For Quick Alerts
  ALLOW NOTIFICATIONS  
  For Daily Alerts

  'ಪುನೀತ್ ಪರ್ವ' ವೇದಿಕೆಯಲ್ಲಿ ಪರ್ಫಾಮೆನ್ಸ್ ನೀಡುವ ಸೆಲೆಬ್ರೆಟಿಗಳು, ಅತಿಥಿಗಳ ಲಿಸ್ಟ್ ಇಲ್ಲಿದೆ!

  |

  ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಕನಸಿನ ಅನಾವರಣಕ್ಕೆ ದಿನಗಣನೆ ಆರಂಭ ಆಗಿದೆ. ಅಕ್ಟೋಬರ್ 28ಕ್ಕೆ ಅಪ್ಪು ಕಣ್ತುಂಬಿಕೊಳ್ಳುವ ಕೊನೆಯ ಅವಕಾಶ. ಅದಕ್ಕಾಗಿ ಹಿಂದೆಂದೂ ಅಭಿಮಾನಿಗಳು ನೋಡದೆ ಇರುವಷ್ಟು ಅದ್ಧೂರಿಯಾಗಿ ಪ್ರಿ-ರಿಲೀಸ್ ಇವೆಂಟ್‌ ಅನ್ನು ಹಮ್ಮಿಕೊಳ್ಳಲಾಗಿದೆ.

  'ಪುನೀತ್ ಪರ್ವ' ಪ್ರಿ-ರಿಲೀಸ್ ಇವೆಂಟ್ ಅಕ್ಟೋಬರ್ 21ಕ್ಕೆ ಅದ್ಧೂರಿಯಾಗಿ ನಡೆಯುತ್ತಿದೆ. ಈಗಾಗಲೇ 'ಗಂಧದ ಗುಡಿ' ತಂಡ ಹಗಲು ರಾತ್ರಿ ಎನ್ನದೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತಕ್ಕೆ ಆಹ್ವಾನ ನೀಡಲಾಗಿದೆ.

  'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ ಬರೋ ಗೆಸ್ಟ್ ಯಾರು? ಇಲ್ಲಿದೆ ಕಂಪ್ಲೀಟ್ ಲಿಸ್ಟ್! 'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ ಬರೋ ಗೆಸ್ಟ್ ಯಾರು? ಇಲ್ಲಿದೆ ಕಂಪ್ಲೀಟ್ ಲಿಸ್ಟ್!

  ಅಪ್ಪು ನೆನಪಿಗಾಗಿ 'ಪುನೀತ್ ಪರ್ವ' ಕಾರ್ಯಕ್ರಮದಲ್ಲಿ ತಾರೆಯರು ಡ್ಯಾನ್ಸ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಸ್ಯಾಂಡ್‌ವುಡ್ ಸೇರಿದಂತೆ ದಕ್ಷಿಣ ಭಾರತದ ಬೇರೆ ಬೇರೆ ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ವೇದಿಕೆ ಪರ್ಫಾಮೆನ್ಸ್ ನೀಡುವವರು ಯಾರು? ಬೇರೆ ಚಿತ್ರರಂಗದಿಂದ ಅತಿಥಿಗಳಾಗಿ ಬರೋರು ಯಾರು? ಅನ್ನುವ ಲಿಸ್ಟ್ ಇಲ್ಲಿದೆ.

  ಶಿವಣ್ಣ- ಪ್ರಭುದೇವ ಡ್ಯಾನ್ಸ್

  ಶಿವಣ್ಣ- ಪ್ರಭುದೇವ ಡ್ಯಾನ್ಸ್

  'ಪುನೀತ್ ಪರ್ವ' ಕಾರ್ಯಕ್ರಮದಲ್ಲಿ ಕೇವಲ ಮಾತುಕತೆಗಳಷ್ಟೇ ಇರುವುದಿಲ್ಲ. ಅಪ್ಪು ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ಡ್ಯಾನ್ಸ್ ಪರ್ಫಾಮೆನ್ಸ್ ಕೂಡ ಇರುತ್ತೆ. ಅಪ್ಪು ಹಾಡುಗಳಿಗೆ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್, ಭಾರತದ ಮೈಕಲ್ ಜಾಕ್ಸನ್, ಡ್ಯಾನ್ಸ್ ಕಿಂಗ್ ಪ್ರಭುದೇವ ಪ್ರತ್ಯೇಕವಾಗಿ ಲೈವ್ ಪರ್ಫಾಮೆನ್ಸ್ ನೀಡಲಿದ್ದಾರೆ. ಈ ಪರ್ಫಾಮೆನ್ಸ್ ಬೇಕಿರೋ ಸಿದ್ಧತೆಗಳು ತೆರೆಮರೆಯಲ್ಲಿ ಈಗಾಗಲೇ ನಡೆಯುತ್ತಿದೆ. ಹೀಗಾಗಿ ಅಭಿಮಾನಿಗಳು ಶಿವಣ್ಣ ಹಾಗೂ ಪ್ರಭುದೇವ ಡ್ಯಾನ್ಸ್ ಅನ್ನು ಕಣ್ತುಂಬಿಕೊಳ್ಳಬಹುದು.

  'ಹೆಡ್ ಬುಷ್' ಟ್ರೈಲರ್ ಲಾಂಚ್ ವೇಳೆ ಅಪ್ಪು ಎಂದ ಫ್ಯಾನ್ಸ್ ಮುಂದೆ ರಮ್ಯಾ ಭಾವುಕ'ಹೆಡ್ ಬುಷ್' ಟ್ರೈಲರ್ ಲಾಂಚ್ ವೇಳೆ ಅಪ್ಪು ಎಂದ ಫ್ಯಾನ್ಸ್ ಮುಂದೆ ರಮ್ಯಾ ಭಾವುಕ

  ರಮ್ಯಾ ಲೈವ್ ಪರ್ಫಾಮೆನ್ಸ್

  ರಮ್ಯಾ ಲೈವ್ ಪರ್ಫಾಮೆನ್ಸ್

  ಮೋಹಕತಾರೆ ರಮ್ಯಾ ಕಳೆದ ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರು. ಆದರೂ, ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯಾ ಸ್ನೇಹ ಮಾತ್ರ ಕಮ್ಮಿಯಾಗಿರಲಿಲ್ಲ. 'ಅಭಿ' ಸಿನಿಮಾದಿಂದಲೇ ವೃತ್ತಿ ಬದುಕು ಆರಂಭಿಸಿದ್ದ ಮೋಹಕತಾರೆ ಈ ವಿಶೇಷ ದಿನದಂದು ವೇದಿಕೆ ಡ್ಯಾನ್ಸ್ ಮಾಡಲಿದ್ದಾರೆ. ಅಪ್ಪು ಜೊತೆ ನಟಿಸಿದ ತಮ್ಮದೇ ಸಿನಿಮಾದ ಹಾಡುಗಳಿಗೆ ರಮ್ಯಾ ಹೆಜ್ಜೆ ಹಾಕಲಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ರಮ್ಯಾ ವೇದಿಕೆ ಮೇಲೆ ಹೆಜ್ಜೆ ಹಾಕುವುದನ್ನು ನೋಡಬಹುದು.

  ಅರ್ಮಾನ್ ಮಲಿಕ್ ಗಾಯನ

  ಅರ್ಮಾನ್ ಮಲಿಕ್ ಗಾಯನ

  ಬಾಲಿವುಡ್‌ನ ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಸ್ಯಾಂಡಲ್‌ವುಡ್‌ನಲ್ಲೂ ಫೇಮಸ್. ಕನ್ನಡದಲ್ಲೂ ಹಲವು ಹಾಡುಗಳನ್ನು ಹಾಡಿದ್ದಾರೆ. 'ಪುನೀತ್ ಪರ್ವ' ವೇದಿಕೆ ಮೇಲೆ ಸುಮಧುರ ಕಂಠದ ಗಾಯಕಸ ಅರ್ಮಾನ್ ಮಲಿಕ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಡುಗಳನ್ನು ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಕ್ಟೋಬರ್ 21 ಮರೆಯಲಾರದ ಘಳಿಗೆ. ಇಂತಹ ಅದ್ಧೂರಿ ಕಾರ್ಯಕ್ರಮದಲ್ಲಿ ಜನಪ್ರಿಯ ಗಾಯಕರ ಸಮಾಗಮವೇ ಆಗಲಿದೆ. ವಿಜಯ್ ಪ್ರಕಾಶ್, ಟಿಪ್ಪು, ಕುನಾಲ್ ಗಾಂಜವಾಲ, ಗುರುಕಿರಣ್ ಸೇರಿದಂತೆ ಜನಪ್ರಿಯ ಗಾಯಕರು ಈ ವೇದಿಕೆ ಮೇಲೆ ಅಪ್ಪು ಹಾಡುಗಳನ್ನು ಹಾಡಲಿದ್ದಾರೆ.

  'ಪುನೀತ್ ಪರ್ವ'ದ ಅತಿಥಿಗಳು ಯಾರು?

  'ಪುನೀತ್ ಪರ್ವ'ದ ಅತಿಥಿಗಳು ಯಾರು?

  'ಪುನೀತ್ ಪರ್ವ' ಕಾರ್ಯಕ್ರಮದ ಅತಿಥಿಗಳಾಗಿ ದಕ್ಷಿಣ ಭಾರತದ ದಿಗ್ಗಜರು ಆಗಮಿಸಲಿದ್ದಾರೆ. ಕಮಲ್ ಹಾಸನ್, ನಾಗಾರ್ಜುನ, ರಾಣಾ ದಗ್ಗುಬಾಟಿ, ಸೂರ್ಯ, ಅರ್ಜುನ್ ಸರ್ಜಾ, ಚಿರಂಜೀವಿ ಆಗಮಿಸಲಿದ್ದಾರೆ. ಇನ್ನೊಂದು ಕಡೆ ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಹಾಗೂ ತಂತ್ರಜ್ಞರಿಗೂ ಆಹ್ವಾನ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಆಗಮಿಸುತ್ತಾರೆ? ದರ್ಶನ್, ಸುದೀಪ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರಾ? ಅನ್ನೋ ಕುತೂಹಲವಿದೆ.

  English summary
  Prabhudeva, Shivarajkumar, Ramya Will Be Performing in Puneeth Parva Gandhada Gudi, Know More.
  Wednesday, October 19, 2022, 23:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X