»   » 'ರಾಜಮೌಳಿ'ಯಿಂದ ಪ್ರಭಾಸ್ ಗೆ ಸಿಕ್ತು ಊಹಿಸಲಾಗದ ಉಡುಗೊರೆ!

'ರಾಜಮೌಳಿ'ಯಿಂದ ಪ್ರಭಾಸ್ ಗೆ ಸಿಕ್ತು ಊಹಿಸಲಾಗದ ಉಡುಗೊರೆ!

Posted By:
Subscribe to Filmibeat Kannada

'ಬಾಹುಬಲಿ' ಎಂಬ ಮಹಾಚಿತ್ರಕ್ಕಾಗಿ ನಟ ಪ್ರಭಾಸ್ ಮೀಸಲಿಟ್ಟಿದ್ದು ಬರೋಬ್ಬರಿ 5 ವರ್ಷ. ಎರಡು ವರ್ಷದ ಹಿಂದೆ 'ಬಾಹುಬಲಿ ದಿ ಬಿಗಿನಿಂಗ್' ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈಗ 'ಬಾಹುಬಲಿ ದಿ ಕನ್ ಕ್ಲೂಷನ್' ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ.[ಏಪ್ರಿಲ್ 28ರಿಂದ ಗಾಂಧಿನಗರ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ!]

'ಬಾಹುಬಲಿ-2' ಚಿತ್ರ ಬಿಡುಗಡೆಗೂ ಮುಂಚೆ ನಿರ್ದೇಶಕ ರಾಜಮೌಳಿ ನಾಯಕ ನಟ ಪ್ರಭಾಸ್ ಗೆ ಸೂಪರ್ ಆಗಿರುವ ಉಡುಗೊರೆಯನ್ನ ಕೊಡುತ್ತಿದ್ದಾರೆ. ಇದು ಕೇವಲ ಚಿತ್ರದಲ್ಲಿ ನಟನೆ ಮಾಡಿದ್ದಕ್ಕೆ ಕೊಡ್ತಿರುವ ಗಿಫ್ಟ್ ಅಲ್ಲ. ಈ ಚಿತ್ರಕ್ಕಾಗಿ ಪ್ರಭಾಸ್ ನೀಡಿದ ಸಮಯ, ಶ್ರದ್ಧೆಗೆ ನೀಡ್ತಿರುವ ಅಭಿಮಾನದ ಉಡುಗೊರೆಯಂತೆ. ಅಷ್ಟಕ್ಕೂ, ಏನದು ಗಿಫ್ಟ್ ಅಂತ ಮುಂದೆ ಓದಿ.....

5 ವರ್ಷದ 'ಬಾಹುಬಲಿ'

ಡಾರ್ಲಿಂಗ್ ಪ್ರಭಾಸ್ 'ಬಾಹುಬಲಿ' ಚಿತ್ರಕ್ಕಾಗಿ ಬರೋಬ್ಬರಿ 5 ವರ್ಷ ತಮ್ಮನ್ನು ತಾವು ಮೀಸಲಿಟ್ಟುಕೊಂಡಿದ್ದರು. 2012 ರಲ್ಲಿ ಶುರುವಾದ ಈ ಜರ್ನಿ 2017ರ ವರೆಗೂ ಕರೆದುಕೊಂಡು ಬಂದಿದೆ. ಈ ಮಧ್ಯೆ ಯಾವುದೇ ಹೊಸ ಚಿತ್ರಗಳನ್ನ ಪ್ರಭಾಸ್ ಒಪ್ಪಿಕೊಂಡಿರಲಿಲ್ಲ.[ಬಿಡುಗಡೆಗೂ ಮುನ್ನವೇ ಬಯಲಾಯ್ತು 'ಕಟ್ಟಪ್ಪ ಬಾಹುಬಲಿಯನ್ನು ಕೊಂದ' ರಹಸ್ಯ]

ಪ್ರಭಾಸ್ ಗೆ ಸೂಪರ್ ಗಿಫ್ಟ್ ಕೊಟ್ಟ ರಾಜಮೌಳಿ

ಇದೇ ಕಾರಣದಿಂದ ರಾಜಮೌಳಿ ನಟ ಪ್ರಭಾಸ್ ಗೆ ವಿಶೇಷವಾದ ಉಡುಗೊರೆ ನೀಡಲಿದ್ದಾರೆ. 5 ವರ್ಷಗಳ ಕಾಲ ರಾಜಮೌಳಿ ಜೊತೆಯಾಗಿ ಪ್ರಭಾಸ್ ನೀಡಿದ ಅಭಿಮಾನಕ್ಕೆ ರಾಜಮೌಳಿ ತಮ್ಮ ಅಭಿಮಾನವನ್ನ ಈ ರೀತಿಯಾಗಿ ತೋರಿಸುತ್ತಿದ್ದಾರೆ.[ಬೆಂಗಳೂರಿನಲ್ಲಿ 'ಬಾಹುಬಲಿ 2' ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?]

ಏನದು ಗಿಫ್ಟ್!

ಮೂಲಗಳ ಪ್ರಕಾರ 'ಬಾಹುಬಲಿ' ಚಿತ್ರದಲ್ಲಿ ಪ್ರಭಾಸ್ ಬಳಕೆ ಮಾಡಿರುವ ಅಷ್ಟೂ ಯುದ್ಧೋಪಕರಣಗಳನ್ನು ಪ್ರಭಾಸ್ ಗೆ ಉಡುಗೊರೆಯಾಗಿ ನೀಡಲು ರಾಜಮೌಳಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.['ಕನ್ನಡದಲ್ಲಿ ಬಾಹುಬಲಿ'ಗಾಗಿ ಮತ್ತೆ ಜೋರಾಗಿದೆ ಕೂಗು]

ಖಡ್ಗ ಮತ್ತು ರಕ್ಷಾಕವಚ!

ವಿಶೇಷವಾಗಿ ಬಾಹುಬಲಿ ಪಾತ್ರದಲ್ಲಿ ಪ್ರಭಾಸ್ ಬಳಸಿರುವ ರಕ್ಷಾಕವಚ ಮತ್ತು ಕುದುರೆ ಮುಖದ ಖಡ್ಗವನ್ನ ರಾಜಮೌಳಿ ತಮ್ಮ ನೆಚ್ಚಿನ ನಟನಿಗೆ ಉಡುಗೊರೆಯಾಗಿ ನೀಡಲಿದ್ದಾರಂತೆ.

English summary
As Baahubali is ready to release, director SS Rajamouli has decided to gift Prabhas the armour which was worn by his character, Baahubali, in the film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X