»   » ಮಾಲಿನಿ ಅವತಾರದಲ್ಲಿ ನಶೆಯೇರಿಸುತ್ತಿರುವ ಪೂನಂ

ಮಾಲಿನಿ ಅವತಾರದಲ್ಲಿ ನಶೆಯೇರಿಸುತ್ತಿರುವ ಪೂನಂ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಬಾಲಿವುಡ್ ನ ರತಿ ಸುಂದರಿ ಪೂನಂ ಪಾಂಡೆ ಮತ್ತೊಂದು ಚಿತ್ರದ ಮೂಲಕ ದಕ್ಷಿಣದಲ್ಲಿ ಹವಾ ಎಬ್ಬಿಸಲು ಬರುತ್ತಿದ್ದಾರೆ. ತ್ರಿಭಾಷಾ ಚಿತ್ರ 'ಮಾಲಿನಿ ಅಂಡ್ ಕೋ' ಚಿತ್ರ ಈಗ ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದುವರೆಗೂ ನೋಡದ ಪೂನಂ ಸೌಂದರ್ಯ ಈ ಚಿತ್ರದಲ್ಲಿ ಅನಾವರಣವಾಗುತ್ತಿದೆ.

ಈ ಚಿತ್ರಕ್ಕೆ ವೀರು ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಹೇಷ್ ರಾಠಿ ನಿರ್ಮಿಸುತ್ತಿರುವ ಚಿತ್ರವಿದು. ಶೂಟಿಂಗ್ ಅಂತಿಮ ಹಂತದಲ್ಲಿದ್ದು ಇತ್ತೀಚೆಗೆ ಹೋರಾಟದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದೀಗ ಈ ಚಿತ್ರದ ಟೀಸರನ್ನು ಬಿಡುಗಡೆ ಮಾಡಲಾಗಿದೆ.

ಕನ್ನಡದ 'ಲವ್ ಈಸ್ ಪಾಯಿಸನ್' ಚಿತ್ರದಲ್ಲಿ ಅಭಿನಯಿಸಿದ ಬಳಿಕ ದಕ್ಷಿಣದಲ್ಲಿ ಪೂನಂ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರದ ಶೀರ್ಷಿಕೆಯೇ ಒಂದು ರೀತಿ ಆಕರ್ಷಕವಾಗಿದ್ದು ಕಥೆಯೂ ವಿಭಿನ್ನವಾಗಿದೆ ಎನ್ನುತ್ತದೆ ಚಿತ್ರತಂಡ.

ಗ್ಲಾಮರ್ ಅಷ್ಟೇ ಅಲ್ಲ ಅಭಿನಯವೂ ಇದೆ

ಈ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ವೀರೂ ಅವರು, "ಕೇವಲ ಪೂನಂ ಪಾಂಡೆ ಗ್ಲಾಮರ್ ಗಷ್ಟೇ ಸೀಮಿತವಾಗದೆ. ಅಭಿನಯಕ್ಕೆ ಅವಕಾಶವಿರುವ ಪಾತ್ರದಲ್ಲಿ ಕಾಣಿಸಲಿದ್ದಾರೆ. ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ" ಎಂದಿದ್ದಾರೆ.

ಈ ಚಿತ್ರದ ಒಂದು ರೋಚಕ ಸ್ಟಿಲ್

ಮಾಲಿನಿ ಅಂಡ್ ಕೋ ಚಿತ್ರದ ಮೂಲಕ ಪೂನಂ ಪಾಂಡೆ ಟಾಲಿವುಡ್ ಗೆ ಅಡಿಯಿಡುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ಸ್ಟಿಲ್ಸ್ ನಲ್ಲಿ ಇದೂ ಒಂದು.

ಭಯೋತ್ಪಾದನೆ ಹಿನ್ನೆಲೆಯುಳ್ಳ ರೊಮ್ಯಾಂಟಿಕ್ ಕಥೆ

ಭಯೋತ್ಪಾದನೆ ಹಿನ್ನೆಲೆಯಲ್ಲಿ ಸಾಗುವ ರೊಮ್ಯಾಂಟಿಕ್ ಕಥೆ ಇದು. ಇವೆರಡೂ ಭಿನ್ನ ಅಂಶಗಳನ್ನು ಸಂಯೋಜಿಸಿ ವಿನೋದಭರಿತವಾಗಿ ಚಿತ್ರವನ್ನು ತೆರೆಗೆ ತರಲಾಗಿದೆ ಎನ್ನುತ್ತದೆ ಚಿತ್ರತಂಡ.

ಪೂನಂ ಅವರದು ಭಿನ್ನ ಶೇಡ್ ಗಳುಳ್ಳ ಪಾತ್ರ

ಚಿತ್ರದಲ್ಲಿ ಪೂನಂ ಪಾಂಡೆ ಅವರ ಪಾತ್ರ ಭಿನ್ನ ಶೇಡ್ ಗಳನ್ನು ಒಳಗೊಂಡಿರುತ್ತದೆ. ಕೇವಲ ಅವರ ಅಂದಚೆಂದವಷ್ಟೇ ಅಲ್ಲದೆ ಅಭಿನಯದಲ್ಲೂ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದ್ದಾರೆ. ಈ ಚಿತ್ರ ಏಕತಾನತೆಯನ್ನು ಮುರಿಯಲಿದೆ ಎನ್ನುತ್ತದೆ ಚಿತ್ರತಂಡ.

ಹವ ಎಬ್ಬಿಸುವುದರಲ್ಲಿ ಅನುಮಾನವೇ ಇಲ್ಲ

ಪೂನಂ ಪಾಂಡೆ ಜೊತೆಗೆ ಸಾಮ್ರಾಟ್, ಮಿಲನ್, ಖುಷಿ, ಫರಾ, ಕಾವ್ಯಾಸಿಂಗ್ ಸೇರಿದಂತೆ ಮುಂತಾದವರು ಚಿತ್ರದಲ್ಲಿದ್ದಾರೆ. ದಕ್ಷಿಣದಲ್ಲಿ ಮಾಲಿನಿ ಅಂಡ್ ಕೋ ಹವಾ ಎಬ್ಬಿಸುವುದರಲ್ಲಿ ಅನುಮಾನವೇ ಇಲ್ಲ.

English summary
Bollywood actress Poonam pandey back to South Indian film with Malini and Co. The actress is sizzles in the movie. Poonam Pandey makes her debut in the Telugu film industry with Malini & Co. The film is said to be a trilingua

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada