For Quick Alerts
  ALLOW NOTIFICATIONS  
  For Daily Alerts

  ಪೂಜಾ ಗಾಂಧಿ ಬಂಡವಾಳದಲ್ಲಿ ಸೆಟ್ಟೇರಲಿದೆ ಮೂರು ಹೊಸ ಸಿನಿಮಾಗಳು!

  |

  ನಟಿ ಪೂಜಾ ಗಾಂಧಿ ಇತ್ತೀಚೆಗಷ್ಟೆ 'ಜಿಲೇಬಿ' ಅಂತ ಸಿನಿಮಾ ಮಾಡಿದ್ದರು. ಆ ಬಳಿಕ ಪೂಜಾ ಗಾಂಧಿ ಏನ್ ಮಾಡುತ್ತಿದ್ದಾರೆ ಅಂತ ಎಲ್ಲರು ಯೋಚನೆ ಮಾಡುತ್ತಿದ್ದರು. ಆದ್ರೆ, ಎಲ್ಲೂ ಸುದ್ದಿಯಾಗದ ಪೂಜಾ ಗಾಂಧಿ ಬಹುದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ.[ದಂಡುಪಾಳ್ಯ' ಗ್ಯಾಂಗ್ ನಿಂದ ಬಂತು ಭಯಾನಕ ಸುದ್ದಿ]

  ಪೂಜಾ ಗಾಂಧಿ ಅವರ ಇತ್ತಿಚಿನ ಯಾವ ಸಿನಿಮಾಗಳು ಸಹ ದೊಡ್ಡ ಮಟ್ಟದಲ್ಲಿ ಗೆದ್ದಿಲ್ಲ. ಅದರು ಸಹ ಪೂಜ ಕೈನಲ್ಲಿಗಾ ಮೂರು ಸಿನಿಮಾಗಳಿವೆ. ನಟಿಯಾಗಿದ್ದ ಪೂಜಾ ಈಗ ನಿರ್ಮಾಪಕಿಯಾಗಿ ಮಿಂಚುತ್ತಿದ್ದಾರೆ. ಪೂಜಾ ಈಗ ಒಂದಲ್ಲ, ಎರಡಲ್ಲ, ಮೂರು ಸಿನಿಮಾವನ್ನ ಒಟ್ಟಿಗೆ ನಿರ್ಮಾಣ ಮಾಡ್ತಿದ್ದಾರೆ. ಆ ಸಿನಿಮಾಗಳು ಯಾವುದು ಅಂತ ಮುಂದೆ ಓದಿ...

  ಮೂರು ಸಿನಿಮಾಗಳು ಯಾವುದು?

  ಮೂರು ಸಿನಿಮಾಗಳು ಯಾವುದು?

  ಪೂಜಾ ಗಾಂಧಿ ನಿರ್ಮಾಣದಲ್ಲಿ 'ಉತಾನಿ', 'ಬ್ಲಾಕ್ ವರ್ಸಸ್ ವೈಟ್', ಮತ್ತು 'ಬ್ಲೂ' ಎನ್ನುವ ಮೂರು ಸಿನಿಮಾಗಳನ್ನ ಮೂಡಿ ಬರಲಿದೆಯಂತೆ. ಈಗಾಗಲೇ ಈ ಚಿತ್ರಗಳಿಗಾಗಿ ತಯಾರಿ ಕೂಡ ಮಾಡಿಕೊಂಡಿದ್ದಾರೆ.

  ಎರಡು ಚಿತ್ರದಲ್ಲಿ ಪೂಜಾ ನಟನೆ

  ಎರಡು ಚಿತ್ರದಲ್ಲಿ ಪೂಜಾ ನಟನೆ

  ಅಂದ್ಹಾಗೆ, ಈ ಮೂರು ಚಿತ್ರಗಳಲ್ಲಿ 'ಉತಾನಿ', 'ಬ್ಲಾಕ್ ವರ್ಸಸ್ ವೈಟ್' ಚಿತ್ರದಲ್ಲಿ ಸ್ವತಃ ಪೂಜಾ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಇನ್ನು 'ಬ್ಲೂ' ಸಿನಿಮಾದಲ್ಲಿ ಜಸ್ಟ್ ನಿರ್ಮಾಪಕಿ ಆಗಿ ಬಂಡವಾಳ ಹೂಡಲಿದ್ದಾರಂತೆ.

  ಬಹುಭಾಷೆಗಳಲ್ಲಿ ಪೂಜಾ ಗಾಂಧಿ ಸಿನಿಮಾ?

  ಬಹುಭಾಷೆಗಳಲ್ಲಿ ಪೂಜಾ ಗಾಂಧಿ ಸಿನಿಮಾ?

  ಮೂರು ಸಿನಿಮಾದ ಟೈಟಲ್ ಗಳು ತುಂಬನೇ ವಿಭಿನ್ನವಾಗಿದೆ. ಸಿನಿಮಾ ಸಹ ಅದೇ ರೀತಿಯ ವಿಭಿನ್ನ ಕಥೆಯನ್ನ ಹೊಂದಿರಲಿದೆಯಂತೆ. ಉತಾನಿ' ಮತ್ತು 'ಬ್ಲೂ' ಸಿನಿಮಾ ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ನಿರ್ಮಾಣವಾಗಲಿದೆಯಂತೆ.

  ಜೆ.ಡಿ.ಚಕ್ರವರ್ತಿ ನಿರ್ದೇಶನ

  ಜೆ.ಡಿ.ಚಕ್ರವರ್ತಿ ನಿರ್ದೇಶನ

  ದಕ್ಷಣ ಭಾರತದ ಹೆಸರಾಂತ ನಟ, ನಿರ್ದೇಶಕ 'ಜೆ.ಡಿ ಚಕ್ರವರ್ತಿ' ಈ ಮೂರು ಸಿನಿಮಾಗಳನ್ನ ನಿರ್ದೇಶನ ಮಾಡಲಿದ್ದಾರೆ. ಬಾಲಿವುಡ್ ಚಿತ್ರರಂಗದ ದೊಡ್ಡ ದೊಡ್ಡ ಸಿನಿಮಾದ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರಂತೆ.

  ಹೊಸ ಕಲಾವಿದರಿಗೆ ಅವಕಾಶ

  ಹೊಸ ಕಲಾವಿದರಿಗೆ ಅವಕಾಶ

  ತಮ್ಮ ಈ ಮೂರು ಸಿನಿಮಾಗಳ ಪೈಕಿ ಎರಡು ಸಿನಿಮಾದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಿದ್ದಾರಂತೆ. 'ಬ್ಲಾಕ್ ವರ್ಸಸ್ ವೈಟ್' ಸಿನಿಮಾದಲ್ಲಿ 4 ಜನ ಹೊಸ ಕಲಾವಿದರು ಹಾಗೂ 'ಬ್ಲೂ' ಚಿತ್ರದ ಮುಖ್ಯ ಪಾತ್ರಕ್ಕೆ ಹೊಸ ನಾಯಕಿಯನ್ನ ಪರಿಚಯಿಸಲಿದ್ದಾರಂತೆ

  'ದಂಡುಪಾಳ್ಯ'ದಲ್ಲಿ ಪೂಜಾ!

  'ದಂಡುಪಾಳ್ಯ'ದಲ್ಲಿ ಪೂಜಾ!

  ಸದ್ಯ, 'ದಂಡುಪಾಳ್ಯ' ಸಿನಿಮಾದಲ್ಲಿ ನಟಿಸಿದ್ದ ಪೂಜಾ ಗಾಂಧಿ ಈಗ 'ದಂಡುಪಾಳ್ಯ-2' ಮತ್ತು 'ದಂಡುಪಾಳ್ಯ-3' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಸದ್ಯ ರಿಲೀಸ್ ಹಂತದಲ್ಲಿದೆ.

  English summary
  Kannada Actress Pooja Gandhi will Produced three New Films. Uthari, Black and White, Blue.....

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X