For Quick Alerts
  ALLOW NOTIFICATIONS  
  For Daily Alerts

  ವೈರಲ್ ಆಗ್ತಿದೆ ಪ್ರಜ್ವಲ್ ಹಾಗೂ ರಾಗಿಣಿ ವಿಡಿಯೋ

  By Pavithra
  |
  ಪ್ರಜ್ವಲ್ - ರಾಗಿಣಿ ವಿಡಿಯೋದಲ್ಲಿ ಅಂತ್ತದ್ದೇನಿದೆ | Filmibeat Kannada

  ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಕ್ಯೂಟ್ ಜೋಡಿಗಳಿವೆ. ಅವುಗಳ ಸಾಲಿಗೆ ಇತ್ತೀಚಿಗೆ ಸೇರಿಕೊಂಡಿರುವ ಯಂಗೆಸ್ಟ್ ಕಪಲ್ ಅಂದರೆ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಚಂದ್ರನ್. ಎಲ್ಲರಿಗೂ ಗೊತ್ತಿರುವಂತೆ ಪ್ರಜ್ವಲ್ ದೇವರಾಜ್ ಎಲ್ಲರಿಗೂ ಇಷ್ಟವಾಗುವ ನಟ. ಇನ್ನು ಅವರನ್ನ ಮದುವೆ ಆಗಿರುವ ರಾಗಿಣಿ ಕೂಡ ಸುಂದರವಾಗಿರುವ ಕಾರಣ ಈ ಜೋಡಿ ಎಲ್ಲೇ ಹೋದರೆ ನೋಡುಗರನ್ನು ಅಟ್ರ್ಯಾಕ್ಟ್ ಮಾಡುತ್ತಿದೆ.

  ಇತ್ತೀಚಿಗಷ್ಟೆ ನಡೆದ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮದುವೆ ಸಂಭ್ರಮದಲ್ಲಿ ಪ್ರಜ್ವಲ್ ಮತ್ತು ರಾಗಿಣಿ ಚಂದ್ರನ್ ಅವರ ಸಣ್ಣದೊಂದು ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

  ಸಣ್ಣ ಸಣ್ಣ ದೃಶ್ಯವನ್ನೇ ಹಾಡಿಗೆ ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ. ಸದ್ಯ ಇನ್‌ಸ್ಟಾಗ್ರಾಂ ನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದವರೆಲ್ಲರೂ ಇಬ್ಬರ ಮುದ್ದಾದ ಜೋಡಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

  ಅದಷ್ಟೇ ಅಲ್ಲದೆ ಇಬ್ಬರು ಕಲಾವಿದರು ಆಗಿರುವುದರಿಂದ ಒಟ್ಟಿಗೆ ಸಿನಿಮಾ ಮಾಡಿದರೆ ತುಂಬಾ ಚೆನ್ನಾಗಿರುತ್ತೆ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ವಿಡಿಯೋ ವೈರಲ್ ಆಗಿರುವಂತೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

  English summary
  actor Prajwal Devaraj and wife Ragini Chandran Video goes is viral on instagram. Video taken during Meghana Raj and Chiranjeevi Sarja wedding

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X