»   » ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಬಂದ ಪೂಜಾಗಾಂಧಿ

ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಬಂದ ಪೂಜಾಗಾಂಧಿ

Posted By:
Subscribe to Filmibeat Kannada

ಒಂದಷ್ಟು ದೂರ ರಾಜಕೀಯ ಹಾದಿಯಲ್ಲಿ ಸಾಗಿಬಂದಿರುವ ನಟಿ ಪೂಜಾಗಾಂಧಿ ಈಗ ಮತ್ತೆ ಬಣ್ಣದ ಲೋಕದ ಕಡೆಗೆ ಹೆಜ್ಜೆ ಹಾಕಿದ್ದಾರೆ. 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿನ ಕಣ್ಣಲ್ಲೆ ಯಾಕೆ ನೆಕ್ತೀಯಾ ಎಂಬ ಐಟಂ ಹಾಡಿಗೆ ಮಾದಕವಾಗಿ ತಮ್ಮ ಸೊಂಟ ಬಳುಕಿಸಿದ್ದರು. ಅದಾದ ಬಳಿಕ ಪೂಜಾಗಾಂಧಿ ಸುದ್ದಿಯೂ ಇಲ್ಲ ಸದ್ದೂ ಇಲ್ಲ.

ಈಗವರು ಕನ್ನಡ ಬೆಳ್ಳಿಪರದೆಗೆ ಮರಳಿದ್ದಾರೆ. ಈ ಬಾರಿ ವೈನಾಗಿ ವೈನ್ ಗ್ಲಾಸ್ ಹಿಡಿದೇ ಬಂದಿರುವುದು ವಿಶೇಷ. ಈ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ಕಿಕ್ ಗ್ಯಾರಂಟಿ ಎಂಬಂತಾಗಿದೆ. ಆದರೆ ಈ ಬಾರಿ ತೀರಾ 'ದಂಡುಪಾಳ್ಯ' ಚಿತ್ರದ ದುಂಡು ಗುಂಡು ತುಂಡಿನ ಪಾತ್ರಕ್ಕೆ ಹೋಲಿಸುವಂತಿಲ್ಲ.

ಇದು ಪೂಜಾಗಾಂಧಿ ಅವರ ಹಲವು ವರ್ಷಗಳ ಪೂಜಾ ಫಲ. ಅಂದರೆ ಅವರು ಚಿತ್ರ ನಿರ್ಮಾಪಕಿ ಆಗಬೇಕೆಂದು ಬಹಳ ವರ್ಷಗಳಿಂದ ಕನಸು ಕಂಡಿದ್ದರು. ಕಡೆಗೂ ಅವರ ಆಸೆ ನೆರವೇರಿದೆ. ತಮ್ಮ ಚೊಚ್ಚಲ ನಿರ್ಮಾಣ ಚಿತ್ರದ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರಕ್ಕೆ 'ಅಭಿನೇತ್ರಿ' ಎಂದು ಹೆಸರಿಟ್ಟಿದ್ದಾರೆ.

ಅಭಿನೇತ್ರಿ ಚಿತ್ರದ ಫೋಟೋಗಳನ್ನು ನೋಡಿದರೆ ಅರುವತ್ತು, ಎಪ್ಪತ್ತರದ ದಶಕದ ಖ್ಯಾತ ತಾರೆ ಕಲ್ಪನಾ ನೆನಪಾಗುತ್ತಾರೆ. ಚಿತ್ರದ ಶೀರ್ಷಿಕೆಯೂ ಅಭಿನೇತ್ರಿ ಎಂದಿಟ್ಟಿರುವುದು ಅನ್ವರ್ಥಕವಾಗಿದೆ. ಕೆಲವು ಫೋಟೋಗಳು ಕಪ್ಪು ಬಿಳುಪು, ಇನ್ನೊಂದಿಷ್ಟು ಈಸ್ಟ್ ಮನ್ ಕಲರ್ ನಲ್ಲಿವೆ. ಸ್ಲೈಡ್ ಗಳಲ್ಲಿ ನೋಡಿ.

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ಮಾಪಕಿ

ಈ ಚಿತ್ರದ ಮೂಲಕ ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ಮಾಪಕಿ ಸಿಕ್ಕಂತಾಗಿದೆ. ಅವರ ನಿರ್ಮಾಣದಲ್ಲಿ ಒಳ್ಳೆಯ ಸದಭಿರುಚಿಯ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.

ಮದುವೆ ವಿಚಾರ ಸದ್ಯಕ್ಕೆ ಪಕ್ಕಕ್ಕಿಟ್ಟ ತಾರೆ

ತಮ್ಮ ಸ್ವಂತ ನಿರ್ಮಾಣ ಚಿತ್ರಕ್ಕೆ ಶ್ರೀಕೃಷ್ಣ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಂತೂ ಪೂಜಾಗಾಂಧಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾಗಿದೆ. ಆದರೆ ಮದುವೆ ವಿಚಾರವನ್ನು ಮಾತ್ರ ಸದ್ಯಕ್ಕೆ ಪಕ್ಕಕ್ಕಿಟ್ಟಿದ್ದಾರೆ.

ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಅವರ ಚೊಚ್ಚಲ ಹೋಂ ಬ್ಯಾನರ್ ಚಿತ್ರಕ್ಕೆ ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಉಳಿದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.

ಪೂಜಾಗಾಂಧಿ ಮುಖದಲ್ಲಿ ಈಗ ಹೊಸ ಉತ್ಸಾಹ

ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದು ಹಾಗೂ ಮದುವೆ ಸ್ವಪ್ನಗಳು ಚದುರಿ ಹೋದ ಘಟನೆಗಳನ್ನು ಮರೆತು ಅವರು ಈಗ ಹೊಸ ಉತ್ಸಾಹದಿಂದ ಮರಳಿದ್ದಾರೆ.

ಮಧುಬಾಲಾ ನೆನಪಿಸುವ ಪೂಜಾಗಾಂಧಿ 'ಅಭಿನೇತ್ರಿ'

ಈ ಫೋಟೋವನ್ನು ನೋಡಿದರೆ ಬಾಲಿವುಡ್ ಚಿತ್ರರಂಗದ ಖ್ಯಾತ ಅಭಿನೇತ್ರಿ ಮಧುಬಾಲಾ ನೆನಪಾಗುವುದಿಲ್ಲವೇ? ಹೀಗೆ ಇನ್ನೇನೇನೋ ನೆನಪಿಸುತ್ತಾರೆ ತಮ್ಮ ವಿಭಿನ್ನ ಗೆಟಪ್ ಗಳ ಮೂಲಕ.

English summary
Kannada actress Pooja Gandhi unveiled the first look of her debut production movie 'Abhinetri'. Recently the actress registered her home banner in Karnataka Film Chamber of Commerce. Sree Krishna Productions is the name of her production house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada