಪ್ಪ ಬೇಕು, ಮನರಂಜನೆ ಕೊಟ್ರೆ ಸಾಕು ಅಂತಾರೆ ಹಿರಿಯರು.

    ಹೀರೋಯಿನ್ಗಳು ಒಬ್ಬರೂ ಇಲ್ಲ

    ಹೀರೋಯಿನ್ಗಳು ಒಬ್ಬರೂ ಇಲ್ಲ

    ರಾಜ್ ಕಪ್ ಅಂದ್ರೆ ದಿನಕ್ಕೆ ನಾಲ್ಕು ನಾಲ್ಕು ಹೀರೋಯಿನ್ ಗಳು ಪ್ರೇಕ್ಷಕರನ್ನ ಚಿಯರ್ ಮಾಡೋಕೆ ಇರ್ತಿದ್ರು. ಕಳೆದ ರಾಜ್ ಕಪ್ ನಲ್ಲಿ ರಾಗಿಣಿ ಸೇರಿದಂತೆ ಹಲವು ತಾರೆಯರು ಅಲ್ಲೆಲ್ಲೋ ಇರೋ ಗುಲ್ಬರ್ಗ, ಬಿಜಾಪುರಕ್ಕೆ ಬಂದಿದ್ರು. ಆದ್ರೆ ಈ ಬಾರಿ ಪಕ್ಕದಲ್ಲೇ ಇರೋ ಹಾಸನದಲ್ಲಿ ಕಣ್ಣಿಗೂ ಕಾಣಲಿಲ್ಲ.

    ಸ್ಟಾರ್ ಕ್ಯಾಪ್ಟನ್ ಗಳು ಹೆಸರಿಗಷ್ಟೇ

    ಸ್ಟಾರ್ ಕ್ಯಾಪ್ಟನ್ ಗಳು ಹೆಸರಿಗಷ್ಟೇ

    ಒಂದು ತಂಡಕ್ಕೆ ಉಪೇಂದ್ರ ಮತ್ತೊಂದು ತಂಡಕ್ಕೆ ಶಿವಣ್ಣ, ಮಗದೊಂದು ತಂಡಕ್ಕೆ ಯಶ್, ಹೀಗೆ ಹೆಸರು ದೊಡ್ಡ ದೊಡ್ಡ ಸ್ಟಾರ್ ಗಳದ್ದು. ಆದ್ರೆ ಭಾನುವಾರ ಕೂಡ ಯಾವ ನಟನೂ 225 ಕಿಲೋಮೀಟರ್ ದೂರದ ಹಾಸನಕ್ಕೆ ಬರೋ ಮನಸು ಮಾಡಲಿಲ್ಲ. ಪುನೀತ್ ಒಬ್ಬರನ್ನ ಬಿಟ್ರೆ.

    English summary
    The real politics behind Dr Raj cup T20 Cricket Tournament. Dr. Raj Cup T20 Cricket Tournament league matches held in Bengaluru on 7 and 21st December. In all, eight teams, led by film actors, will be participating in the two-day cricket carnival.
    Friday, December 5, 2014, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X