»   » ಬ್ರಹ್ಮಚಾರಿ ಹನುಮಂತನಿಗೆ ರೋಮ್ಯಾನ್ಸ್ ಮಾಡೋ ಯೋಗ!

ಬ್ರಹ್ಮಚಾರಿ ಹನುಮಂತನಿಗೆ ರೋಮ್ಯಾನ್ಸ್ ಮಾಡೋ ಯೋಗ!

Posted By: ಜೀವನರಸಿಕ
Subscribe to Filmibeat Kannada

ಎಂಥಾ ಟೈಂ ಬಂತು ನೋಡಿ! ಹಾಗೆ ನೋಡಿದ್ರೆ ಹನುಮಂತ ಬ್ರಹ್ಮಚಾರಿ. ರಾಮಭಕ್ತ ಹನುಮ, ರಾಮನ ಸೇವೆಗಾಗಿ ತನ್ನ ಜೀವನವನ್ನೇ ವೀಸಲಾಗಿಟ್ಟ. ರಾಮ ಲಕ್ಷ್ಮಣ ಸೀತೆಯರ ಜೊತೆ ಶಾಶ್ವತ ಸ್ಥಾನವನ್ನೇ ಪಡ್ಕೊಂಡ. ಆದ್ರೆ ಸಿನಿಮಾದಲ್ಲಿ ರಾಮನಿಗಿಲ್ಲದ ಡಿಮಾಂಡು ಹನುಮನಿಗೆ.

ಈಗ ರಾಮನ ಬಗ್ಗೆ ಸಿನಿಮಾಗಳು ಬರ್ತಿಲ್ಲ. ಆದ್ರೆ ಹನುಮನ ಬಗ್ಗೆ ಸಾಲು ಸಾಲು ಸಿನಿಮಾಗಳು. ಹನುಮಂತ ಮಾಡ್ತಿರೋ ಅಂತಹ ಮ್ಯಾಜಿಕ್ ಏನೂ ಅಂತ ಗೊತ್ತಿಲ್ಲ. ಆದ್ರೆ ಈ ಬಲವಾನ್ ಶಕ್ತಿವಂತ ಹನುಮಾನ ಮಾತ್ರ ಸಿನಿಪ್ರೇಮಿಗಳ ಫೇವರೀಟ್ ಆಗ್ತಿದ್ದಾನೆ.

ಹನುಮ ಸಂಜೀವಿನಿ ಪರ್ವತ ತಂದು ಲಕ್ಷ್ಮಣನ ಪ್ರಾಣ ಉಳಿಸಿದ ಮಹಾತ್ಮ. ಲಂಕೆಯನ್ನ ಹಾರೋಕೆ ಅಗಾಧವಾಗಿ ಬೆಳೆದ ನಿಂತ ಮಹಾಮಹಿಮ. ಇದು ಕೇವಲ ಪುರಾಣವಲ್ಲ, ಇತಿಹಾಸವೂ ಹೌದು ಅಂತ ನಂಬುವ ಕಾಲ ಬಂದಿದೆ. ಇತಿಹಾಸ ಪುರಾಣ ಏನೇ ಇರ್ಲಿ ಈಗ ಹನುಮಾನ ಎಲ್ಲರ ಫೇವರೀಟ್ ನಾಯಕ.

ಈ ಸಿನೆಮಾಗಳಲ್ಲೆಲ್ಲ ಭಕ್ತಿ ಉಕ್ಕಿಸುವ ಸಿನೆಮಾಗಳೇನಲ್ಲ. ಇಲ್ಲಿ ಹೀರೋ ಫೈಟಿಂಗೂ ಮಾಡ್ತಾನೆ, ರೋಮ್ಯಾನ್ಸೂ ಮಾಡ್ತಾನೆ. ಆಂಜನೇಯನ ಪವರ್ ಫುಲ್ ಹೆಸರು ಹೇಳಿಕೊಂಡು ಕಾಸು ಮಾಡಿಕೊಳ್ಳುವ ತಂತ್ರವಿದು. ಈ ಸಿನೆಮಾಗಳು ಕ್ಲಿಕ್ ಆದರೆ ಉಳಿದ ನಿರ್ದೇಶಕರೂ ಭಜರಂಗಿಯ ಮೊರೆ ಹೋದರೆ ಅಚ್ಚರಿಯಿಲ್ಲ. [ವಜ್ರಕಾಯ ಚಿತ್ರವಿಮರ್ಶೆ]

ಸಲ್ಲೂ ಜೈ ಅಂದ್ರು ಭಜರಂಗಿಗೆ

ಸಲ್ಮಾನ್ ಖಾನ್ ಅಭಿನಯದಲ್ಲಿ ತೆರೆಗೆ ಬರೋಕೆ ತಯಾರಾಗಿರೋ ಚಿತ್ರ ಭಜರಂಗಿ ಭಾಯಿಜಾನ್. ಇಲ್ಲಿ ನಾಯಕ ಪವನ್ ಚತುರ್ವೇದಿ ಹನುಮಾನ್ ಪರಮ ಭಕ್ತ. ಹೀಗಾಗಿ ಸಿನಿಮಾದಲ್ಲಿ ಸಲ್ಲೂ ಹೆಸ್ರೇ ಭಜರಂಗಿ.

ರಂಜಾನ್ಗೆ ತೆರೆಗೆ ಭಜರಂಗಿ

ಪ್ರತೀವರ್ಷ ಸಲ್ಲೂನ ಒಂದು ಸಿನಿಮಾ ರಂಜಾನ್ಗೆ ತೆರೆಗೆ ಬರುತ್ತೆ. ಈ ಭಾರಿ ಭಜರಂಗಿ ಭಾಯಿಜಾನ್ ತೆರೆಗೆ ಅಪ್ಪಳಿಸುತ್ತಿದೆ. ಧರ್ಮದ ಭೇದವಿಲ್ಲದೆ ಸಿನಿಮಾ ನೋಡಿ ಚಿತ್ರಪ್ರೇಮಿಗಳಿಗೆ ಭಜರಂಗಿ ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ಸಲ್ಮಾನ್ ಗೆ ಜೋಡಿಯಾಗಿ ಕರೀನಾ ಕಪೂರ್ ಇದ್ದಾರೆ.

ಮೈ ನೇಮ್ ಈಸ್ ಅಂಜಿ

ಶಿವಣ್ಣ ಹರ್ಷ ಜೋಡಿ ಮುಂದಿನ ಸಿನಿಮಾ ಮೈ ನೇಮ್ ಈಸ್ ಅಂಜಿ. ಇಲ್ಲಿ ಕೂಡ ಆಂಜನೇಯನನ್ನ ಬಿಟ್ಟಿಲ್ಲ ಹರ್ಷ ಶಿವಣ್ಣ ಜೋಡಿ. ಹರ್ಷ-ಶಿವಣ್ಣ ಜೋಡಿಗೆ ಬ್ರೇಕ್ ಕೊಟ್ಟಿದ್ದೂ ಕೂಡ ಹನುಮನೇ ಭಜರಂಗಿ ಚಿತ್ರದ ಮೂಲಕ.

ಮತ್ತೊಮ್ಮೆ ಹನುಮನ ಕೃಪೆ

ಹ್ಯಾಟ್ರಿಕ್ ಹೀರೋ-ಹರ್ಷ ಜೋಡಿ ಮತ್ತೆ ಆಯ್ದುಕೊಂಡಿದ್ದು ಹನುಮಂತನ ಹೆಸ್ರನ್ನೇ ಅದು ವಜ್ರಕಾಯ. ವಜ್ರಕಾಯ ಕೂಡ ಗೆಲುವಿನ ಕೇಕೆ ಹಾಕ್ತಿದೆ. ಹನುಮಾನ್ ಹೆಸರಲ್ಲಿ ಗೆಲುವಿನ ಮ್ಯಾಜಿಕ್ ಇದೆ ಅಂತ ಚಿತ್ರಪ್ರೇಮಿಗಳು ಮಾತಾಡಿಕೊಳ್ತಿದ್ದಾರೆ.

ಶಿವಣ್ಣನಿಗೆ ಮನೆದೇವರು ಹನುಮ

ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮನೆದೇವ್ರು ಮುತ್ತತ್ತಿರಾಯ. ಮುತ್ತತ್ತಿರಾಯ ದೇವ್ರು ಅಂದ್ರೆ ಹನುಮಂತ. ಹಾಗಾಗೀನೇ ಡಾ.ರಾಜ್ ಫ್ಯಾಮಿಲಿಗೆ ಕೂಡ ಹನುಮಂತ ಅಂದ್ರೆ ಅಪಾರ ಭಕ್ತಿ. ಇದು ಸಿನಿಮಾದಲ್ಲೂ ಕಾಣಿಸ್ತಿದೆ.

ಟೈಟಲ್ಸಾಂಗ್ನಲ್ಲಿ ಕಾಣಿಸುತ್ತೆ ಭಕ್ತಿ

ವಜ್ರಕಾಯ ಟೈಟಲ್ಸಾಂಗ್ನಲ್ಲಿ ಶಿವಣ್ಣ ಚಪ್ಪಲಿ ಬಿಚ್ಚಿ ಡಾನ್ಸ್ ಮಾಡೋಕೆ ಶುರುಮಾಡಿದ್ರಂತೆ. ಇದನ್ನ ನೋಡಿದ ತೆಲುಗು ಮಾಸ್ ಮಹಾರಾಜ ರವಿತೇಜಾ, ತಮಿಳಿನ ಶಿವಕಾರ್ತಿಕೇಯನ್, ಮಲೆಯಾಳಂನ ಸ್ಟಾರ್ ನಟ ದಿಲೀಪ್ಕುಮಾರ್ ಸೇರಿದಂತೆ ಎಲ್ಲರೂ ಚಪ್ಪಲಿ ತೆಗೆದೇ ಡಾನ್ಸ್ ಮಾಡಿದ್ದಾರೆ.

ಭರ್ಜರಿ ಹನುಮಾನ್ ಭಕ್ತಿ

ಧ್ರುವ ಸರ್ಜಾ ಅಭಿನಯದ ಭರ್ಜರಿ ಮುಹೂರ್ತದಲ್ಲಿ ಅರ್ಜುನ್ ಸರ್ಜಾ ಇದ್ದಿದ್ದರಿಂದ ಹನುಮಾನ್ ಭಕ್ತಿ ತುಂಬಿ ತುಳುಕಿತ್ತು. ಮಾಧ್ಯಮದವ್ರ ಜೊತೆ ಮಾತ್ನಾಡಿ, ಕೊನೆಗೆ ಪ್ರತೀಬಾರಿಯೂ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಜೈ ಅಂಜನೇಯ ಅಂತ ಜಯಘೋಷ ಹಾಕ್ತಿದ್ರು.

ವೇದಿಕೆಯಲ್ಲೂ ಆಂಜನೇಯ

ಭರ್ಜರಿ ಮುಹೂರ್ತದ ವೇದಿಕೆಯಲ್ಲಿ ಅಭಿಮಾನಿಗಳ ಜೊತೆ ಮಾತ್ನಾಡಿದ ಧ್ರುವ ಸರ್ಜಾ ಅಭಿಮಾನಿಗಳಿಂದ ಒಂದು ಸಾರಿ ಜೈ ಅಂಜನೇಯ ಅನ್ನೋ ಜಯಘೋಷ ಹಾಕಿಸಿದ್ರು.

ಹರ್ಷ-ಶರಣ್ ಮಾರುತಿ ಭಕ್ತಿ

ಹರ್ಷ ಮುಂದಿನ ನಿರ್ದೇಶನದ ಚಿತ್ರ `ಜೈ ಮಾರುತಿ 800' ಈ ಚಿತ್ರದಲ್ಲಿ ಕೂಡ ಆಂಜನೇಯನ ಭಕ್ತಿಯ ಹೊಳೆ ಹರಿಯಲಿದೆ. ಮಾರುತಿ 800 ಇದ್ದ ಟೈಟಲ್ಲೇ ಜೈ ಮಾರುತಿ 800 ಆಗಿದೆ ಅಂದ್ರೆ ಯೋಚನೆ ಮಾಡಿ ಹನುಮಾನ್ ಪ್ರಭಾವ ಹೇಗಿದೆ ಅಂತ!

ಕಪಿಚೇಷ್ಠೆಯಲ್ಲೂ ಹನುಮ

ಜೈ ಮಾರುತಿ 800 ನಂತ್ರ ಹರ್ಷ ನಿರ್ದೇಶನ ಮಾಡ್ತಿರೋ ಚಿತ್ರ ಕಪಿಚೇಷ್ಠೆ. ಕಪಿ ಅಂದ್ರೆ ಹನುಮಂತ, ಮಾರುತಿ, ಆಂಜನೇಯ ಅಂತ ಮತ್ತೆ ಹೇಳ್ಬೇಕಾಗಿಲ್ಲ ಅಲ್ವಾ? ಇಲ್ಲಿ ಕೂಡ ಹನುಮ ಭಜನೆ ಮಾಡಲಿದೆ ಸ್ಯಾಂಡಲ್ವುಡ್.

English summary
Success of movies with Hanuman encouraging film makers to make more movies with Anjaneya in the title. Choreographer A Harsha has already done two movies with Lord Hanuman title and making another one. Hanuman title has gripped bollywood too. Salman Khan is also coming with Bhajarangi Bhaijan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada