»   » ಪೂಜಾ ಗಾಂಧಿ-ಆನಂದ್ ಜೋಡಿ ಮತ್ತೆ ಒಂದಾದರೆ?

ಪೂಜಾ ಗಾಂಧಿ-ಆನಂದ್ ಜೋಡಿ ಮತ್ತೆ ಒಂದಾದರೆ?

Posted By:
Subscribe to Filmibeat Kannada

ನಿಶ್ಚಿತಾರ್ಥವಾದಷ್ಟು ವೇಗದಲ್ಲೇ ಸಂಬಂಧವೂ ಮುರಿದುಬಿದ್ದ ಬಳಿಕ ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಮತ್ತು ತೀರ್ಥಹಳ್ಳಿಯ ಉದ್ಯಮಿ ಆನಂದ್ ಗೌಡ ಜೋಡಿ ಮತ್ತೆ ಒಂದಾದರೆ? ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು.

Pooja Gandhi - Arun Gowda couple together again in Hyderabad

ತಮ್ಮ ತಮ್ಮ ಕುಟುಂಬ ವರ್ಗದವರನ್ನು ಬೆನ್ನುಗಿಟ್ಟುಕೊಂಡು ಪರಸ್ಪರರು ತೀರಾ ಹೀನಾಮಾನವಾಗಿ ಬೈದಾಡಿಕೊಂಡ ದೃಶ್ಯಗಳು ಜನ ಮಾನಸದಲ್ಲಿ ಇನ್ನೂ ಚಲಿಸುತ್ತಿರುವಾಗಲೇ ಕೆಟ್ಟದ್ದನ್ನು ಮರೆತು ಈ ಜೋಡಿ ಮತ್ತೆ ಒಂದಾಗಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿತ್ತು.

ಇದಕ್ಕೆ ಪುಷ್ಟಿ ನೀಡಿರುವುದು ಮತ್ತು ಸಾಕ್ಷಿಯಾಗಿರುವುದು ಹೈದರಾಬಾದಿನ ಖ್ಯಾತ ಪಂಚತಾರಾ ಹೋಟೆಲ್. ಹೌದು ಇವರಿಬ್ಬರೂ ಶನಿವಾರ ಒಟ್ಟಿಗೇ ಈ ಹೋಟೆಲಿನಲ್ಲಿ ಉಳಿದುಕೊಂಡಿದ್ದಾರೆ.

ಪೂಜಾ ತಮ್ಮ ತಾಯಿಯ ಜತೆಗೆ ಹೈದರಾಬಾದಿಗೆ ಬರಬಹುದು ಎಂದು ಭಾವಿಸಿದ್ದ ಚಿತ್ರತಂಡಕ್ಕೆ ಪೂಜಾ ಮತ್ತು ಆನಂದ್ ಜೋಡಿ ಕಣ್ಣಿಗೆ ಬಿದ್ದಿದ್ದು ಆಶ್ಚರ್ಯವನ್ನುಂಟುಮಾಡಿದೆ. ನಿಶ್ಚಿತಾರ್ಥ ಮುರಿದುಬಿದ್ದ ನಂತರ ಮತ್ತೆ ಇಬ್ಬರೂ ಒಂದಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗೆ ಇದು ಸಾಕ್ಷಿಯಾಗಿದೆ.

ಏನಾಯಿತೆಂದರೆ ಕನ್ನಡದ 'ದಂಡುಪಾಳ್ಯ' ತೆಲುಗು ಭಾಷೆಯಲ್ಲೂ ಕಾಣಿಸಿಕೊಂಡಿದೆ. ಅದರ ಪ್ರಚಾರಾರ್ಥ ಕಾರ್ಯಕ್ರಮಕ್ಕೆಂದು ಪೂಜಾ ಗಾಂಧಿ ಕಳೆದ ವಾರ ಹೈದಾರಾಬಾದಿಗೆ ತೆರಳಿದ್ದರು. ಅವರ ಜತೆ ಚಿತ್ರ ತಂಡವೂ ತೆರಳಿತ್ತು. ಆಗ ಆ ಚಿತ್ರ ತಂಡದ ಸದಸ್ಯರ ಕಣ್ಣಿಗೆ ಈ ಜೋಡಿ ಪಂಚತಾರಾ ಹೋಟೆಲಿನಲ್ಲಿ ಕಣ್ಣಿಗೆ ಬಿದ್ದಿದೆ. ತಂಡದ ಸದಸ್ಯರು ಪೂಜಾ ಜತೆಗಿರುವುದು ಆನಂದ್ ಗೌಡರೇ ಅಲ್ಲವಾ ಎಂದು ಕಣ್ಣರಳಿಸಿ, ಖಾತ್ರಿ ಪಡಿಸಿಕೊಂಡಿದ್ದಾರೆ.

ಪೂಜಾ ಗಾಂಧಿ ಮತ್ತು ಆನಂದ್ ಗೌಡ ಅವರ ನಿಶ್ಚಿತಾರ್ಥದ ದಿನಾಂಕ : 2012 ನವೆಂಬರ್ 15
ಪೂಜಾ ಗಾಂಧಿ - ಆನಂದ್ ಗೌಡ ನಿಶ್ಚಿತಾರ್ಥ ಮುರಿದುಬಿದ್ದ ದಿನಾಂಕ : 2012 ಡಿಸೆಂಬರ್ 19
ಪೂಜಾ-ಆನಂದ್ ಹೈದರಾಬಾದಿನಲ್ಲಿ ಚಿತ್ರತಂಡದ ಕಣ್ಣಿಗೆ ಬಿದ್ದ ದಿನಾಂಕ: 2013 ಜನವರಿ 26.

English summary
Pooja Gandhi Anand Gowda couple are seen together again in Hyderabad on Jan 26 by the Dandupalya crew. The actress and the businessman were engaged on November 15, 2012, and a month later on December 19, Arun had announced the breakup.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada