For Quick Alerts
  ALLOW NOTIFICATIONS  
  For Daily Alerts

  ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾ ಚಿತ್ರೀಕರಣದ ಹಿನ್ನೆಲೆ ಬಳ್ಳಾರಿಯಲ್ಲಿದ್ದಾರೆ. ಕಳೆದ ಎರಡ್ಮೂರು ದಿನದಿಂದ ಹೊಸಪೇಟೆಯಲ್ಲಿ ಶೂಟಿಂಗ್ ಮಾಡುತ್ತಿರುವ ಅಪ್ಪು, ಭಾನುವಾರ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ್ದಾರೆ.

  ಭಾನುವಾರ ಜೇಮ್ಸ್ ಸಿನಿಮಾ ಚಿತ್ರೀಕರಣ ಮುಗಿಸಿದ ಬಳಿಕ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿ ವೀಕ್ಷಿಸಿದರು. ಈ ವೇಳೆ ಅಪ್ಪು ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

  'ಜೇಮ್ಸ್' ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಕೈಮುಗಿದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

  ಹೊಸಪೇಟೆಯ ರೆಸಾರ್ಟ್‌ನಲ್ಲಿ ಚಿತ್ರೀಕರಣ ಮುಗಿಸಿದ ಪುನೀತ್ ರಾಜ್ ಕುಮಾರ್ ಗಂಗಾವತಿ ಕಡೆ ಪ್ರಯಾಣ ಮಾಡಲಿದ್ದಾರೆ. ಗಂಗಾವತಿಯಲ್ಲಿ ಜೇಮ್ಸ್ ಸಿನಿಮಾಗಾಗಿ ಅದ್ಧೂರಿ ಸೆಟ್‌ ನಿರ್ಮಿಸಲಾಗಿದೆ.

  ಯುವರತ್ನ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿ ಮುಗಿಸಿರುವ ಪುನೀತ್ ರಾಜ್ ಕುಮಾರ್, ಇದೇ ಮೊದಲ ಸಲ ಚೇತನ್ ಕುಮಾರ್ ಜೊತೆ ಚಿತ್ರ ಮಾಡುತ್ತಿದ್ದಾರೆ. ಭರ್ಜರಿ ಸಿನಿಮಾದ ಬಳಿಕ ಚೇತನ್ ಕುಮಾರ್, ಅಪ್ಪುಗಾಗಿ ಸಖತ್ ಆಗಿರುವ ಸ್ಕ್ರಿಪ್ಟ್ ಮಾಡ್ಕೊಂಡು ತಯಾರಿ ನಡೆಸಿದ್ದರು.

  ಜೇಮ್ಸ್ ಚಿತ್ರಕ್ಕೆ ಪ್ರಿಯಾ ಆನಂದ್ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಾಜಕುಮಾರ ಸಿನಿಮಾದಲ್ಲಿ ಅಪ್ಪು ಜೊತೆ ಪ್ರಿಯಾ ಆನಂದ್ ನಟಿಸಿದ್ದರು. ಈಗ ಎರಡನೇ ಬಾರಿ ಜೋಡಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada

  ಇನ್ನೂ ಚಿತ್ರದಲ್ಲಿ ನಟಿ ಅನು ಪ್ರಭಾಕರ್ ಸಹ ನಟಿಸುತ್ತಿದ್ದಾರೆ. ಅನು ಪ್ರಭಾಕರ್ ಮೊದಲ ಬಾರಿಗೆ ಪುನೀತ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಜೊತೆಗೆ ಬಹುಭಾಷ ನಟ ಆದಿತ್ಯ ಮೆನನ್ ಮತ್ತು ತೆಲುಗು ನಟ ಸ್ಟಾರ್ ಶ್ರೀಕಾಂತ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Kannada actor Puneeth Rajkumar visits Tungabhadra Dam on Sunday evening while he was shooting in close by location.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X