»   » ಬಿಡುಗಡೆ ಹೊಸ್ತಿಲಲ್ಲಿ ಪೂಜಾ ಗಾಂಧಿ 'ದಂಡುಪಾಳ್ಯ'

ಬಿಡುಗಡೆ ಹೊಸ್ತಿಲಲ್ಲಿ ಪೂಜಾ ಗಾಂಧಿ 'ದಂಡುಪಾಳ್ಯ'

Posted By:
Subscribe to Filmibeat Kannada
<ul id="pagination-digg"><li class="next"><a href="/news/dandu-palya-movie-release-29-june-2012-066222.html">Next »</a></li></ul>

ಸಿಕ್ಕಾಪಟ್ಟೆ ಸೆನ್ಸೇಷನ್ ಮಾಡಿರುವ 'ದಂಡುಪಾಳ್ಯ' ಚಿತ್ರ ಈ ಶುಕ್ರವಾರ (29 ಜೂನ್ 2012) ಬೆಂಗಳೂರಿನ ಅಪರ್ಣಾ ಹಾಗೂ ಕರ್ನಾಟಕ ರಾಜ್ಯಾಂದ್ಯಂತ 100 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನೋಡಲು ಬಹಳಷ್ಟು ಜನರು ಕಾದಿದ್ದಾರೆ. ಅದಕ್ಕೆ ಕಾರಣ, ಮುಹೂರ್ತ ಆಚರಿಸಿಕೊಂಡ ಕಾಲದಿಂದಲೂ ಈ ಚಿತ್ರವು ಸಾಕಷ್ಟು ವಾದ-ವಿವಾದಕ್ಕೆ ತುತ್ತಾಗಿದೆ. ಪೂಜಾ ಗಾಂಧಿಯ ಬೆತ್ತಲೆ ಬೆನ್ನು ಪ್ರದರ್ಶನವಂತೂ ಎಲ್ಲೆಲ್ಲೂ ಸುದ್ದಿಯಾಗಿದೆ.

ಈ ದಂಡುಪಾಳ್ಯ ಚಿತ್ರವು ನೈಜಘಟನೆಯಾಧಾರಿತ ಚಿತ್ರವೆಂಬುದು ಎಲ್ಲರಿಗೂ ಗೊತ್ತು. ಈ ಘಟನೆ ನಡೆದಾಗ ಆಗಿದ್ದಕ್ಕಿಂತ ಹೆಚ್ಚು ಸುದ್ದಿ ಈ ಚಿತ್ರ ಸೆಟ್ಟೇರಲಿರುವ ಸುದ್ದಿಗೇ ಆಗಿದೆ. ನಂತರವಂತೂ ಆಗಾಗ ಅನಾವಶ್ಯಕ (!) ವಿವಾದವನ್ನು ಬೆನ್ನಿಗೆ ಅಂಟಿಸಿಕೊಂಡೇ ಈ ಚಿತ್ರದ ಚಿತ್ರೀಕರಣ ಮುಗಿದು ಈಗ ಬಿಡುಗಡೆ ಕಾಲ ಸಮೀಪಿಸಿದೆ.

ಶ್ರೀನಿವಾಸ ರಾಜು ನಿರ್ದೇಶನದ 'ದಂಡುಪಾಳ್ಯ' ಚಿತ್ರ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದೆ ಎಂಬುದು ಪಕ್ಕಾ ಆಗಿದ್ದರೂ ಈ ಚಿತ್ರ ಹೇಗೆ ಮೂಡಿಬಂದಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಏಕೆಂದರೆ, ದಂಡುಪಾಳ್ಯದ ನೈಜ ಘಟನೆ ನಡೆದಾಗ ಅದರ ಭೀಕರತೆ ಅನುಭವಕ್ಕೆ ಬಾರದ ಅದೆಷ್ಟೋ ಜನರು ಈ ಚಿತ್ರವನ್ನು ನೋಡಿ ಅದನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ.

ಇದೇ ಶುಕ್ರವಾರ, ಜೂನ್ 29 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಬಿಡುಗಡೆ ಸುದ್ದಿಯೇ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿದೆ. ಅಂದಮೇಲೆ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವುದು ಪಕ್ಕಾ. ಆದರೆ, ಚಿತ್ರ ಚೆನ್ನಾಗಿದ್ದರೆ ಮಾತ್ರ ಮುಂದಕ್ಕೆ ಚಿತ್ರ ಯಶಸ್ಸು ಕಾಣಬಹುದು. ಇಲ್ಲದಿದ್ದರೆ ಚಿತ್ರಮಂದಿರದಿಂದ ವಾಪಸ್ ಡಬ್ಬಾ ಸೇರಿಕೊಳ್ಳುವುದು ಇದ್ದೇ ಇದೆಯಲ್ಲ!

ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಮೊದಲ ಬಾರಿಗೆ ಇಂತಹದ್ದೊಂದು ಪಾತ್ರ ಮಾಡಿದ್ದಾರೆ. ಈ ಹೊಸ ರೀತಿಯ ಪಾತ್ರ ಸ್ವತಃ ಪೂಜಾ ಗಾಂಧಿಗೂ ಹೊಸದು. ಪಕ್ಕದ ಮನೆ ಹುಡುಗಿ ಇಮೇಜಿನ ಪೂಜಾ, ಅರೆಬೆತ್ತಲೆಯಾಗಿದ್ದು ಅವರ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ಆದರೆ ಪೂಜಾ "ಪಾತ್ರಕ್ಕೆ ಅಗತ್ಯವಿದ್ದಂತೆ ಕಾಣಿಸಿಕೊಂಡಿದ್ದೇನೆ" ಎಂದಿದ್ದಾರೆ.

ಚಿತ್ರ ಸೆನ್ಸಾರ್ ಟೇಬಲ್ ಮೇಲೆ ಹೋದಾಗ ಈ ಚಿತ್ರದ ಸಾಕಷ್ಟು ದೃಶ್ಯಕ್ಕೆ (13 ದೃಶ್ಯ..?) ಅಲ್ಲಿ ಕತ್ತರಿ ಪ್ರಯೋಗವಾಗಿದೆ ಎನ್ನಲಾಗಿದೆ. ಆದರೆ ಚಿತ್ರತಂಡದ ಕೊಟ್ಟ ಮಾಹಿತಿಯ ಪ್ರಕಾರ, ಚಿತ್ರದಲ್ಲಿದ್ದ ಕೆಲವು ಆಕ್ಷೇಪಾರ್ಹ ದೃಶ್ಯಗಳಿಗೆ ಮಾತ್ರ ಸೆನ್ಸಾರ್ ಮಂಡಳಿ 'ಕಟ್' ನಡೆದಿದೆ. ಉಳಿದಂತೆ ಚಿತ್ರ ತೀರಾ ನೈಜವಾಗಿ ಮೂಡಿಬಂದಿದೆ. ಯಾವುದೇ ಬದಲಾವಣೆ ಆಗಿಲ್ಲ.

ಈ ಚಿತ್ರದ ಮೂಲಕ ನಟಿ ಪೂಜಾ ಗಾಂಧಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮತ್ತೊಂದು ಬ್ರೇಕ್ ನಿರೀಕ್ಷಿಸುತ್ತಿದ್ದಾರೆ. 2009ರಿಂದೀಚೆಗೆ ಪೂಜಾ ನಟಿಸಿರುವ ಯಾವ ಚಿತ್ರವೂ ಹಿಟ್ ದಾಖಲಿಸಿಲ್ಲ. ಹೇಳಿಕೊಳ್ಳವಂತಹ ಮಹತ್ವವಿರುವ ಪಾತ್ರದ ಆಫರ್ ಕೂಡ ಅವರಿಗೆ ಸಿಕ್ಕಿಲ್ಲ. 'ಬಂದ ಪುಟ್ಟ ಹೋದ ಪುಟ್ಟ' ಎಂಬಂತೆ ಪೂಜಾ ಗಾಂದಿ ನಟಿಸಿದ ಚಿತ್ರಗಳು ಸಾಲುಸಾಲಾಗಿ ಚಿತ್ರಮಂದಿರಕ್ಕೆ ಬಂದು ಹಾಗೇ ವಾಪಸ್ಸಾಗಿವೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/dandu-palya-movie-release-29-june-2012-066222.html">Next »</a></li></ul>
English summary
Most sensation created movie 'Dandupalya' releases on 29th June 2012. Srinivas Raju directed in this movie, actress Pooja Gandhi is in lead role. This movie created lots of expectations and curiosity in Sandalwood audience. &#13; &#13;
Please Wait while comments are loading...