For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಪುನೀತ್ ದೂಕುಡು ರೀಮೇಕ್ ಚಾಲನೆ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಹಾಡುಗಳ ಧ್ವನಿಮುದ್ರಣ ಗೌರಿಹಬ್ಬದ ಶುಭದಿನದಂದು ಆಕಾಶ್ ಸ್ಟುಡಿಯೋದಲ್ಲಿ ಆರಂಭವಾಯಿತು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಾಘವೇಂದ್ರರಾಜ್ ಕುಮಾರ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿದ್ದರು.

  ತೆಲುಗು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ದೂಕುಡು' ಚಿತ್ರದ ರೀಮೇಕ್ ಇದು. ಆಕ್ಷನ್ ಕಟ್ ಹೇಳುತ್ತಿರುವವರು ಕೆ.ಮಾದೇಶ್. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಲಾಂಛನದಲ್ಲಿ ರಾಮ್ ಅಚಂಟ, ಗೋಪಿ ಅಚಂಟ, ಅನಿಲ್ ಸುಂಕರ, ಪ್ರವೀಣ್ ಕೊಲ್ಲ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  ಈ ಚಿತ್ರದ ಚಿತ್ರೀಕರಣ ನವಂಬರ್ 25ರಿಂದ ಆರಂಭವಾಗಲಿದೆ. ಬೆಂಗಳೂರು, ಬಳ್ಳಾರಿ, ಮೈಸೂರು ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

  ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

  ಈ ಹಿಂದೆ ಮಹೇಶ್ ಬಾಬು ಅಭಿನಯದ 'ಒಕ್ಕಡು' ಚಿತ್ರ 'ಅಜಯ್' ಆಗಿ ಕನ್ನಡಕ್ಕೆ ರೀಮೇಕ್ ಆಗಿತ್ತು. ತೆಲುಗಿನ ಮತ್ತೊಂದು ಚಿತ್ರ 'ರೆಡಿ' ಕನ್ನಡಕ್ಕೆ 'ರಾಮ್' ಆಗಿ ರೀಮೇಕ್ ಆಗಿತ್ತು. ಈಗ ದೂಕುಡು ಚಿತ್ರದ ಸರದಿ. ಅಂದಹಾಗೆ ಮೂಲ ಚಿತ್ರದಲ್ಲಿ ಸಮಂತಾ ನಾಯಕಿ. ಈ ಚಿತ್ರಕ್ಕೆ ನಾಯಕಿ ಯಾರು? ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

  ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ(ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Power Star Puneet Rajkumar's untitled new film starts on Ganesha Chaturthi festival, it will be a remake of the Telugu hit Dookudu. The film set a box office record for the Telugu film industry by collecting a gross of more than Rs. 1 billion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X