For Quick Alerts
  ALLOW NOTIFICATIONS  
  For Daily Alerts

  15 ದಿನದ ಶೂಟಿಂಗ್ ಮಾಡಿದ್ರೆ 2ಕೋಟಿ ಸಂಭಾವನೆಯಂತೆ ಈ ನಟಿಗೆ.!

  |
  ಇದು ನಟೀಮಣಿಯ ದಾಖಲೆ ಅಂತೆ..!?

  ಸಿನಿಮಾ ಇಂಡಸ್ಟ್ರಿಯಲ್ಲಿ ನಟರಿಗೆ ಹೋಲಿಸಿಕೊಂಡರೆ ನಟಿಯರಿಗೆ ಸಂಭಾವನೆ ಕಡಿಮೆ. ಬಾಲಿವುಡ್ ನಟಿಯರಿಗೆ ಸ್ವಲ್ಪ ಹೆಚ್ಚು ಬೇಡಿಕೆ ಇರುವುದರಿಂದ ಅವರ ಸಭಾವನೆ ಕೋಟಿಗಿಂತಹ ಹೆಚ್ಚು ದಾಟಬಹುದು. ಆದ್ರೆ, ಸೌತ್ ಇಂಡಸ್ಟ್ರಿಯಲ್ಲಿ ಕೋಟಿ ಸಂಭಾವನೆ ಪಡೆಯುವ ನಟಿಯರ ಸಂಖ್ಯೆ ಬಹಳ ಕಮ್ಮಿ.

  ಇಲ್ಲೊಬ್ಬ ನಟಿ ಕೇವಲ 15 ದಿನದ ಶೂಟಿಂಗ್ ಗಾಗಿ ಸುಮಾರು 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಈಗ ಭಾರಿ ಸಂಚಲನ ಸೃಷ್ಟಿಸಿದೆ. ಹೌದು, ಸದ್ಯ ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆ ತಮ್ಮ ಮುಂದಿನ ಸಿನಿಮಾದಲ್ಲಿ ಸುಮಾರು 2 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ.

  ಕನ್ನಡದ ಬೆಡಗಿಗೆ ಪರಭಾಷೆಯಲ್ಲಿ ಭಾರಿ ಬೇಡಿಕೆ

  'ಗಬ್ಬರ್ ಸಿಂಗ್' ನಿರ್ದೇಶನ ಮಾಡಿದ್ದ ಹರಿಶ್ ಶಂಕರ್ ವಾಲ್ಮಿಕಿ ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಗೆ ಪೂಜೆ ಹೆಗ್ಡೆ ನಾಯಕಿಯಾಗಿದ್ದಾರಂತೆ. ನಾಯಕಿ ಪಾತ್ರವನ್ನ ಕೇವಲ 15 ದಿನದಲ್ಲಿ ಚಿತ್ರೀಕರಣ ಮಾಡಿ ಮುಗಿಸುವ ಪ್ಲಾನ್ ಆಗಿದ್ದು, ಅದಕ್ಕಾಗಿ 2 ಕೋಟಿ ನೀಡಲಾಗುತ್ತಿದೆಯಂತೆ.

  ಆದ್ರೆ, ಈ ಸುದ್ದಿಯನ್ನ ನಿರ್ದೇಶಕ ಹರೀಶ್ ಶಂಕರ್ ಅಲ್ಲೆಗಳೆದಿದ್ದಾರೆ. ಪೂಜಾ ಹೆಗ್ಡೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಅದರಲ್ಲಿ ಸತ್ಯವಿಲ್ಲ ಎಂದು ಟ್ವೀಟ್ ಮಾಡಿ ಗಾಸಿಪ್ ಗೆ ಅಂತ್ಯವಾಡಿದ್ದಾರೆ.

  ತಮಿಳಿನ 'ಮುಗಮೂಡಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಪೂಜಾ ಹೆಗ್ಡೆಗೆ ನಾಗಚೈತನ್ಯ ಜೊತೆ ಕಾಣಿಸಿಕೊಂಡ 'ಒಕ ಲೈಲಾ ಕೋಸಂ' ಮೊದಲು ಬ್ರೇಕ್ ಕೊಡ್ತು. ನಂತರ ಹೃತಿಕ್ ರೋಷನ್ ಜೊತೆ ಮೊಹೆಂಜೋದರೋ' ಸಿನಿಮಾದಲ್ಲಿ ನಟಿಸಿದ್ದರು. ಅಲ್ಲು ಅರ್ಜುನ್ ಡಿಜೆ ಹಾಗೂ ಎನ್.ಟಿ.ಆರ್ ಜೊತೆ ಅರವಿಂದ ಸಮೇತ ಸಿನಿಮಾ ಮಾಡಿದ್ದರು. ಈಗ ಮಹರ್ಷಿ ಮತ್ತು ಹಿಂದಿಯಲ್ಲಿ ಹೌಸ್ ಫುಲ್ 4 ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Did Pooja hegde charge 2 crores remuneration for a 15 days shoot for her next movie with varun teja?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X