For Quick Alerts
  ALLOW NOTIFICATIONS  
  For Daily Alerts

  ಯಡಿಯೂರಪ್ಪ ಕೆಜೆಪಿಗೆ ಹೊಸ ತಾರಾಬಲ

  By Rajendra
  |

  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೊಸ ಪಕ್ಷ ಕರ್ನಾಟಕ ಜನತಾ ಪಕ್ಷಕ್ಕೆ (ಕೆಜೆಪಿ) ತಾರಾಬಲ ಬಂದಿದೆ. ಮೂವರು ಸಿನಿಮಾ ತಾರೆಗಳು ಕೆಜೆಪಿ ಸೇರುತ್ತಿದ್ದಾರೆ. ಕನ್ನಡ ಚಲನಚಿತ್ರ ನಟಿಯರಾದ ಶ್ರುತಿ, ಮಾಲಾಶ್ರೀ ಹಾಗೂ ಪೂಜಾಗಾಂಧಿ ಅವರು ಕೆಜೆಪಿ ಪಕ್ಷ ಸೇರುತ್ತಿರುವ ತಾರಾಮಣಿಗಳು.

  ಇದೇ ಡಿಸೆಂಬರ್ ತಿಂಗಳ 9ರಂದು ಈ ಮೂವರು ತಾರೆಗಳು ಕೆಜೆಪಿ ಕೈಹಿಡಿಯುತ್ತಿದ್ದಾರೆ. ಈ ಮೂವರು ತಾರೆಗಳು ಕೆಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದ್ದು ಯಡಿಯೂರಪ್ಪ ಪಕ್ಷಕ್ಕೆ ಹೊಸ ಉತ್ಸಾಹ, ಹುಮ್ಮಸ್ಸು ತರಲಿದ್ದಾರೆ ಎನ್ನುತ್ತವೆ ಮೂಲಗಳು.

  ಈಗಾಗಲೆ ಶ್ರುತಿ ಮತ್ತು ಪೂಜಾಗಾಂಧಿ ಅವರು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮಾಲಾಶ್ರೀ ಅವರಿಗೆ ಇದು ಚೊಚ್ಚಲ ಅನುಭವ. ಶ್ರುತಿ ಅವರು ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡು ಮಹಿಳಾ ನಿಗಮದ ಅಧ್ಯಕ್ಷರೂ ಆಗಿದ್ದರು.

  ಶ್ರುತಿ ಅವರೇನೋ ಸೆಂಟಿಮೆಂಟ್ ಪಾತ್ರಗಳಿಂದ ಮನೆಮಾತಾದವರು. ಇನ್ನು ಪೂಜಾಗಾಂಧಿ ಅವರು ಗ್ಲಾಮರ್ ಪಾತ್ರಗಳಿಗೆ ಹೆಸರಾದವರು. ಮಾಲಾಶ್ರೀ ಅವರ ವಿಚಾರಕ್ಕೆ ಬರುವುದಾದರೆ ಒಂದು ಕಾಲದ ಕನಸಿನ ರಾಣಿ. ಈಗವರು ಪಕ್ಕಾ ಮಾಸ್.

  ಈಗ ಈ ಮೂರು ತಾರೆಗಳು ಕೆಜೆಪಿಗೆ ಸೇರ್ಪಡೆಯಾಗುತ್ತಿರುವುದು ಅತ್ತ ರಾಜಕೀಯ ವಲಯದಲ್ಲಿ ಇತ್ತ ಸಿನಿಮಾ ಕ್ಷೇತ್ರದಲ್ಲಿ ಅಚ್ಚರಿಗೆ ಕಾರಣವಾಗಿದೆ. ಡಿಸೆಂಬರ್ 9ರಂದು ನಡೆಯಲಿರುವ ಕೆಜೆಪಿ ಚೊಚ್ಚಲ ಸಮಾವೇಶ ಈ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಲಿದೆ. (ಏಜೆನ್ಸೀಸ್)

  English summary
  Kannada film actresses Shruti, Pooja Gandhi and Malashri all set to join former chief minister BS Yeddyurappa's new political party Karnataka Janata Party (KJP). According to sources, the three actresses is planning to join the KJP and play a key role in Karnataka politics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X