For Quick Alerts
  ALLOW NOTIFICATIONS  
  For Daily Alerts

  ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಪುನೀತ್ ರಾಜ್ ಕುಮಾರ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಫೆಬ್ರವರಿ 7 ರಂದು 'ನಟ ಸಾರ್ವಭೌಮ' ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

  ಹೀಗಿರುವಾಗಲೇ, ಇಂದು ಮಂತ್ರಾಲಯಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದರು. ಪತ್ನಿ ಅಶ್ವಿನಿ ಜೊತೆಗೆ ಮಂತ್ರಾಲಯಕ್ಕೆ ಬಂದ ಪುನೀತ್ ರಾಜ್ ಕುಮಾರ್ ರಾಯರ ದರ್ಶನ ಪಡೆದರು.

  ಗಾಂಧಿನಗರದಲ್ಲಿ 'ನಟ ಸಾರ್ವಭೌಮ'ನಿಗೆ ಸಿಕ್ಕ ಚಿತ್ರಮಂದಿರ ಯಾವುದು?

  ರಾಯರ ದರ್ಶನ ಪಡೆದ ನಂತರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ನಟ ಪುನೀತ್ ರಾಜ್ ಕುಮಾರ್ ರನ್ನು ಸನ್ಮಾನಿಸಿ, ಆಶೀರ್ವಾದ ಮಾಡಿದರು.

  ''ತುಂಬಾ ದಿನಗಳಿಂದ ಮಂತ್ರಾಲಯಕ್ಕೆ ಬರಲು ಆಗಿರಲಿಲ್ಲ. 'ನಟ ಸಾರ್ವಭೌಮ' ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಹೀಗಾಗಿ ರಾಯರ ಆಶೀರ್ವಾದ ಪಡೆಯಲು ಬಂದಿದ್ದೇನೆ'' ಎಂದು ಇದೇ ವೇಳೆ ಪುನೀತ್ ರಾಜ್ ಕುಮಾರ್ ಹೇಳಿದರು.

  'ನಟ ಸಾರ್ವಭೌಮ': ಸಾಂಗ್ ಹಿಟ್ಟಾಯ್ತು, ಟ್ರೇಲರ್ ರೆಡಿಯಾಯ್ತು

  ಅಂದ್ಹಾಗೆ, 'ನಟ ಸಾರ್ವಭೌಮ' ಪವನ್ ಒಡೆಯರ್ ನಿರ್ದೇಶನದ ಚಿತ್ರ. ಇದಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದು, ನಾಯಕಿಯರಾಗಿ ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರನ್ ನಟಿಸಿದ್ದಾರೆ.

  English summary
  Power Star Puneeth Rajkumar visits Mantralaya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X