»   » ಸುದೀಪ್ ಮಾಣಿಕ್ಯ ವೀಕ್ಷಿಸಲಿರುವ ರೆಬೆಲ್ ಸ್ಟಾರ್

ಸುದೀಪ್ ಮಾಣಿಕ್ಯ ವೀಕ್ಷಿಸಲಿರುವ ರೆಬೆಲ್ ಸ್ಟಾರ್

By: ಉದಯರವಿ
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರಿ ತಾರಾಗಣದ ಬಿಗ್ ಬಜೆಟ್ ಸಿನಿಮಾ 'ಮಾಣಿಕ್ಯ' ವೀಕ್ಷಣೆಗೆ ರೆಬೆಲ್ ಸ್ಟಾರ್ ಮುಂದಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ನೋಡೋವಷ್ಟು ಪುರುಸೋತ್ತು ಅವರಿಗೆ ಎಲ್ಲಿಗೆ ಸ್ವಾಮಿ ಎಂಬುದು ತಾನೆ ನಿಮ್ಮ ಅನುಮಾನ. ಹಂಡ್ರಡ್ ಪರ್ಸೆಂಟ್ ಕರೆಕ್ಟ್!

'ಮಾಣಿಕ್ಯ' ನೋಡಲು ಮುಂದಾಗುತ್ತಿರುವುದು ನಮ್ಮ ರೆಬೆಲ್ ಸ್ಟಾರ್ ಅಂಬರೀಶ್ ಅಲ್ಲ, ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಪ್ರಭಾಸ್. ತೆಲುಗಿನ 'ಮಿರ್ಚಿ' ಚಿತ್ರದಲ್ಲಿ ಮಿಂಚಿದ್ದ ಪ್ರಭಾಸ್ ಅವರ ಪಾತ್ರವನ್ನು 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಆವಾಹಿಸಿಕೊಂಡಿದ್ದಾರೆ. [ಮಾಣಿಕ್ಯ ಚಿತ್ರವಿಮರ್ಶೆ]

Prabhas Wants To Watch Sudeep's Maanikya

'ಮಾಣಿಕ್ಯ' ಚಿತ್ರದ ಬಗ್ಗೆ ಕೇಳಿಬರುತ್ತಿರುವ ಮೆಚ್ಚುಗೆಯ ಮಾತುಗಳಿಗೆ ಪ್ರಭಾಸ್ ಬೆರಗಾಗಿದ್ದಾರೆ. ಮೂಲ ಚಿತ್ರವನ್ನು ಕನ್ನಡಕ್ಕೆ ಹೇಗೆ ತಂದಿದ್ದಾರೆ ಹಾಗೂ ತಾವು ಪೋಷಿಸಿದ್ದ ಪಾತ್ರವನ್ನು ಸುದೀಪ್ ಹೇಗೆಲ್ಲಾ ಮಾಡಿದ್ದಾರೆ ಎಂಬ ಕುತೂಹಲ ಅವರನ್ನು ಚಿತ್ರ ವೀಕ್ಷಿಸುವಂತೆ ಮಾಡಿದೆ.

ಶೀಘ್ರದಲ್ಲೇ ಮಾಣಿಕ್ಯ ಚಿತ್ರವನ್ನು ವೀಕ್ಷಿಸುತ್ತೇನೆ. ನನಗೆ ಕನ್ನಡ ಅರ್ಥವಾಗಲ್ಲ, ದಯವಿಟ್ಟು ಯಾರಾದರು ಕಲಿಸಿ ಎಂದು ಅವರು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಅವರು ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಮೂಲ 'ಮಿರ್ಚಿ' ಚಿತ್ರಕ್ಕೆ ಹೋಲಿಸಿದರೆ ಮಾಣಿಕ್ಯ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಒಂದು ಕೈ ಮೇಲೆ ಇದೆ ಎನ್ನುತ್ತವೆ ಮೂಲಗಳು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುದೀಪ್ ಅವರ ಅಪ್ಪ ಮಗನ ರೋಲ್ ಚಿತ್ರಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ. ರೀಮೇಕ್ ಮಾಡಿ ಗೆಲ್ಲುವುದು ಹೇಗೆ ಎಂಬ ಕಲೆ ಸುದೀಪ್ ಅವರಿಗೆ ಸಿದ್ಧಿಸಿದೆ.

English summary
Telugu Superstar Rebel Star Prabhas has expressed his desire to watch Kannada movie Maanikya, which is the remake of Telugu hit Mirchi. The original film had Prabhas in the lead role. 
Please Wait while comments are loading...