For Quick Alerts
  ALLOW NOTIFICATIONS  
  For Daily Alerts

  ಉತ್ತರ ಕರ್ನಾಟಕದ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ ದೇವರಾಜ್

  |

  ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಇನ್ನ ಕೆಲವೇ ದಿನಗಳ ಬಾಕಿ ಇದೆ. ಈ ಬಾರಿ ಪ್ರಜ್ವಲ್ ತಮ್ಮ ಹುಟ್ಟುಹಬ್ಬವನ್ನು ಒಂದು ಒಳ್ಳೆಯ ಕೆಲಸ ಮಾಡುವ ಮೂಲಕ ಆಚರಿಸಲು ನಿರ್ಧಾರ ಮಾಡಿದ್ದಾರೆ.

  ಸರ್ಕಾರಿ ಶಾಲೆ ಉಳಿಸಿ ಆಂದೋಲನ ನಡೆಸುತ್ತಿರುವ ಒಂದು ಸಂಸ್ಥೆಯ ಜೊತೆಗೆ ಪ್ರಜ್ವಲ್ ಕೈ ಜೋಡಿಸಿದ್ದಾರಂತೆ. ಉತ್ತರ ಕರ್ನಾಟಕದ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರಂತೆ. ಹೀಗಾಗಿ ತಮ್ಮ ಹುಟ್ಟುಹಬ್ಬವನ್ನು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ಮಾಡಿಕೊಳ್ಳುತ್ತಿದ್ದಾರೆ.

  ಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿ ಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿ

  ಪ್ರತಿ ವರ್ಷ ಅಭಿಮಾನಿಗಳು ಹುಟ್ಟುಹಬ್ಬದ ದಿನ ಕೇಕ್ , ಹಾರ, ಕಟ್ ಔಟ್, ಫ್ಲೆಕ್ಸ್ ಗಳಿಗೆ ದುಡ್ಡು ಹಾಕುತ್ತಿದ್ದರು. ಆದರೆ, ಈ ಬಾರಿ ಅದನ್ನು ಬಿಟ್ಟು ಅದೇ ಹಣದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ನೆಟ್ ಪುಸ್ತಕ, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ನೀಡಿ ಎಂದು ಕೇಳಿಕೊಂಡಿದ್ದಾರೆ.

  ನಿಮ್ಮ ಊರಿನಲ್ಲಿ ಇರುವ ಸರ್ಕಾರಿ ಶಾಲೆಗೆ ಅಥವಾ ನಮಗೆ ನೆಟ್ ಬುಕ್ ನೀಡಿದರೂ ನಾವೇ ಅದನ್ನು ಸರ್ಕಾರಿ ಶಾಲೆಗೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿ, ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ಮಾಡುತ್ತಿದ್ದಾರೆ.

  ಅಂದು ಅಪ್ಪ ಕೆಲಸ ಮಾಡಿದ ಜಾಗದಲ್ಲೇ ಇಂದು ಮಗನ ಸಿನಿಮಾ ಚಿತ್ರೀಕರಣ ಅಂದು ಅಪ್ಪ ಕೆಲಸ ಮಾಡಿದ ಜಾಗದಲ್ಲೇ ಇಂದು ಮಗನ ಸಿನಿಮಾ ಚಿತ್ರೀಕರಣ

  ಜುಲೈ 4 ರಂದು ಪ್ರಜ್ವಲ್ ಅವರ ಹುಟ್ಟುಹಬ್ಬ ಇದ್ದು, ಈ ಉತ್ತಮ ಕೆಲಸಕ್ಕೆ ಅಭಿಮಾನಿಗಳು ಕೂಡ ಮುಂದೆ ಬರಬೇಕು.

  English summary
  Kannada actor Prajwal Devaraj adopted a a government school in uttara karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X