For Quick Alerts
  ALLOW NOTIFICATIONS  
  For Daily Alerts

  ಮಂಗಳೂರಿನ ಮಾವಿನ ಹಣ್ಣುಗಳನ್ನು ಟಾಲಿವುಡ್ ಮಂದಿಗೆ ಗಿಫ್ಟ್ ಮಾಡಿದ ಪೂಜಾ ಹೆಗ್ಡೆ

  |

  ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಪೂಜಾ ಹೆಗ್ಡೆ ಸದ್ಯ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ಪೂಜಾ ಹೆಗ್ಡೆ ಇದೀಗ ಗುಣಮುಖರಾಗಿದ್ದಾರೆ.

  ಇದೀಗ ಪೂಜಾ ಮಾವಿನ ಹಣ್ಣಿನ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಸದ್ಯ ಮಾವಿನ ಹಣ್ಣಿನ ಸೀಸಸ್. ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಟಾಲಿವುಡ್ ಮಂದಿಗೆ ಕಳುಹಿಸುವ ಮೂಲಕ ಟಾಲಿವುಡ್ ಮೇಲಿಟ್ಟಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಪೂಜಾ ಹೆಗ್ಡೆ.

  ಕೊರೊನಾ ನಡುವೆಯೂ ಪ್ರಭಾಸ್ 'ರಾಧೆ ಶ್ಯಾಮ್' ಓವರ್ ಸೀಸ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟಕೊರೊನಾ ನಡುವೆಯೂ ಪ್ರಭಾಸ್ 'ರಾಧೆ ಶ್ಯಾಮ್' ಓವರ್ ಸೀಸ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟ

  ಅಂದಹಾಗೆ ಪೂಜಾ ಹೆಗ್ಡೆ ಮಂಗಳೂರಿನವರು. ತನ್ನ ಊರು ಮಂಗಳೂರಿನಲ್ಲಿ ಪೂಜಾ ದೊಡ್ಡ ಮಾವಿನ ತೋಟವನ್ನು ಹೊಂದಿದ್ದಾರೆ. ಪೂಜಾ ಮಾವಿನ ತೋಟದಲ್ಲಿ ಈ ವರ್ಷ ಇಳುವರಿ ತುಂಬಾ ಚೆನ್ನಾಗಿದೆಯಂತೆ. ಹಾಗಾಗಿ ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ತನ್ನ ನೆಚ್ಚಿನ ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರಿಗೆ ಕಳುಹಿಸಿಕೊಟ್ಟಿದ್ದಾರೆ.

  ಮಾವಿನ ಹಣ್ಣಗಳನ್ನು ಗಿಫ್ಟ್ ಪ್ಯಾಕ್ ಮಾಡಿ ಮೊದಲು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಆವರಿಗೆ ಕಳುಹಿಸಿಕೊಟ್ಟಿದ್ದಾರಂತೆ. ಈಗಾಗಲೇ ತ್ರಿವಿಕ್ರಮ್ ಅವರಿಗೆ ಪೂಜಾ ಮನೆಯ ಮಾವಿನ ಹಣ್ಣು ತಲುಪಿದೆಯಂತೆ. 'ಅಲಾ ವೈಕುಂಠಪುರಂಲೋ' ಮೂಲಕ ದೊಡ್ಡ ಮಟ್ಟದ ಸಕ್ಸಸ್ ನೀಡಿರುವ ನಿರ್ದೇಶಕರಿಗೆ ಮೊದಲು ಮಾವಿನ ಹಣ್ಣನ್ನು ತಲುಪಿಸಿದ್ದಾರೆ.

  ಬಳಿಕ ಟಾಲಿವುಡ್ ನ ಅನೇಕ ನಿರ್ದೇಶಕ ಮತ್ತು ನಿರ್ಮಾಪಕರಿಗೂ ಕಳುಹಿಸಿದ್ದು, ಇನ್ನು ಅನೇಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರಂತೆ. ಟಾಲಿವುಡ್ ಪೂಜಾ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಪೂಜಾ ಟಾಲಿವುಡ್ ನ ಲಕ್ಕಿ ನಾಯಕಿ ಎಂದೇ ಗುರುತಿಸಿಕೊಂಡಿದ್ದಾರೆ.

  Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?

  ಪೂಜಾ ಹೆಗ್ಡೆ ಸದ್ಯ ಪ್ರಭಾಸ್ ನಾಯಕನಾಗಿ ಮಿಂಚಿರುವ ರಾಧೆ ಶ್ಯಾಮ್ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ತಮಿಳು ಸ್ಟಾರ್ ನಟ ವಿಜಯ್ ನಟನೆಯ ದಳಪತಿ 65 ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಹಿಂದಿ ಸಿನಿಮಾರಂಗದಲ್ಲೂ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದಾರೆ.

  English summary
  Actress Pooja Hegde sends Mangalore mangoes to Tollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X