For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಬುಲ್ ಬುಲ್' ಜೊತೆ ರಾವತ್ ರಗಳೆ

  By Rajendra
  |

  ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ನಟ ಪ್ರದೀಪ್ ರಾವತ್. ಸದ್ಯಕ್ಕೆ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರತಂಡದೊಂದಿಗೆ ಇಲ್ಲಸಲ್ಲದ ಕ್ಯಾತೆ ತೆಗೆದು ಅವಕಾಶ ಕಳೆದುಕೊಂಡಿದ್ದಾನೆ.

  ಆದರೆ ಈತನ ಕ್ಯಾತೆಗೆ ಬೇಸತ್ತ ನಿರ್ದೇಶಕರು ರಾವತ್ ನನ್ನು ಚಿತ್ರತಂಡದಿಂದ ಕೈಬಿಟ್ಟಿದ್ದಾರೆ. 'ಬುಲ್ ಬುಲ್' ಚಿತ್ರದಲ್ಲಿ ರಾವತ್ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿತ್ತು. ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ರಾವತ್ ನನ್ನು ಕರೆತರಲು ಚಿತ್ರತಂಡ ಕಾರು ಕಳುಹಿಸಿದೆ.

  ತಮಗೆ ಕಳುಹಿಸಿರುವ ಕಾರಿನಲ್ಲಿ ಎಸಿ ಇಲ್ಲ. ಸಾಲದಕ್ಕೆ ಅದು ದೊಡ್ಡ ಕಾರು ಅಲ್ಲ...ಹಾಗೆ ಹೀಗೆ ಎಂದು ಕ್ಯಾತೆ ತೆಗೆದ ರಾವತ್ ಚಿತ್ರತಂಡದೊಂದಿಗೆ ಇಲ್ಲದ ಗಲಾಟೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ರಾವತ್ ಚಿತ್ರತಂಡದ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದಾರೆ.

  'ಬುಲ್ ಬುಲ್' ಚಿತ್ರತಂಡ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳದೆ ಅವಮಾನಿಸಿತು ಎಂದು ಅವರು ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚಿತ್ರತಂಡವೂ ರಾವತ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಕಡೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿದೆ.

  ಬಳಿಕ ಚಿತ್ರತಂಡದ ಕ್ಷಮೆ ಕೋರಿದ ರಾವತ್ ಚಿತ್ರದಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅವರ ಜೊತೆ ಕೆಲಸ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ರಾವತ್ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದಾರೆ.

  ರಾವತ್ ಕನ್ನಡದ 'ಗಜ' ಹಾಗೂ ಸುದೀಪ್ ಅವರ 'ಬಚ್ಚನ್' ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಆದರೆ ಅವರು ಈ ಹಿಂದೆಂದೂ ಈ ರೀತಿ ನಡೆದುಕೊಂಡಿರಲಿಲ್ಲವಂತೆ. ಆದರೆ ನಮ್ಮೊಂದಿಗೆ ಮಾತ್ರ ಸಣ್ಣಪುಟ್ಟದಕ್ಕೂ ಕ್ಯಾತೆ ತೆಗೆದಿದ್ದಾರೆ. ಎಂಟು ದಿನಗಳ ಕಾಲ್ ಶೀಟ್ ತೆಗೆದುಕೊಂಡು ಅಡ್ವಾನ್ಸ್ ಕೂಡ ನೀಡಲಾಗಿತ್ತು. ಈಗ ಮುಂಗಡ ಹಣವನ್ನು ವಾಪಸ್ ಪಡೆದು ರಾವತ್ ನನ್ನು ಮನೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)

  English summary
  Pradeep Singh Rawat, a notable for playing villainous roles in Telugu, Hindi, Malayalam and Tamil films drops from Darshan lead Kannada film Bul Bul. The actor shows disrespect to the production unit and they decided to drop him and send him back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X