For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 15ರ ವಿಶೇಷ ದಿನಕ್ಕೆ ಬಂದ ಪೋಸ್ಟರ್, ಟೀಸರ್, ಸಿನಿಮಾ ಸುದ್ದಿಗಳು

  |

  ಸ್ವಾತಂತ್ರ್ಯ ದಿನಾಚರಣೆ ರಂಗು ಸ್ಯಾಂಡಲ್‌ವುಡ್‌ನಲ್ಲೂ ಜೋರಾಗಿದೆ. ಕನ್ನಡ ಹಲವು ತಾರೆಯರು ಸ್ವಾತಂತ್ರ್ಯ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದೇ ವಿಶೇಷ ದಿನ ಕೆಲವು ಸಿನಿಮಾದ ಹೊಸ ಪೋಸ್ಟರ್‌ಗಳು ಬಿಡುಗಡೆಯಾಗಿದೆ. ಕೆಲವು ಚಿತ್ರಗಳ ಟೀಸರ್ ಬಂದಿದೆ. ಇನ್ನು ಕೆಲವರು ಪೋಸ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.

  - 'ಡಾಲಿ' ಧನಂಜಯ್ ನಟಿಸುತ್ತಿರುವ ಹೆಡ್‌ಬುಷ್ ಸಿನಿಮಾದ ಧನಂಜಯ್ ಲುಕ್ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ. ಮಾಜಿ ಡಾನ್ ಜಯರಾಜ್ ಪಾತ್ರದಲ್ಲಿ ಧನಂಜಯ್ ನಟಿಸುತ್ತಿದ್ದು, ಜಯರಾಜ್ ಫಸ್ಟ್ ಲುಕ್ ಆಗಸ್ಟ್ 22ಕ್ಕೆ ರಿಲೀಸ್ ಮಾಡುವುದಾಗಿ ಸ್ವತಃ ಧನಂಜಯ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಮಾಹಿತಿ ನೀಡಿದ್ದಾರೆ.

  ಕನ್ನಡ ಕಿರುತೆರೆಯಲ್ಲಿ ವಿಜಯ್ ನಟನೆಯ 'ಮಾಸ್ಟರ್' ಪ್ರಸಾರಕನ್ನಡ ಕಿರುತೆರೆಯಲ್ಲಿ ವಿಜಯ್ ನಟನೆಯ 'ಮಾಸ್ಟರ್' ಪ್ರಸಾರ

  ಅಗ್ನಿಶ್ರೀಧರ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಧನಂಜಯ್ ನಿರ್ಮಾಣದಲ್ಲಿಯೂ ಕೈ ಜೋಡಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. .

  - ತಮಿಳಿನ ಸೂಪರ್ ಹಿಟ್ ಚಿತ್ರ 'ಮಾಸ್ಟರ್' ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15 ರಂದು ಉದಯ ಟಿವಿಯಲ್ಲಿ 'ಮಾಸ್ಟರ್' ಕನ್ನಡ ವರ್ಷನ್ ಸಿನಿಮಾ ಪ್ರೀಮಿಯರ್ ಕಾಣ್ತಿದೆ. ಸಂಜೆ 6.30ಕ್ಕೆ 'ಮಾಸ್ಟರ್' ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗ್ತಿದೆ.

  - ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ 'ಜೇಮ್ಸ್' ಸಿನಿಮಾ ಪವರ್‌ಫುಲ್ ಪೋಸ್ಟರ್‌ವೊಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಿಲೀಸ್ ಆಗಿದೆ. 'ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್' ಎಂದಿರುವ ಅಪ್ಪು ಈ ಪೋಸ್ಟರ್‌ನ್ನು ಯೋಧರಿಗೆ ಅರ್ಪಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ. ಪುನೀತ್ ರಾಜ್‌ಕುಮಾರ್ ನಟಿಸುತ್ತಿರುವ 'ಜೇಮ್ಸ್' ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಕಿಶೋರ್ ಪಾತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ.

  Poster and Teaser release on Independence day Special

  - ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ 'ಮಾರ್ಟಿನ್' ಎಂದು ನಾಮಕರಣ ಮಾಡಲಾಗಿದ್ದು, ಇಂದು ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡಲಾಗಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ.

  - ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಸಿನಿಮಾ ಇಂಡಸ್ಟ್ರಿಗೆ ಸೇರಿದ ಆರು ಜನ ಸೆಲೆಬ್ರಿಟಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ ರಾಘವೇಂದ್ರ ರಾಜ್ ಕುಮಾರ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ನಿರ್ದೇಶಕ ಸಂತೋಷ್ ಅನಂದ್ ರಾಮ್, ನಾಗತಿಹಳ್ಳಿ ಚಂದ್ರಶೇಖರ್, ಸುಹಾನಿಸಿ ಜನುಮದಿನದ ಸಂಭ್ರಮದಲ್ಲಿದ್ದಾರೆ.

  ಸ್ವಾತಂತ್ರ್ಯ ದಿನಕ್ಕೆ 'ಜೇಮ್ಸ್' ಆಗಿ ಸೈನಿಕರ ಜೊತೆ ಬಂದ ಅಪ್ಪುಸ್ವಾತಂತ್ರ್ಯ ದಿನಕ್ಕೆ 'ಜೇಮ್ಸ್' ಆಗಿ ಸೈನಿಕರ ಜೊತೆ ಬಂದ ಅಪ್ಪು

  - ಆಗಸ್ಟ್ 15 ರಂದು ಕನ್ನಡದ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ಮಂಸೋರೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಅಖಿಲಾ ಜೊತೆ ಸಪ್ತಪದಿ ತುಳಿದಿದ್ದಾರೆ.

  ನಟಿ ಹರ್ಷಿಕಾ ಪೂಣಚ್ಚ ನಟಿಸಿರುವ ಚೊಚ್ಚಲ ಭೋಜ್‌ಪುರಿ ಸಿನಿಮಾ ಇಂದು ಬಿಡುಗಡೆಯಾಗಿದೆ. 'ಭೋಜ್‌ಪು'ರಿ ಸೂಪರ್ ಸ್ಟಾರ್ ಪವನ್ ಕುಮಾರ್ ಈ ಚಿತ್ರದಲ್ಲಿ ನಾಯಕಯಾಗಿದ್ದು, ಝಾರ್ಖಂಡ್ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  - ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಭಿಮ್ಲಾ ನಾಯಕ್' ಚಿತ್ರದ ಫಸ್ಟ್ ಲುಕ್ ಟೀಸರ್ ಇಂದು ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ಸಹ ಇದ್ದಾರೆ. ಇದು ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು, ಬಿಜೆ ಮೆನನ್ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ.

  English summary
  James movie first Look, bheemla nayak teaser, martin movie teaser release on Independence day Special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X