For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಆರಂಭಿಸಿದ ಡಾಲಿಯ 'ಪಾಪ್ ಕಾರ್ನ್ ಮಂಕಿ ಟೈಗರ್'

  |

  'ಟಗರು' ಸಿನಿಮಾ ಬಳಿಕ ದುನಿಯಾ ಸೂರಿ ನಿರ್ದೇಶನ ಮಾಡಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಬಿಡುಗಡೆಗೆ ಸಜ್ಜಾಗುತ್ತಿದೆ. ಡಾಲಿ ಧನಂಜಯ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಈ ಚಿತ್ರ ಯಾವಾಗ ರಿಲೀಸ್ ಆಗಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ.

  ಹೌದು, 'ಪಾಪ್ ಕಾರ್ನ್ ಮಂಕಿ‌ ಟೈಗರ್' ಸಿನಿಮಾ ಡಬ್ಬಿಂಗ್ ಆರಂಭಿಸಿದೆ. ಶೂಟಿಂಗ್ ಮುಗಿಸಿ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಬಂದಿರುವ ಈ ಸಿನಿಮಾ ಸದ್ಯದಲ್ಲೆ ಟೀಸರ್ ರಿಲೀಸ್ ಮಾಡಲು ತಯಾರಿ ನಡಸಿದೆ.

  ಧನಂಜಯ್ ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ಸ್ಟಾರ್ ನಿರ್ದೇಶಕನ ಮಗ.!ಧನಂಜಯ್ ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ಸ್ಟಾರ್ ನಿರ್ದೇಶಕನ ಮಗ.!

  ಇಂದಿನಿಂದ ಆಕಾಶ್ ಸ್ಟುಡಿಯೋದಲ್ಲಿ ಧನಂಜಯ್ ಸಿನಿಮಾ ಡಬ್ಬಿಂಗ್ ಶುರು ಮಾಡಿದೆ. ಚಿತ್ರದ ನಾಯಕಿಯರು ಹಾಗೂ ನಿರ್ದೇಶಕ ಸೂರಿ ಡಬ್ಬಿಂಗ್ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

  ಡಾಲಿಗಿಂತ ಕ್ರೂರಿ ಈ 'ಪಾಪ್ ಕಾರ್ನ್ ಮಂಕಿ ಟೈಗರ್'ಡಾಲಿಗಿಂತ ಕ್ರೂರಿ ಈ 'ಪಾಪ್ ಕಾರ್ನ್ ಮಂಕಿ ಟೈಗರ್'

  ಅಂದ್ಹಾಗೆ, ಪಾಪ್ ಕಾರ್ನ್ ಮಂಕಿ‌ ಟೈಗರ್ ಚಿತ್ರವನ್ನ ನಿರ್ಮಿಸಿರುವುದು ಸುಧೀರ್. ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಇದು ಅವರಿಗೆ ಚೊಚ್ಚಲ‌ ಸಿನಿಮಾ.

  ಇನ್ನುಳಿದಂತೆ ನಿವೇದಿತಾ, ಅಮೃತಾ, ಸಪ್ತಮಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ದುನಿಯಾ ಸೂರಿ ಅವರೇ ಸಂಭಾಷಣೆ ಬರೆದಿದ್ದಾರೆ. ಶೇಖರ್ ಎಸ್ ಅವರು ಛಾಯಾಗ್ರಹಣ ಈ ಚಿತ್ರಕ್ಕಿದೆ.

  English summary
  Dolly Dhananjay starrer popcorn monkey tiger movie team started dubbing work in akash studio.the movie directed by duniya soori.
  Wednesday, October 30, 2019, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X