»   » ಟ್ಯಾಟ್ಯೂ: ಪೂಜಾ ಗಾಂಧಿ ಬಲಗೈ ಮೇಲಿರುವ 'ಪ್ರಶಾಂತ್' ಯಾರು?

ಟ್ಯಾಟ್ಯೂ: ಪೂಜಾ ಗಾಂಧಿ ಬಲಗೈ ಮೇಲಿರುವ 'ಪ್ರಶಾಂತ್' ಯಾರು?

Posted By:
Subscribe to Filmibeat Kannada

ಮಳೆ ಹುಡುಗಿ ಪೂಜಾ ಗಾಂಧಿಗೆ ಮದುವೆ ಫಿಕ್ಸ್ ಆಗಿದೆ. ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ. ಇದನ್ನ ಬೇರೆ ಯಾರು ಹೇಳಿಲ್ಲ, ಸ್ವತಃ ನಟಿ ಪೂಜಾ ಗಾಂಧಿ ಸ್ವಷ್ಟಪಡಿಸಿದ್ದಾರೆ.

ಪೂಜಾ ಗಾಂಧಿ ಮದುವೆ ಅಂದಾಕ್ಷಣ, ಹುಡುಗ ಯಾರು ಎಂಬ ಪ್ರಶ್ನೆ ಈಗ ಎಲ್ಲರನ್ನ ಕಾಡುತ್ತಿದೆ. ಈ ವೇಳೆ ಪೂಜಾ ಗಾಂಧಿ ಅವರ ಕೈಯಲ್ಲಿರುವ 'ಪ್ರಶಾಂತ್' ಎಂಬ ಹುಡುಗನ ಹೆಸರು ಮತ್ತಷ್ಟು ಕುತೂಹಲ ಕೆರಳಿಸಿದೆ.['ಮಳೆ ಹುಡುಗಿ' ಪೂಜಾ ಗಾಂಧಿ ಮದುವೆ ಫಿಕ್ಸ್ ಆಗಿದೆ: ವರ ಯಾರು.?]

Pooja Gandhi tattoo: Who is Prashanth?

ಹೌದು, ಈ ವಾರ ಬಿಗ್ ಬಾಸ್ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಪೂಜಾಗಾಂಧಿ, ಸ್ಪರ್ಧಿಗಳ ಬಳಿ ''ನನ್ನ ಮದುವೆ ಫಿಕ್ಸ್ ಆಗಿದೆ. Very shortly I'm getting married. ಎಲ್ಲರನ್ನೂ ಇನ್ವೈಟ್ ಮಾಡ್ತೀನಿ'' ಎಂದು ಹೇಳಿ ತಮ್ಮ ಮ್ಯಾರೇಜ್ ಬಗ್ಗೆ ಬಹಿರಂಗಪಡಿಸಿದರು. ಆದ್ರೆ, ತಾವು ಮದುವೆಯಾಗಲಿರುವ ಹುಡುಗ ಯಾರು ಎಂಬುದರ ಸುಳಿವು ಮಾತ್ರ ಬಿಟ್ಟುಕೊಟ್ಟಿಲ್ಲ.[ಪೂಜಾ ಜೊತೆ ಆನಂದ್ ನಿಶ್ಚಿತಾರ್ಥ ಮುರಿದಿದ್ದು ಯಾಕೆ?]

ಇನ್ನೂ 'ಬಿಗ್ ಬಾಸ್' ವೇದಿಕೆ ಮೇಲೆ ಮಾತನಾಡುವಾಗ ಸುದೀಪ್ ಕೂಡ ಪೂಜಾ ಗಾಂಧಿ ಮದುವೆಯಾಗುವ ಹುಡುಗನ ಹೆಸರನ್ನ ಕೇಳುವ ಪ್ರಯತ್ನ ಪಟ್ಟರಾದರೂ, ಉತ್ತರ ಸಿಗಲಿಲ್ಲ.

Pooja Gandhi tattoo: Who is Prashanth?

ಪೂಜಾಗಾಂಧಿ ಅವರ ಬಲಗೈನಲ್ಲಿ 'ಪ್ರಶಾಂತ್, ಪೂಜಾ' ಎಂಬ ಹೆಸರನ್ನ ಟ್ಯಾಟ್ಯೂ ಹಾಕಿಸಿರುವುದು ಸುದೀಪ್ ಕಣ್ಣಿಗೆ ಬಿತ್ತು. ಹೀಗಾಗಿ, ಪ್ರಶಾಂತ್ ಯಾರು..? ಎಂದು ಸುದೀಪ್, ಪೂಜಾಗಾಂಧಿ ಅವರನ್ನ ನೇರವಾಗಿ ಕೇಳಿದರು.[ನಿಂತುಹೋದ ನಿಶ್ಚಿತಾರ್ಥ: ಪೂಜಾ ಗಾಂಧಿ ಹೇಳಿದ್ದೇನು?]

Pooja Gandhi tattoo: Who is Prashanth?

'ಪ್ರಶಾಂತ್' ಹೆಸರಿನ ಬಗ್ಗೆ ಪೂಜಾ ಅವರ ಬಳಿ ಕೇಳಿದಾಕ್ಷಣ, ಪೂಜಾ ಗಾಂಧಿ ಅವರು ತಮ್ಮ ಬಲಗೈಯನ್ನು ಹಿಂದೆ ಸರಿಸಿದರು. ''ಜೀವನ್ ಬಗ್ಗೆ ಮಾತಾಡುತ್ತಿದ್ದೀರಾ... ಆದ್ರೆ 'ಪ್ರಶಾಂತ್' ಅಂತ ಹೆಸರನ್ನ ಟ್ಯಾಟೋ ಹಾಕಿಸಿದ್ದೀರಾ'' ಎಂದು ಸುದೀಪ್ ಮತ್ತೆ ಕೇಳಿದಾಗಲೂ ಪೂಜಾ ಗಾಂಧಿ, ಉತ್ತರ ಕೊಡಲು ಗೊತ್ತಾಗದೇ, ಕೊನೆಗೆ 'ನನ್ನ ಜೀವನ ಪ್ರಶಾಂತವಾಗಿರಲಿ ಅಂತ ಅಷ್ಟೇ' ಎಂದು ಹೇಳಿ ಎಲ್ಲರ ತಲೆಗೆ ಹುಳ ಬಿಟ್ಟರು.[ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ]

ಎನಿ ವೇ, ಪೂಜಾ ಗಾಂಧಿ ಮದುವೆ ಆಗುವ ವಿಚಾರವನ್ನ ಹೇಳಿದ್ಹಾಗೆ, ಯಾರ ಜೊತೆಗೆ ಮದುವೆ ಆಗುತ್ತಾರೆ ಅಂತ ಸದ್ಯದಲ್ಲೇ ಬಾಯಿ ಬಿಡುತ್ತಾರೆ. ಅಷ್ಟರೊಳಗೆ ಲಿಂಕು-ಸಿಂಕಿಗೆ ಟ್ಯಾಟ್ಯೂ ಕಾರಣವಾಗಿದೆ.!

English summary
Kannada Actress Pooja Gandhi tattoos 'Prashanth, Pooja' on her right hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada