»   » ಕೊನೆಗೂ ಮದುವೆ-ಅನುಷ್ಕಾ ಲವ್ ರೂಮರ್ಸ್ ಬಗ್ಗೆ ಬಾಯ್ಬಿಟ್ಟ ಪ್ರಭಾಸ್!

ಕೊನೆಗೂ ಮದುವೆ-ಅನುಷ್ಕಾ ಲವ್ ರೂಮರ್ಸ್ ಬಗ್ಗೆ ಬಾಯ್ಬಿಟ್ಟ ಪ್ರಭಾಸ್!

Posted By:
Subscribe to Filmibeat Kannada

'ಬಾಹುಬಲಿ 2' ಬಿಡುಗಡೆ ನಂತರ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ರವರ ಲವ್ ರೂಮರ್ಸ್ ಮತ್ತು ಮದುವೆ ಬಗೆಗಿನ ಸುದ್ದಿಗಳು ಆನ್‌ಲೈನ್‌ ನಲ್ಲಿ ವೈರಲ್ ಆಗಿದ್ದವು.

ಪ್ರಭಾಸ್ ರವರು 'ಬಾಹುಬಲಿ 2' ಸಿನಿಮಾ ಬಿಡುಗಡೆ ನಂತರ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಹೀಗೆ ಓಡಾಡಿದ್ದ ಯಾವುದೇ ಸುದ್ದಿಗಳು ನಿಜವು ಅಲ್ಲ.. ಹಾಗೆ ನಿಜವಾಗಲು ಇಲ್ಲ. ಆದರೆ ಇದೇ ಮೊದಲ ಬಾರಿಗೆ ಕೊನೆಗೂ ಟಾಲಿವುಡ್ ನ ಡಾರ್ಲಿಂಗ್ ಪ್ರಭಾಸ್ ರವರು ತಮ್ಮ ಮದುವೆ ಬಗ್ಗೆ ಮತ್ತು ಅನುಷ್ಕಾ ಶೆಟ್ಟಿಯೊಂದಿಗಿನ ಲವ್ ರೂಮರ್ಸ್ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದಾದರೂ ಏನು ತಿಳಿಯಲು ಮುಂದೆ ಓದಿರಿ..

ಫೀಮೇಲ್ ಫ್ಯಾನ್ಸ್‌ಗಳಿಗೆ ಡೋಂಟ್‌ ವರಿ ಎಂದ ಪ್ರಭಾಸ್

ಇತ್ತೀಚೆಗೆ 'ಹಿಂದೂಸ್ತಾನ್ ಟೈಮ್ಸ್‌' ಜೊತೆಗಿನ ಸಂದರ್ಶನದಲ್ಲಿ "ಪ್ರಸ್ತುತದಲ್ಲಿ ನನ್ನ ಅಭಿಮಾನಿಗಳು( Female Fans) ಯಾರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ' ನಾನು ಈಗಲೇ ಮದುವೆ ಆಗುವುದಿಲ್ಲ. ಅದರ ಬಗ್ಗೆ ಅಲೋಚನೆ ಸಹ ಮಾಡಿಲ್ಲ" ಎಂದಿದ್ದಾರೆ.

ನಾನೊಬ್ಬ ಲಕ್ಕೀ ಎಂದು ಫೀಲ್ ಆಗುತ್ತಿದೆ

"ನಾನೊಬ್ಬ ಲಕ್ಕಿ ಪರ್ಸನ್ ಎಂಬ ಫೀಲ್ ಆಗುತ್ತಿದೆ. ಯಾಕಂದ್ರೆ ತುಂಬಾ ಜನರು ನನ್ನನ್ನು ಇಷ್ಟಪಡುತ್ತಾರೆ" ಎಂದು ಸಂದರ್ಶನದ ವೇಳೆ ಪ್ರಭಾಸ್ ಹೇಳಿದ್ದಾರೆ. ಅಲ್ಲದೇ ರಾಣಾ ದಗ್ಗುಬಾಟಿ ರವರು ಪ್ರಭಾಸ್ ರ ಪೋಟೋವನ್ನು ಮ್ಯಾಟ್ರಿಮೋನಿ ವೆಬ್‌ಸೈಟ್‌ಗೆ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ 'ಯಾರಾದ್ರು ನಿಮಗೆ ನಾನು ಮದುವೆ ಆಗುತ್ತಿದ್ದೇನೆ ಅಂದ್ರ?' ಎಂದು ಪ್ರಶ್ನೆಯನ್ನು ಸಹ ಕೇಳಿದ್ದಾರೆ.

ಅನುಷ್ಕಾ ಜೊತೆಗಿನ ಪ್ರೀತಿಯ ಗಾಳಿಸುದ್ದಿ ಬಗ್ಗೆ

ಅನುಷ್ಕಾ ಶೆಟ್ಟಿ ಮತ್ತು ತಮ್ಮ ನಡುವಿನ ಮದುವೆ-ಲವ್ ಗಾಸಿಪ್ ಸುದ್ದಿಗಳ ಬಗ್ಗೆ ಮಾತನಾಡಿದ ಪ್ರಭಾಸ್, 'ಇಂತಹ ಸುದ್ದಿಗಳು ಸಾಮಾನ್ಯ. ಒಬ್ಬ ನಟ ಮತ್ತು ನಟಿ ಎರಡಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೆ ಜನರು ಈ ರೀತಿಯ ಗಾಳಿಸುದ್ದಿಯನ್ನು ಹಬ್ಬಿಸುತ್ತಾರೆ. ಇನ್‌ ಫ್ಯಾಕ್ಟ್ ನಾನು ಇದನ್ನು ಮೊದಲೇ ನಿರೀಕ್ಷೆ ಮಾಡಿದ್ದೆ" ಎಂದು ನುಡಿದಿದ್ದಾರೆ.

ನನಗೂ ಬೇಸರ ಆಗುತ್ತಿತ್ತು..

"ಈಗ ನನಗೆ ಈ ಸುದ್ದಿಗಳೆಲ್ಲಾ ಸಾಮಾನ್ಯವಾಗಿವೆ. ಆದರೆ ಮೊದಲೆಲ್ಲಾ ನನಗೆ ತುಂಬಾ ಬೇಸರವಾಗುತ್ತಿತ್ತು. 'ಅದ್ ಹೇಗಾದ್ರು ಈ ರೀತಿ ಎಲ್ಲಾ ಬರೀತಾರೆ?' ಎನ್ನುತ್ತಿದ್ದೆ. ಈಗ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" -ಪ್ರಭಾಸ್, ಟಾಲಿವುಡ್ ನಟ

'ಸಾಹೋ'ದಲ್ಲಿ ಪ್ರಭಾಸ್ ಬ್ಯುಸಿ

ಸದ್ಯದಲ್ಲಿ ಪ್ರಭಾಸ್ ರವರು ಸುಜೀತ್ ನಿರ್ದೇಶನದ 'ಸಾಹೋ' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಜೊತೆಯಾಗಲಿದ್ದಾರೆ ಎನ್ನುತ್ತಿವೆ ಮೂಲಗಳು.

English summary
Finally, Prabhas talks about his Wedding and His affair with Anushka Shetty.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X