For Quick Alerts
  ALLOW NOTIFICATIONS  
  For Daily Alerts

  ರಾಜ್, ವಿಷ್ಣುಗೆ ಬಣ್ಣ ಹಚ್ಚಿದ್ದ ಮೇಕಪ್ ಕೃಷ್ಣ ನಿಧನ

  |

  ಡಾ ರಾಜ್ ಕುಮಾರ್, ವಿಷ್ಣುವರ್ಧನ್ ರಂತಹ ಮೇರು ನಟರಿಗೆ ಬಣ್ಣ ಹಚ್ಚಿದ ಕಲಾವಿದ ಮೇಕಪ್ ಕೃಷ್ಣ (56) ನಿಧನ ಹೊಂದಿದ್ದಾರೆ. ಇಂದು (ಜನವರಿ 13) ಬೆಳಗ್ಗೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

  ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಮೇಕಪ್ ಕೃಷ್ಣ ಅವರು, ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ ಕುಂಬಳಗೋಡು ಬಳಿಯ ಗೊಲ್ಲಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

  ಡಾ.ರಾಜ್ ಗೆ 'ಭಾರತ ರತ್ನ': ಸರ್ಕಾರದ ಎದುರು ಬೇಡಿಕೆ ಇಟ್ಟ ಅಭಿಮಾನಿಗಳುಡಾ.ರಾಜ್ ಗೆ 'ಭಾರತ ರತ್ನ': ಸರ್ಕಾರದ ಎದುರು ಬೇಡಿಕೆ ಇಟ್ಟ ಅಭಿಮಾನಿಗಳು

  ಮೇಕಪ್ ನಲ್ಲಿ ದೊಡ್ಡ ಹೆಸರು ಮಾಡಿದ ಕೃಷ್ಣ ನಂತರ ಒಂದೊಂದೆ ಹೆಜ್ಜೆ ಮುಂದೆ ಹೋದರು. ಟಿವಿ ಕ್ಷೇತ್ರದಲ್ಲಿ ಹೆಸರು ಮಾಡಿದರು. ರಾಜ್ ಕುಮಾರ್ ಜೀವನವನ್ನು ಮೊದಲು ದೂರದರ್ಶನದಲ್ಲಿ ಪ್ರಸಾರ ಮಾಡಿದ ಖ್ಯಾತಿ ಇವರಿಗೆ ಇದೆ.

  ಮೇಕಪ್ ಜೊತೆಗೆ ಕಿರುತೆರೆಯಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡರು. ರಂಗ ಜಂಗಮ ಎಂಬ ರಂಗ ತಂಡ ಕಟ್ಟಿ ನಾಟಕಗಳನ್ನು ಮಾಡುತ್ತಿದ್ದರು.

  ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಡಾ.ರಾಜ್ ಕುಟುಂಬ.!ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಡಾ.ರಾಜ್ ಕುಟುಂಬ.!

  ರಾಜ್ ಕುಮಾರ್ ಜೀವನ ಹಾಗೂ ಸಾಧನೆಯನ್ನು ರಂಗಕ್ಕೆ ಅಳವಡಿಸಬೇಕು ಎನ್ನುವುದು ಅವರ ಕನಸ್ಸಾಗಿತ್ತು. ಅದಕ್ಕೆ ಬೇಕಾದ ತಯಾರಿಗಳನ್ನೂ ನಡೆಸಿದ್ದರು. ಆದರೆ, ಅವರ ಕನಸು ನೆರವೇರಲಿಲ್ಲ. 56 ವರ್ಷದ ಮೇಕಪ್ ಕೃಷ್ಣ ತಮ್ಮ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

  English summary
  Popular makeup artist Krishna passes away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X