For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಶುರುವಾದ ಮೊದಲ ದಿನವೇ ಆದಿಪುರುಷ್ ಸೆಟ್‌ನಲ್ಲಿ ಬೆಂಕಿ ಅವಘಡ

  |

  ಪ್ರಭಾಸ್ ನಟನೆಯ ಪೌರಾಣಿಕ ಚಿತ್ರ ಆದಿಪುರುಷ್ ಅಧಿಕೃತವಾಗಿ ಸೆಟ್ಟೇರಿದೆ. ಸಿನಿಮಾ ಆರಂಭವಾದ ಮೊದಲ ದಿನವೇ ಚಿತ್ರಕ್ಕೆ ವಿಘ್ನ ಎದುರಾಗಿದೆ. ಚಿತ್ರದ ಸೆಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

  ಮುಂಬೈನ ಗೋರೆಗಾಂವ್ ಪ್ರದೇಶದ ಇನೋರ್ಬಿಟ್ ಮಾಲ್‌ನ ಹಿಂಭಾಗದಲ್ಲಿರುವ ರೆಟ್ರೊ ಮೈದಾನದಲ್ಲಿ ಆದಿಪುರುಷ್ ಸಿನಿಮಾದ ಚಿತ್ರೀಕರಣ ನಡೆಸಲು ಸಿದ್ಧತೆ ನಡೆದಿತ್ತು. ಸೆಟ್‌ನಲ್ಲಿ ಸುಮಾರು ಐವತ್ತರಿಂದ ಅರವತ್ತು ಜನರು ಹಾಜರಿದ್ದರು. ಸಂಜೆ 4: 13ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬಾಲಿವುಡ್‌ ಮಾಧ್ಯಮಗಳು ವರದಿ ಮಾಡಿದೆ.

  'ಆದಿಪುರುಷ್' ಸಿನಿಮಾ; ಪ್ರಭಾಸ್ ತಾಯಿ ಪಾತ್ರಕ್ಕೆ ಆಯ್ಕೆಯಾದ ಸ್ಟಾರ್ ನಟಿ

  'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿರುವಂತೆ ಘಟನೆ ನಡೆದ ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನ, ಐದು ಜಂಬೋ ಟ್ಯಾಂಕರ್‌ಗಳು, ಒಂದು ವಾಟರ್ ಟ್ಯಾಂಕರ್ ಮತ್ತು ಜೆಸಿಬಿ ಆಗಮಿಸಿತ್ತು. ಅಗ್ನಿಶಾಮಕ ದಳ ನೀಡಿರುವ ಮಾಹಿತಿ ಪ್ರಕಾರ ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.

  ಬೆಂಕಿ ಕಾಣಿಸಿಕೊಂಡಾಗ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಸೆಟ್‌ನಲ್ಲಿ ಇರಲಿಲ್ಲ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಘಟನೆ ನಡೆದ ವೇಳೆ ಚಿತ್ರದ ನಿರ್ದೇಶಕ ಓಂ ರೌತ್ ಮತ್ತು ಮರಾಠಿ ನಟ ಸೂರ್ಯ ಅವರು ಈ ಸೆಟ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಕ್ರೋಮಾಕಿಯಿಂಗ್ (chroma key) ಪರದೆ ಬಳಸಿ ಚಿತ್ರೀಕರಣ ಮಾಡಲಾಗುತ್ತಿತ್ತು. ವಿಎಫ್‌ಎಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

  ಅಂದ್ಹಾಗೆ, ಇಂದು ಬೆಳಗ್ಗೆ ಆದಿಪುರುಷ್ ಚಿತ್ರತಂಡ ಅಧಿಕೃತವಾಗಿ ಮುಹೂರ್ತ ಮಾಡಿ, ಚಿತ್ರೀಕರಣ ಶುರು ಮಾಡಿದೆ. ಇನ್ಸ್ಟಾಗ್ರಾಂನಲ್ಲಿ ಪ್ರಭಾಸ್ ಪೋಸ್ಟ್ ಸಹ ಹಾಕಿದ್ದರು.

  ಸಲಾರ್ ಶೂಟಿಂಗ್ ಸೆಟ್‌ನಿಂದ ಸೆಲ್ಫಿ ಹಂಚಿಕೊಂಡ ನಟಿ ಶ್ರುತಿ ಹಾಸನ್

  ಪ್ರಭಾಸ್ ರಾಮನ ಪಾತ್ರದಲ್ಲಿ, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿ ಯಾರೆಂದು ಅಂತಿಮವಾಗಿಲ್ಲ. ರಾಮನ ತಾಯಿ ಕೌಸಲ್ಯ ಪಾತ್ರದಲ್ಲಿ ಹೇಮಾ ಮಾಲಿನಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಖಿಲಾ ಪಜಿಮಣ್ಣು | Akhila Pajimannu
  English summary
  Prabhas and Saif Ali Khan Starrer Adipurush Sets Caught Fire Today Due to Short Circuit. No Injuries Have Been Reported Yet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X