For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ, ಪ್ರಭುದೇವ ಸಿನಿಮಾ ರಹಸ್ಯ: ಹೈ ಓಲ್ಟೇಜ್ ಆ್ಯಕ್ಷನ್ ಡ್ರಾಮಾ, ಪ್ಯಾನ್ ಇಂಡಿಯಾ ಸಿನಿಮಾ!

  |

  ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ ತೆರೆಗೆ ಬಂದು ಬಹಳ ಸಮಯ ಆಗಿದೆ. ಭಟ್ಟರನ್ನು ಸಿನಿಮಾರಂಗದಲ್ಲಿ ವಿಕಟ ಕವಿ ಅಂತಲೆ ಕರೆಯಲಾಗುತ್ತದೆ. ಯಾಕೆಂದರೆ ಭಟ್ಟರ ಡಿಫ್ರೆಂಟ್ ಸಿನಿಮಾಗಳಿಗೆ ಹೆಚ್ಚಿನ ಪ್ರೇಕ್ಷಕರು ಇದ್ದಾರೆ. ಕೊರೊನಾ ಬ್ರೇಕ್ ಬಳಿಕ ಸಿನಿಮಾರಂಗ ಸಕ್ರಿಯವಾಗಿದ್ದು, ಯೋಗರಾಜ್ ಭಟ್ಟರು ಕೂಡ ಸಾಲು, ಸಾಲು ಸಿನಿಮಾ ಮಾಡುತ್ತಾ ಇದ್ದಾರೆ.

  ನಿರ್ದೇಶಕ ಯೋಗರಾಜ್ ಭಟ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಅವರ ಮತ್ತೊಂದು ಸಿನಿಮಾ ಹೆಚ್ಚಿನ ಸದ್ದು ಮಾಡುತ್ತಾ ಇದೆ. ಯಾಕೆಂದರೆ ಇದು ಸಿನಿಮಾವನ್ನು ಶಿವರಾಜ್ ನಟನೆಯ ಸಿನಿಮಾ ಆಗಿದೆ.

  OTTಯಿಂದ 'ಗಾಳಿಪಟ 2' ಚಿತ್ರಕ್ಕೆ ಭಾರಿ ಬೇಡಿಕೆ!OTTಯಿಂದ 'ಗಾಳಿಪಟ 2' ಚಿತ್ರಕ್ಕೆ ಭಾರಿ ಬೇಡಿಕೆ!

  ನಟ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿ ಬಂದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಬಗ್ಗೆ ಈಗ ನಿರ್ದೇಶಕ ಯೋಗರಾಜ್ ಭಟ್ ಫಿಲ್ಮಿ ಬೀಟ್‌ ಜೊತೆಗೆ ಮಾತನಾಡಿದ್ದಾರೆ. ಪೂರ್ಣ ಮಾಹಿತಿ ಮುಂದೆ ಓದಿ...

  ಪ್ರಭುದೇವ, ಶಿವಣ್ಣ ಸಿನಿಮಾದ ಅಪ್ಡೇಟ್ ಕೊಟ್ಟ ಭಟ್ರು!

  ಶಿವರಾಜ್ ಕುಮಾರ್ ಮತ್ತು ಪ್ರಭುದೇವಾ ಕಾಂಬಿನೇಶನ್‌ನಲ್ಲಿ ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನ ಇರಲಿದೆ. ಹಲವು ದಿನಗಳ ನಂತರ ಸಿನಿಮಾದ ಬಗ್ಗೆ ಭಟ್ಟರು ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಕೂಡ ಹಾಕಿದ್ದಾರೆ. ಈ ಸಿನಿಮಾವನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಾ ಇದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಲಿದೆ ಎಂದಿದ್ದರೆ ಭಟ್ಟರು.

  ಶಿವರಾಜ್ ಕುಮಾರ್ ಮತ್ತು ಪ್ರಭುದೇವಾ ಕಾಂಬಿನೇಶನ್‌ನಲ್ಲಿ ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನ ಇರಲಿದೆ. ಹಲವು ದಿನಗಳ ನಂತರ ಸಿನಿಮಾದ ಬಗ್ಗೆ ಭಟ್ಟರು ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಕೂಡ ಹಾಕಿದ್ದಾರೆ. ಈ ಸಿನಿಮಾವನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಾ ಇದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಲಿದೆ ಎಂದಿದ್ದರೆ ಭಟ್ಟರು.

  ಯೋಗರಾಜ್ ಭಟ್ 'ಗರಡಿ' ಅಡ್ಡಾದಲ್ಲಿ ದರ್ಶನ್ ಪ್ರತ್ಯಕ್ಷ : ಮ್ಯಾಟರ್ ಏನು?ಯೋಗರಾಜ್ ಭಟ್ 'ಗರಡಿ' ಅಡ್ಡಾದಲ್ಲಿ ದರ್ಶನ್ ಪ್ರತ್ಯಕ್ಷ : ಮ್ಯಾಟರ್ ಏನು?

  ಪ್ರಭುದೇವ, ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾ!

  ಪ್ರಭುದೇವ, ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾ!

  ಸದ್ಯಕ್ಕಂತೂ ಯಾವುದೇ ದೊಡ್ಡ ಸಿನಿಮಾ ಸೆಟ್ಟೇರಿದರೂ ಅದು ಪ್ಯಾನ್ ಇಂಡಿಯಾ ಆಗುತ್ತಾ ಎನ್ನುವ ಬಗ್ಗೆ ಪ್ರಶ್ನೆ ಮೂಡುತ್ತದೆ. ಅಂತೆಯೇ ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎನ್ನುವುದನ್ನು ಭಟ್ಟರು ಖಚಿತ ಪಡಿಸಿದ್ದಾರೆ. "ಈ ಚಿತ್ರಕ್ಕಾಗಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ. ಇದೊಂದು ಹೈ ಓಲ್ಟೇಜ್ ಆ್ಯಕ್ಷನ್ ಡ್ರಾಮಾ ಆಗಿರಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಸದ್ಯದಲ್ಲೆ ಚಿತ್ರ ಮತ್ತು ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ." ಎಂದು ಹೇಳಿದ್ದಾರೆ.

  ಭಟ್ಟರ ಮುಂದಿನ ಸಿನಿಮಾ 'ಗಾಳಿಪಟ 2'!

  ಭಟ್ಟರ ಮುಂದಿನ ಸಿನಿಮಾ 'ಗಾಳಿಪಟ 2'!

  ಗಾಳಿಪಟ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈಗ ಈ ಚಿತ್ರದ ಹೆಸರಲ್ಲಿ ಅದೇ ಟೀಂ ಮತ್ತೊಂದು ಸಿನಿಮಾ ಮಾಡುತ್ತಿದೆ. ನಿರ್ದೇಶಕ ಯೋಗರಾಜ್ ಭಟ್ ಸಾರಥ್ಯದಲ್ಲಿಯೇ 'ಗಾಳಿಪಟ 2' ಸಿನಿಮಾ ಬರುತ್ತಿದೆ. ಸದ್ಯ ಸಿನಿಮಾ ಬಹುತೇಕ ಕೆಲಸಗಳು ಮುಗಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ನಟ ಗಣೇಶ್, ದಿಗಂತ್ ಮತ್ತು ನಿರ್ದೇಶಕ ಪವನ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಮೈಸೂರಿನ 'ಗರಡಿ' ಮನೆಯಲ್ಲಿ ನಿರ್ದೇಶಕ ಯೋಗರಾಜ್‌ ಭಟ್ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ಮೈಸೂರಿನ 'ಗರಡಿ' ಮನೆಯಲ್ಲಿ ನಿರ್ದೇಶಕ ಯೋಗರಾಜ್‌ ಭಟ್ ಸಾಹಸ ನಿರ್ದೇಶಕ ಕೌರವ ವೆಂಕಟೇಶ್

  ಹೈ ಓಲ್ಟೇಜ್ ಆ್ಯಕ್ಷನ್ ಸಿನಿಮಾ!

  ಹೈ ಓಲ್ಟೇಜ್ ಆ್ಯಕ್ಷನ್ ಸಿನಿಮಾ!

  ಗಾಳಿಪಟ 2 ಸಿನಿಮಾದ ಬಳಿಕ ನಿರ್ದೇಶಕ ಯೋಗರಾಜ್ ಭಟ್ಟರ 'ಗರಡಿ' ಸಿನಿಮಾ ತೆರೆಕಾಣಲಿದೆ. ಸದ್ಯ ಈ ಚಿತ್ರದ ಶೂಟಿಂಗ್‌ನಲ್ಲಿ ಭಟ್ಟರು ಬ್ಯುಸಿ ಇದ್ದಾರೆ. ಇನ್ನು ಈ ಎರಡು ಸಿನಿಮಾಗಳ ಬಳಿಕ ಶಿವಣ್ಣ, ಪ್ರಭುದೇವ ಜೊತೆಗಿನ ಸಿನಿಮಾ ಆರಂಭ ಮಾಡಲಿದ್ದಾರೆ. ಈ ಸಿನಿಮಾ ಹೈ ಓಲ್ಟೇಜ್ ಆ್ಯಕ್ಷನ್ ಡ್ರಾಮ್ ಎಂದಿರುವ ಕಾರಣ ಹೇಗಿರಬಹುದು, ಕಥೆ ಏನಾಗಿರಬಹುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿವೆ.

  English summary
  Prabhudeva And Shiva Rajkumar Combination Movie Starts Soon, Yogaraj Bhat Confirms, Know More
  Tuesday, May 24, 2022, 16:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X