»   » ಸತ್ಯವಾಗಲೂ ಕನ್ನಡಕ್ಕೆ ಬರ್ತಿದ್ದಾಳೆ ಪೂನಂ ಪಾಂಡೆ

ಸತ್ಯವಾಗಲೂ ಕನ್ನಡಕ್ಕೆ ಬರ್ತಿದ್ದಾಳೆ ಪೂನಂ ಪಾಂಡೆ

By: ಜೀವನರಸಿಕ
Subscribe to Filmibeat Kannada

ಬಾಲಿವುಡ್ ನಿಂದ ಸನ್ನಿ ಲಿಯೋನ್ ಬರ್ತಾರೆ, ಕೆ ಮಂಜು ಕರೆಸ್ತಾರೆ ಅನ್ನೋ ಸುದ್ದಿ ಠುಸ್ ಆಯಿತು. ಆಮೇಲೆ 'ಪ್ರೇಮ್ ಅಡ್ಡಾ' ಸಿನಿಮಾಗೆ ಪೂನಂ ಪಾಂಡೆಯನ್ನು ಕರೆಸ್ತಾರೆ ಅಂತ ಸುದ್ದಿಯಾಯ್ತು. ಆದ್ರೆ ಅದೆಲ್ಲ ನಡೀಲೇ ಇಲ್ಲ.

ಸ್ಟಾರ್ ನಿರ್ಮಾಪಕರು, ನಿರ್ದೇಶಕರು ಕರೆಸೋದಕ್ಕಾಗದ ಐಟಂ ಬ್ಯೂಟಿಯನ್ನು ಹೊಸ ತಂಡ ಕರೆಸುತ್ತಿದೆ. ಅದೇ 'ಜಂಗಲ್ ಜಾಕಿ' ರಾಜೇಶ್ ಅಭಿನಯದ 'ಲವ್ ಇಸ್ ಪಾಯಿಸನ್' ಚಿತ್ರತಂಡ.

ಪೂನಂ ಪಾಂಡೆ ಅನ್ನೋ ಮಾದಕ ಚೆಲುವೆಯನ್ನ ಕರೆಸ್ತೀನಿ. ಒಂದು ಐಟಂ ಡಾನ್ಸ್ ಮಾಡಿಸ್ತೀನಿ ಅಂತ ಪಡ್ಡೆಗಳು ಒಳ್ಗೊಳಗೇ ಮಂಡಕ್ಕಿ ಮೆಲ್ಲೋ ಹಾಗೆ ಮಾಡಿದ್ರು ನಿರ್ದೇಶಕ ಪ್ರೇಮ್. ಆದ್ರೆ ಆಮೇಲೆ ಕುಣಿದಿದ್ದು ಸ್ಕಾರ್ಲೆಟ್ ಅನ್ನೋ ಫಾರೀನ್ ಬೆಡಗಿ.

ನಿರ್ಮಾಪಕ ಕೆ ಮಂಜು ಕನ್ನಡ ಚಿತ್ರದಲ್ಲಿ ಸನ್ನಿ ಲಿಯೋನ್ ಸೊಂಟ ಬಳುಕಿಸ್ತಾರೆ ಅನ್ನೋದು ಸುದ್ದಿಯಾಗಿತ್ತು. ಕೆ ಮಂಜು ಬಾಂಬೆಗೆ ಹೋಗಿ ಸನ್ನಿ ಜೊತೆ ಫೋಟೋ ತೆಗಿಸಿಕೊಂಡು ಬಂದಿದ್ರು. ಆದ್ರೂ ಸನ್ನಿ ಕನ್ನಡದ ಕಡೆ ಕಣ್ಣೆತ್ತೀನೂ ನೊಡ್ತಾ ಇಲ್ಲ.

ಪೂನಂ ನೆನೆಸಿಕೊಂಡು ಬೆಚ್ಚಗಾದ ಸ್ಯಾಂಡಲ್ ವುಡ್

ಈಗ ಪೂನಂ ಪಾಂಡೆ ಕನ್ನಡಕ್ಕೆ ಬರ್ತಿದ್ದಾಳೆ ಅನ್ನೋ ಸುದ್ದಿ ಕೇಳಿನೇ ಸ್ಯಾಂಡಲ್ ವುಡ್ ಬೆಚ್ಚಗಾಗ್ತಿದೆ.

ಲವ್ ಈಸ್ ಪಾಯಿಸನ್ ಚಿತ್ರಕ್ಕೆ ಕನ್ಫರ್ಮ್

ನಂದನ ಪ್ರಭು ನಿರ್ದೇಶನದ ರಾಜೇಶ್ ಅಭಿನಯದ 'ಲವ್ ಇಸ್ ಪಾಯಿಸನ್' ಚಿತ್ರದಲ್ಲಿ ಪೂನಂ ಐಟಂ ಡಾನ್ಸ್ ಮಾಡೋದು ಕನ್ಫರ್ಮ್ ಆಗಿದೆ.

ಪೂನಂಳನ್ನ ಕಣ್ತುಂಬಿಕೊಳ್ಳೋದು ಗ್ಯಾರಂಟಿ

ಪ್ರಚಾರಪ್ರಿಯೆ ಪೂನಂಳ ಅವತಾರಗಳನ್ನ ಅಲ್ಲೆಲ್ಲೋ ಬಾಂಬೆಯಲ್ಲಿ ನೋಡಿ ಬೆಚ್ಚಗಾಗಿರೋ ಸ್ಯಾಂಡಲ್ ವುಡ್ ಪಡ್ಡೆಗಳು ಪೂನಂಳನ್ನ ಕನ್ನಡದಲ್ಲಿ ಕಣ್ತುಂಬಿಕೊಳ್ಳೋದು ಗ್ಯಾರಂಟಿಯಾಗಿದೆ.

ವೀಣಾ ಆಯಿತು ಈಗ ಪೂನಂ ಸರದಿ

ವೀಣಾ ಮಲ್ಲಿಕ್ ಅನ್ನೋ ಮಾದಕ ಚೆಲುವೆ 'ಸಿಲ್ಕ್' ಚಿತ್ರದ ಮೂಲಕ ಚಂದನವನದಲ್ಲಿ ತನ್ನ ಮಾದಕತೆಯನ್ನ ಪ್ರದರ್ಶಿಸಿದ್ದಾಯ್ತು. ಚಿತ್ರ ಸೋಲಿತೋ ಗೆಲ್ಲಿತೋ ಒಟ್ಟಾರೆಯಾಗಿ ನಿರ್ಮಾಪಕರಿಗಂತೂ ಲಾಸು ಮಾಡಲಿಲ್ಲ.

ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ

ಈಗ ಪೂನಂ ಎರಡೂ ಕಾಲಿಟ್ಟು ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಈ ಕಣ್ಣಲ್ಲಿ ಇನ್ನೂ ಏನೇನ್ ನೋಡ್ಬೇಕೋ ಅಂತಿದ್ದಾರೆ, ಗಾಂಧಿನಗರದ ಸಾತ್ವಿಕ ಸಿನಿಪ್ರಿಯರು.

English summary
'Nasha' actress Poonam Pandey all set to shake a leg in Kannada film Love is Poison. "Love Is Poison' directed by Nandan Prabhu. The movie leads Jungle Jackie fame Rajesh and Duhi Kaushik.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada