»   » ಅಮ್ಮನಾಗಿ ಬದಲಾದ ನಟಿ ಪೂಜಾಗಾಂಧಿ

ಅಮ್ಮನಾಗಿ ಬದಲಾದ ನಟಿ ಪೂಜಾಗಾಂಧಿ

Posted By:
Subscribe to Filmibeat Kannada

ನಟಿ ಪೂಜಾಗಾಂಧಿ ಅವರಿಗೆ ಆಗಲೇ ವಯಸ್ಸಾಯಿತೇ? ನೆನ್ನೆ ಮೊನ್ನೆ ತಾನೆ ಅವರು "ಕಣ್ಣಲ್ಲೆ ಯಾಕೆ ನೆಕ್ತಿಯಾ..." ಎಂದು ಮಠ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ಸೊಂಟ ಬಳುಕಿಸಿದ್ದರು.

ಈಗವರು ಚಿಕ್ಕಣ್ಣ ಆಕ್ಷನ್ ಕಟ್ ಹೇಳುತ್ತಿರುವ 'ತಿಪ್ಪಜ್ಜಿ ಸರ್ಕಲ್' ಚಿತ್ರದಲ್ಲಿ ಅಮ್ಮನಾಗಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ನೈಜ ಘಟನೆ ಆಧಾರವಾಗಿ ತೆರೆಕಾಣುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ದೇವದಾಸಿ ಪಾತ್ರದಲ್ಲಿ ಪೂಜಾಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ.


ಇಷ್ಟಕ್ಕೂ ಪೂಜಾಗಾಂಧಿ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಯಾರೆಂದರೆ ನೇಹಾ ಪಾಟೀಲ್. ಈ ಹಿಂದೆ ನೇಹಾ ಅವರು ಸಾಕಷ್ಟು ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ ಜೊತೆಗಿನ 'ಪಾರು ವೈಫ್ ಆಫ್ ದೇವದಾಸ್' ಚಿತ್ರವೂ ನಿರ್ಮಾಣ ಹಂತದಲ್ಲಿದೆ.

'ತಿಪ್ಪಜ್ಜಿ ಸರ್ಕಲ್' ಚಿತ್ರದಲ್ಲಿ ನಾನು ಪೂಜಾಗಾಂಧಿಗೆ ಮಗಳಾಗಿ ಅಭಿನಯಿಸುತ್ತಿದ್ದೇನೆ. ದೇವದಾಸಿ ಮಗಳ ಪಾತ್ರ. ಅಮ್ಮನ ದಾರಿಯಲ್ಲಿ ನಡೆಯೋಕೆ ನನಗೆ ಇಷ್ಟವಿರಲ್ಲ. ಅವರ ವಿರುದ್ಧ ತಿರುಗಿ ನಿಲ್ಲುತ್ತೇನೆ. ಮೊದಲ ಬಾರಿಗೆ ಇಂತಹ ಬೋಲ್ಡ್ ಕ್ಯಾರೆಕ್ಟರ್ ಸಿಕ್ಕಿದೆ. ಅಭಿನಯಕ್ಕೆ ಸವಾಲೊಡ್ಡುವ ಪಾತ್ರ ಎಂದಿದ್ದಾರೆ ನೇಹಾ.

ಚಿತ್ರದಲ್ಲಿ ನಾನು ಉತ್ತರ ಕರ್ನಾಟಕದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತೇನೆ. ಧಾರವಾಡ ಶೈಲಿ ಕನ್ನಡದಲ್ಲಿ ಮಾತನಾಡುತ್ತೇನೆ. ಪೂಜಾಗಾಂಧಿಗೆ ಮಗಳಾಗಿ ಅಭಿನಯಿಸುತ್ತಿರುವ ಬಗ್ಗೆ ಖುಷಿಯಾಗಿದೆ ಎನ್ನುತ್ತಾರೆ ನೇಹಾ.

ಅಂದಹಾಗೆ ನೇಹಾ ಅವರು ಕನ್ನಡದ ಪೊಲೀಸ್ ಸ್ಟೋರಿ 3, ಪರಮಶಿವ, ನಿಗೂಢ, ಫೆಬ್ರವರಿ 14, ಸ್ಟೋರಿ ಕಥೆ, ಸ್ಲಂ, ಒಲವಿನ ಓಲೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ 'ತಿಪ್ಪಜ್ಜಿ ಸರ್ಕಲ್' ನಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. (ಏಜೆನ್ಸೀಸ್)

English summary
Kannada actress Pooja Gandhi plays mother role in upcoming film Tippajji Circle. She will play a mother to Neha Patil. The film based on a real life incident, which happened in Chitradurga district.
Please Wait while comments are loading...