For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ PD35 ಚಿತ್ರದ ಟೈಟಲ್ ಅನಾವರಣ

  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಲಿರುವ 35ನೇ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಜುಲೈ 4 ರಂದು ಬೆಳಗ್ಗೆ 10:10 ಗಂಟೆಗೆ ಅನಾವರಣವಾಗಲಿದೆ. ಹಾಗಾಗಿ, PD35 ಎಂಬ ಹ್ಯಾಷ್‌ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

  ಹುಟ್ಟುಹಬ್ಬ ಪ್ರಯುಕ್ತ PD35 ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ರಿಲೀಸ್ ಆಗಲಿದೆ ಎಂದು ಸ್ವತಃ ಪ್ರಜ್ವಲ್ ದೇವರಾಜ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಫಿಕ್ಸ್: ಯಾರದು?ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಫಿಕ್ಸ್: ಯಾರದು?

  ಅಂದ್ಹಾಗೆ, ಈ ಚಿತ್ರ ನಿರ್ದೇಶನ ಮಾಡ್ತಿರುವುದು ಗುರುದತ್ ಗಾಣಿಗ. ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ನಟಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.

  ಇದೀಗ, ಎರಡನೇ ಚಿತ್ರದಲ್ಲಿ ಥ್ರಿಲ್ಲಿಂಗ್ ಕಥೆ ಹೇಳಲು ಹೊರಟಿರುವ ಗುರುದತ್. ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಒಳಗೊಂಡಿದೆ. ಖ್ಯಾತ ಸಂಭಾಷಣೆಕಾರ ಮಾಸ್ತಿ ಡೈಲಾಗ್ ಬರೆಯಲಿದ್ದಾರೆ.

  'ನಮ್ ಲೈಫ್ ರೀ-ಸ್ಟಾರ್ಟ್ ಆಯ್ತು, 2021ರಲ್ಲಿ ಓಡ್ಬೇಕು ಅಷ್ಟೇ'- ಗುರುದತ್ 'ನಮ್ ಲೈಫ್ ರೀ-ಸ್ಟಾರ್ಟ್ ಆಯ್ತು, 2021ರಲ್ಲಿ ಓಡ್ಬೇಕು ಅಷ್ಟೇ'- ಗುರುದತ್

  ಚಿತ್ರದ ನಾಯಕಿಯ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಕನ್ನಡದ ನಟಿಯರಾದ ಅಧಿತಿ ಪ್ರಭುದೇವ ಅಥವಾ ಆಶಿಕಾ ರಂಗನಾಥ್ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ.

  Prajwal Devarajs 35th movie Title Unveiled On July 4th

  ಪ್ರಜ್ವಲ್ ದೇವರಾಜ್ ಸಿನಿಮಾಗಳು

  Recommended Video

  ಅಪ್ಪು ಅಭಿಮಾನಿಗಳಿಗೆ ನಾಳೆ ಸಿಗಲಿದೆ ಭರ್ಜರಿ ಸುದ್ದಿ | Filmibeat Kannada

  'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದ ಬಳಿಕ ಪ್ರಜ್ವಲ್ ನಟನೆಯ ಯಾವ ಸಿನಿಮಾನೂ ತೆರೆಗೆ ಬಂದಿಲ್ಲ. ದಿವಂಗತ ನಿರ್ಮಾಪಕ ರಾಮು ಬ್ಯಾನರ್‌ನಲ್ಲಿ ತಯಾರಾಗಿರುವ 'ಅರ್ಜುನ್ ಗೌಡ' ಬಿಡುಗಡೆಗೆ ಸಜ್ಜಾಗಿದೆ. ಇದರ ಜೊತೆಗೆ 'ವೀರಂ' ಸಿನಿಮಾನೂ ಸಿದ್ದವಾಗುತ್ತಿದೆ.

  English summary
  Dynamic Prince Prajwal Devaraj's 35th movie Title and first look to be unveiled on July 4th.
  Wednesday, June 30, 2021, 15:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X