»   » 'ಅಭಿನೇತ್ರಿ' ಚಿತ್ರ ನೋಡಲು ಪ್ರೇಕ್ಷಕರು ಮುಗಿಬೀಳ್ತಿದ್ದಾರಾ..?

'ಅಭಿನೇತ್ರಿ' ಚಿತ್ರ ನೋಡಲು ಪ್ರೇಕ್ಷಕರು ಮುಗಿಬೀಳ್ತಿದ್ದಾರಾ..?

Posted By:
Subscribe to Filmibeat Kannada

ಪೂಜಾ ಗಾಂಧಿ ನಟಿಸಿ, ನಿರ್ಮಾಣ ಮಾಡಿರುವ 'ಅಭಿನೇತ್ರಿ' ಚಿತ್ರ ಇಂದು ರಿಲೀಸ್ ಆಗಿದೆ. ಬೆಳ್ಳಗ್ಗೆ 10.15 ರ ಸುಮಾರಿಗೆ ಬೆಂಗಳೂರಿನ ಅಪರ್ಣ ಚಿತ್ರಮಂದಿರ ಸೇರಿದಂತೆ ಕರ್ನಾಟಕದ 15೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೊಟ್ಟ ಮೊದಲ ಪ್ರದರ್ಶನ ಶುರುವಾಗಿದೆ.

ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್ ಆಗುವಾಗ, ದೊಡ್ಡ ದೊಡ್ಡ ಕಟೌಟ್ ಗಳು, ಅದಕ್ಕೆ ಹೂವಿನ ಹಾರ ಹಾಕಿ, ಅಭಿಮಾನಿಗಳು ಹಾಲಿನ ಅಭಿಶೇಕ ಮಾಡುವುದು ಸಹಜ. ಆದ್ರೆ, 'ಅಭಿನೇತ್ರಿ' 'ಮಹಿಳಾ ಪ್ರಧಾನ ಚಿತ್ರವಾದ್ದರಿಂದ ಅಬ್ಬರ ಕೊಂಚ ಕಮ್ಮಿ.


Kannada movie Abhinetri

ಚಿತ್ರಮಂದಿರದಲ್ಲಿ 'ಫಿಲ್ಮಿಬೀಟ್ ಕನ್ನಡ' ತಂಡ ನೋಡಿದಂತೆ, 'ಅಭಿನೇತ್ರಿ' ಚಿತ್ರವನ್ನ ಕಣ್ತುಂಬಿಕೊಳ್ಳುವುದಕ್ಕೆ ಮುಗಿಬೀಳುವ ಬದಲು, ಥಿಯೇಟರ್ ಗೆ ಜನ ನಿಧಾನಕ್ಕೆ ಹರಿದು ಬರುತ್ತಿದ್ದಾರೆ. ನೋಡ ನೋಡುತ್ತಿದ್ದಂತೆ ಕ್ಯೂ ಬೆಳೆದು ಹೋಗುತ್ತಿದೆ.


ಇದು ಪೂಜಾ ಗಾಂಧಿ ಚಿತ್ರ ಎಂಬ ಕಾರಣಕ್ಕೋ ಅಥವಾ ಕೆಲವು ರೋಚಕ ಪೋಸ್ಟರ್ ಗಳು ಜನರನ್ನು ಥಿಯೇಟರ್ ತನಕ ಕರೆದುಕೊಂಡು ಬಂದವೋ ಎಂಬುದು ಸದ್ಯಕ್ಕೆ ಹೇಳುವುದು ಕಷ್ಟ. [ಪೂಜಾ ಗಾಂಧಿಯ 'ಅಭಿನೇತ್ರಿ' ಚಿತ್ರದ ಪ್ರಿವ್ಯೂ]


'ಅಭಿನೇತ್ರಿ' ಚಿತ್ರ ಪ್ರೇಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಇದ್ದರೆ ಪೂಜಾಗಾಂಧಿ ಗೆದ್ದಂತೆ, ಇಲ್ಲದಿದ್ದರೆ ಅವರು ಗಾಂಧಿನಗರದಲ್ಲಿ ಎದ್ದು ನಿಲ್ಲುವುದು ಕಷ್ಟ. ಮೊದಲ ದಿನ ಎಲ್ಲಾ ಚಿತ್ರಗಳಿಗೂ ರೆಸ್ಪಾನ್ಸ್ ಚೆನ್ನಾಗಿಯೇ ಇರುತ್ತದೆ. ಇದೇ ರೀತಿ ಜನ ಕನಿಷ್ಟ ಎರಡು ವಾರ ಚಿತ್ರಮಂದಿರಕ್ಕೆ ಬಂದರೆ ಪೂಜಾ ಗಾಂಧಿ ಬಚಾವ್.


ಚಿತ್ರದಲ್ಲಿ ಪೂಜಾ ಗಾಂಧಿ ಮಿನುಗುತಾರೆ ಕಲ್ಪನಾನಾ ಇಲ್ಲಾ ಮಂಜುಳಾನಾ....'ಅಭಿನೇತ್ರಿ' ಚಿತ್ರದಲ್ಲಿ ಕಲ್ಪನಾ ಬದುಕಿನ ಕಹಿ ಸತ್ಯ ಅನಾವರಣವಾಗಿದ್ಯಾ ಅನ್ನುವುದನ್ನ ತಿಳಿದುಕೊಳ್ಳಲು 'ಫಿಲ್ಮಿಬೀಟ್ ಕನ್ನಡ' ನೋಡ್ತಾಯಿರಿ. (ಫಿಲ್ಮಿಬೀಟ್ ಕನ್ನಡ)

English summary
Actress Pooja Gandhi acted Kannada movie 'Abhinetri' is releasing today (Jan 30th). Here is the report on the First Show response from the Main Theater.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada