»   » ಪೂನಂ ಪಾಂಡೆ ಕನ್ನಡ ಐಟಂ ಹಾಡಿನ ಚಿತ್ರಗಳು

ಪೂನಂ ಪಾಂಡೆ ಕನ್ನಡ ಐಟಂ ಹಾಡಿನ ಚಿತ್ರಗಳು

By: ಉದಯರವಿ
Subscribe to Filmibeat Kannada

ಹಳ್ಳಿ ಹೈದ ರಾಜೇಶ್ ಗೆ ಏನ್ ಲಕ್ ಗುರು ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ರು.18 ಲಕ್ಷ ಕೊಟ್ಟು ರೂಪದರ್ಶಿ 'ನಶಾ' ಚಿತ್ರದ ಬೆಡಗಿ ಪೂನಂ ಪಾಂಡೆಯನ್ನು ರಾಜೇಶ್ ಚಿತ್ರಕ್ಕೆ ಕರೆಸಿರುವುದೇ ಈ ರೀತಿ ಜನ ಮಾತನಾಡಿಕೊಳ್ಳಲು ಕಾರಣವಾಗಿರುವುದು.

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಪೂನಂ ಪಾಂಡೆ ಪಡ್ಡೆಗಳಿಗೆ ಬೇಜಾನ್ ಕಿಕ್ ಕೊಟ್ಟಿದ್ದಾರೆ. ಇನ್ನು ಐಟಂ ಸಾಂಗ್ ಎಂದರೆ ಕೇಳಬೇಕೆ. ಇನ್ಯಾವ ರೀತಿ ಇರುತ್ತದೆ ಎಂಬುದನ್ನು ಪಡ್ಡೆಗಳ ಊಹೆಗೆ ಬಿಟ್ಟಿದ್ದಾರೆ ಪೂನಂ.

ನಂದನಪ್ರಭು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಲವ್ ಈಸ್ ಪಾಯಿಸನ್. 'ಹಳ್ಳಿಹೈದ' ಖ್ಯಾತಿಯ ರಾಜೇಶ್ ಈ ಚಿತ್ರದ ಹೀರೋ. ಈಗ ಮುಂಬೈನಿಂದ ಬೆಂಗಳೂರಿಗೆ ಐಟಂ ಡಾನ್ಸ್ ಮಾಡಲು ಬಂದಿದ್ದಾರೆ. ಚಿತ್ರದ ನಿಜವಾದ ಆಕರ್ಷಣೆ ಎಂದರೆ ಪೂನಂ ಎಂದೇ ಹೇಳಬೇಕು.

ಪೂನಂ ಪಾಂಡೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಲ್ಲಿದ್ದವರು ಸಮಯವನ್ನೂ ಲೆಕ್ಕಿಸದೆ ಒಂದು ಭಾರಿ ಕಣ್ತುಂಬಿಕೊಳ್ಳೋಣ ಎಂದು ಕಾಯುತ್ತಿದ್ದರು. ಆದರೆ ಪೂನಂ ಬಟ್ಟೆ ತೊಟ್ಟು ಬಂದು ಅವರಿಗೆಲ್ಲಾ ಶಾಕ್ ನೀಡಿದರು.

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಹಾಕಿರುವ ಸೆಟ್ ನಲ್ಲಿ ಪೂನಂ ತಮ್ಮ ಸೊಂಟ ಬಳುಕಿಸಿದ್ದಾರೆ. ವೀಣಾ ಮಲಿಕ್ ಹೋದ ಬೆನ್ನಲ್ಲೇ ಪೂನಂ ಎಂಟ್ರಿಕೊಟ್ಟಿರುವುದು ವಿಶೇಷ.

ನಿಜಕ್ಕೂ ಪೂನಂ ಇಷ್ಟು ಬೆಲೆ ಬಾಳುತ್ತಾರಾ?

ಇನ್ನೊಂದು ಮೂಲದ ಪ್ರಕಾರ ಪೂನಂ ಪಾಂಡೆ ಐಟಂ ಹಾಡಿಗೆ ರು.60 ಲಕ್ಷ ಕೊಟ್ಟಿದ್ದಾರೆ ಎಂಬ ಮಾತು ಇದೆ. ನಿಜಕ್ಕೂ ಪೂನಂ ಇಷ್ಟು ಬೆಲೆ ಬಾಳುತ್ತಾರಾ ಎಂಬುದೇ ಈಗಿನ ಸಂದೇಹ.

ಕಂಡಕ್ಟರ್ ನಂದನಪ್ರಭು ಆಕ್ಷನ್ ಕಟ್

ಕಂಡಕ್ಟರ್ ಆಗಿದ್ದ ನಂದನಪ್ರಭು ಅವರು ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಚಿತ್ರ ಇದು. ಈ ಹಿಂದೆ ಅವರು ಪ್ರೀತಿಯ ಲೋಕ ಎಂಬ ಸಿನಿಮಾ ಮಾಡಿದ್ದರು.

ಐಟಂ ಡಾನ್ಸ್ ಹೇಗಿದೆಯೋ ಏನೋ?

ಉಮೇಶ್ ಹಾಗೂ ಕೇಶವ ಮೂರ್ತಿ ಚಿತ್ರದ ನಿರ್ಮಾಪಕರು. ಪೂನಂಗೆ ನಟನೆ ಅಷ್ಟಷ್ಟು ಮಾತ್ರವೇ. ಏನಿದ್ದರೂ ಟ್ವಿಟ್ಟರ್ ನಲ್ಲಿ ಲೀಲಾಜಾಲವಾಗಿ ಈಜುತ್ತಾರೆ. ಇನ್ನು ಐಟಂ ಡಾನ್ಸ್ ಹೇಗೆ ಮಾಡಿದ್ದಾರೋ ಏನೋ?

ಪೂನಂ ಹೆಜ್ಜೆ ಇಟ್ಟ ಮೇಲೆ ಹೊಸ ಕಳೆ

ಈ ಸಿನಿಮಾ ಶುರುವಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ ಸುದ್ದಿಯಾಗಿದ್ದು ಮಾತ್ರ ಪೂನಂ ಪಾಂಡೆ ಚಿತ್ರತಂಡಕ್ಕೆ ಹೆಜ್ಜೆ ಇಟ್ಟ ಮೇಲೆ. ಅದಕ್ಕೂ ಮುನ್ನ ಅಮಾವಾಸ್ಯೆಗೂ ಹುಣ್ಣೆಮೆಗೋ ಒಮ್ಮೆ ಸದ್ದು ಮಾಡುತ್ತಿತ್ತು.

ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಲು ಬಂದ ಪೂನಂ

ಈ ಚಿತ್ರದಲ್ಲಿ ಮುಂಬೈನ ಇಬ್ಬರು ಬೆಡಗಿಯರು ನಾಯಕಿಯರು. ಇವರಿಬ್ಬರ ಮಧ್ಯೆ ಈಗ ಪೂನಂ ಎಂಟ್ರಿ ಕೊಟ್ಟಿದ್ದಾರೆ. ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುವುದು ಗ್ಯಾರಂಟಿ ಎಂದು ಚಿತ್ರತಂಡ ನಿರೀಕ್ಷಿಸಿದೆ.

ತಾಂತ್ರಿಕ ಬಳಗದ ಡೀಟೇಲ್ಸ್ ಇಲ್ಲಿದೆ

ಈ ಚಿತ್ರಕ್ಕೆ ರವಿಶಂಕರ್ ನಾಗ್ ಸಂಭಾಷಣೆ, ಕವಿರಾಜ್ ಸಾಹಿತ್ಯ, ಸಾಯಿಕಿರಣ್ ಸಂಗೀತ, ವೀನಸ್‌ಮೂರ್ತಿ ಛಾಯಾಗ್ರಹಣ, ಬಾಬುಖಾನ್ ಕಲೆ, ಶಂಕರ್ ನೃತ್ಯ, ಥ್ರಿಲ್ಲರ್ ಮಂಜು ಸಾಹಸ ಈಶ್ವರ್ ಸಂಕಲನವಿದೆ.

ತಾರಾಬಳಗದಲ್ಲಿ ಯಾರ್ಯಾರಿದ್ದಾರೆ?

ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನದ ಹೊಣೆಯನ್ನು ನಂದನ್‌ಪ್ರಭು ಹೊತ್ತಿದ್ದಾರೆ. ತಾರಾಗಣದಲ್ಲಿ ರಾಜೇಶ್, ಖುಷಿ, ಧೋಹಿ, ಚಂದ್ರು, ಸಾಧುಕೋಕಿಲ, ಯತಿರಾಜ್, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ.

English summary
'Nasha' actress Poonam Pandey Kannada item number stills. She has shake a leg in Kannada film Love is Poison. "Love Is Poison' directed by Nandan Prabhu. The movie leads Jungle Jackie fame Rajesh and Duhi Kaushik.
Please Wait while comments are loading...