»   » ನಮ್ಮ ಫ್ಯಾಮಿಲೀಗೆ ಓಡೋಗೋದು ಗೊತ್ತಿಲ್ಲ, ಶಿವಣ್ಣ

ನಮ್ಮ ಫ್ಯಾಮಿಲೀಗೆ ಓಡೋಗೋದು ಗೊತ್ತಿಲ್ಲ, ಶಿವಣ್ಣ

Posted By:
Subscribe to Filmibeat Kannada
Shiva still
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಶಿವ' ಚಿತ್ರ ಹಲವಾರು ಕಾರಣಗಳಿಗೆ ಕನ್ನಡ ಚಿತ್ರೋದ್ಯಮದಲ್ಲಿ ಕುತೂಹಲ ಮೂಡಿಸಿದೆ. ಮೊದಲನೆಯದು ಚಿತ್ರದ ಸ್ಟೈಲಿಶ್ ಸ್ಟಿಲ್ಸ್. ಎರಡನೆಯದು ಪ್ರೋಮೋಗಳು ಹಾಗೂ ಡೈಲಾಗ್ಸ್. ಕನ್ನಡ ಟಿವಿ ವಾಹಿನಿಗಳಲ್ಲಿ ಮೂಡಿಬರುತ್ತಿರುವ ಪ್ರೊಮೋಗಳು ಶಿವಣ್ಣ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತಿವೆ.

ತಮ್ಮ ಚಿತ್ರದ ಬಗ್ಗೆ ಶಿವಣ್ಣ ಮಾತನಾಡುತ್ತ್ತಾ, ಚಿತ್ರದಲ್ಲಿ ಒಂದು ಕಲರ್ ಇದೆ, ಫ್ಯಾಷನ್ ಇದೆ, ಸ್ಪೀಡ್ ಇದೆ, ಸಂದೇಶವಿದೆ ಎಂದಿದ್ದಾರೆ. ಶಿವ ಚಿತ್ರ ಅತ್ತ ಮಾಸ್ ಇತ್ತ ಕ್ಲಾಸ್ ಪ್ರೇಕ್ಷಕರನ್ನು ಖಂಡಿತ ಸೆಳೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಚೇಸಿಂಗ್ ದೃಶ್ಯಗಳು ಹಾಗೂ ಗ್ಲಾಮರ್ ಗರ್ಲ್ ರಾಗಿಣಿ ದ್ವಿವೇದಿ ಮತ್ತೊಂದು ಆಕರ್ಷಣೆ. ಬಿಜಾಪುರದ ಗೋಲ್ ಗುಂಬಸ್, ಗೋವಾದಲ್ಲಿ ಚೇಸಿಂಗ್, ಕೋಲಾರದಲ್ಲಿ ಫೈಟಿಂಗ್ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.

ಚಿತ್ರದ ಪ್ರೊಮೋಗಳಲ್ಲಿ ತೋರಿಸುತ್ತಿರುವ ಡೈಲಾಗ್ಸ್ ಹೀಗಿವೆ. "ಶಿವ ಎರಡು ಕಣ್ಣು ತೆರೆದರೆ ಕ್ಲಾಸ್. ಮೂರನೇ ಕಣ್ಣು ತೆರೆದರೆ ಮಾಸ್. ಮೂರೂ ಕಣ್ಣು ತೆರೆದರೆ ಖಲ್ಲಾಸ್. ಮೈಯಲ್ಲಿ ಹರಿಯುತ್ತಿರುವುದು ರಕ್ತ ಅಲ್ಲ ಕರೆಂಟ್" ಎಂಬ ಡೈಲಾಗ್ ಗಳ ಜೊತೆಗೆ ಮತ್ತೊಂದು ಡೈಲಾಗ್ ತುಂಬ ಪವರ್ ಫುಲ್ ಆಗಿದೆ.

"ನಮ್ಮ ಫ್ಯಾಮಿಲೀಗೆ ಓಡಿಸೋದು ಗೊತ್ತೇ ಹೊರತು ಓಡಿ ಹೋಗೋದು ಗೊತ್ತಿಲ್ಲ...ಯಾರ ಹೆಸರು ಕೇಳಿದರೆ ಮೈಯಲ್ಲಿ ಮೊಸರು ಕಡಿದಂಗೆ ಆಗುತ್ತದೋ ಅವನೇ ಶಿವ" ಎಂಬ ಡೈಲಾಗ್ ಕೂಡ ಟಿವಿ ವಾಹಿನಿಗಳಲ್ಲಿ ಎಲ್ಲರ ಕಿವಿ ಅರಳುವಂತೆ ಮಾಡುತ್ತಿದೆ. ಚಿತ್ರದಲ್ಲಿ ಸಾಯಿಕುಮಾರ್ ಸಹೋದರ ರವಿಶಂಕರ್ ವಿಲನ್ ಪಾತ್ರ ಪೋಷಿಸಿದ್ದಾರೆ.

ಜೋಗಯ್ಯ' ಚಿತ್ರದ ಬಳಿಕ ಶಿವಣ್ಣ ಈ ಬಾರಿ ಸ್ಟೈಲಿಷ್ ಆಗಿ 'ಶಿವ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷ. ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ನಿರ್ಮಾಪಕರು ಕೆಪಿ ಶ್ರೀಕಾಂತ್. 'ಎಕೆ 47' ಹಾಗೂ 'ಸಿಂಹದ ಮರಿ' ಚಿತ್ರಗಳ ಬಳಿಕ ಓಂ ಪ್ರಕಾಶ್ ರಾವ್ ಹಾಗೂ ಶಿವಣ್ಣ ಕೈಜೋಡಿಸಿರುವ ಚಿತ್ರವಿದು. ಹತ್ತು ವರ್ಷಗಳ ಗ್ಯಾಪ್ ಬಳಿಕ ಓಂ ಡೈರೆಕ್ಷನ್ ನಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಚಿತ್ರದ ನಾಯಕಿ ರಾಗಿಣಿ ದ್ವಿವೇದಿ. (ಒನ್ ಇಂಡಿಯಾ ಕನ್ನಡ)

English summary
Century Star Shivarajkumar most awaited film Shiva all set to release on 24th August. Shiva opens two eyes it is Class, if he opens his third eye it is Mass, when he opens all the three eyes it is Kallas’. This is enough to describe that the film has the mass appeal.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada