For Quick Alerts
  ALLOW NOTIFICATIONS  
  For Daily Alerts

  ಪವರ್ ಫುಲ್ ಹನುಮನ ಬಳಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  |
  Yuvaratna Movie: ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ. | FILMIBEAT KANNADA

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ 40 ಭಾಗದಷ್ಟು ಚಿತ್ರೀಕರಣ ಮುಗಿಸಿರುವ 'ಯುವರತ್ನ' ಚಿತ್ರತಂಡ ಈಗ ಧಾರವಾಡದಲ್ಲಿ ಬೀಡುಬಿಟ್ಟಿದೆ. ಅನೇಕ ದಿನಗಳಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಪುನೀತ್ ಮತ್ತು ತಂಡ ಈದ ಮತ್ತೆ ಧಾರವಾಡದಲ್ಲಿ ಚಿತ್ರೀಕರಣ ಮಾಡುತ್ತಿದೆ.

  ಅಂದ್ಹಾಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ 'ಯುವರತ್ನ' ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣ ಪ್ರಾರಂಭಿಸುವುದಕ್ಕು ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪವರ್ ಫುಲ್ ದೇವಸ್ಥಾನವಾದ ನುಗ್ಗಿಕೇರಿ ಆನಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿರುವ ಅಪ್ಪು 'ಯುವರತ್ನ' ಚಿತ್ರ ಯಶಸ್ವಿಯಾಗಲಿ ಎಂದು ಕೇಳಿಕೊಂಡಿದ್ದಾರೆ.

  ಧಾರವಾಡ ಕಡೆ ಪಯಣ ಬೆಳೆಸಿದ ಪುನೀತ್ ರಾಜ್ ಕುಮಾರ್ : ಕಾರಣ ಇಲ್ಲಿದೆ

  ಮೊನ್ನೆ ಮೊನ್ನೆಯಷ್ಟೆ 'ಯುವರತ್ನ' ಚಿತ್ರತಂಡ ಧಾರವಾಡ ಕಡೆ ಪಯಣ ಬಳೆಸಿತ್ತು. ವಿಶೇಷ ಅಂದ್ರೆ ಇತ್ತೀಚಿಗಷ್ಟೆ ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಗೆದ್ದ ನಂತರ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ತುಲಾಭಾರ ನೆರವೇರಿಸಿದ್ದರು.

  'ಯುವರತ್ನ' ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವೆ ಇದೆ. ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಸೇರಿದಂತೆ ಡಾಲಿ ಧನಂಜಯ್, ಅರು ಗೌಡ, ಕಾನ್ಸ್ಟೆಬಲ್ ಸರೋಜ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಾಯಕಿಯಾಗಿ ಸಾಯೇಶಾ ಸೈಗಲ್ ಬಣ್ಣ ಹಚ್ಚಿದ್ದಾರೆ.

  English summary
  Kannada actor Power star Puneeth Rajkumar visited Nuggikeri Hanuman Temple in Dharwad. Puneeth currently busy in Yuvaratna film shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X