»   » ಜುಲೈ ಮೊದಲ ವಾರದಲ್ಲಿ 'ಭುಜಂಗ'ನ ಸವಾರಿ ಚಿತ್ರಮಂದಿರದತ್ತ

ಜುಲೈ ಮೊದಲ ವಾರದಲ್ಲಿ 'ಭುಜಂಗ'ನ ಸವಾರಿ ಚಿತ್ರಮಂದಿರದತ್ತ

Posted By:
Subscribe to Filmibeat Kannada

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ನಟಿ ಮೇಘನಾ ರಾಜ್ ಅವರು ಕಾಣಿಸಿಕೊಂಡಿರುವ 'ಭುಜಂಗ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ತೆರೆಗೆ ಬರಲು ತಯಾರಿ ನಡೆಸುತ್ತಿದೆ.

ನಿರ್ಮಾಪಕ ವರುಣ್ ಮಹೇಶ್ ಅವರ ಪ್ರಪ್ರಥಮ ಕಾಣಿಕೆ 'ಭುಜಂಗ' ಚಿತ್ರಕ್ಕೆ ಚೊಚ್ಚಲ ನಿರ್ದೇಶಕ ಜೀವಾ ಅವರು ಆಕ್ಷನ್-ಕಟ್ ಹೇಳಿದ್ದು, ಜುಲೈ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.['ಭುಜಂಗ' ಬರ್ತಾ ಇದ್ದಾನೆ, ದಾರಿ ಬಿಡ್ರೋ!]

Prajwal Devaraj's 'Bhujanga' movie release in July 1st week

'ಭುಜಂಗ' ಚಿತ್ರದಲ್ಲಿ ಹಾಸ್ಯ ಭಾವನೆಗಳು ಮಿಳಿತವಾಗಿದ್ದರೂ ಮಧ್ಯಂತರದ ನಂತರ ಪ್ರೇಕ್ಷಕನ್ನು ಹಿಡಿದು ಕೂರಿಸುವ ಸಾಹಸ ದೃಶ್ಯಗಳ ಸರಮಾಲೆ ಇದೆ. ಮಾತ್ರವಲ್ಲದೇ ತಾಯಿ-ಮಗನ ಸೆಂಟಿಮೆಂಟ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ.

ಇನ್ನುಳಿದಂತೆ ತಲಕಾಡು, ಮೈಸೂರು, ಬೆಂಗಳೂರು ಮುಂತಾದೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಈ ಚಿತ್ರದ ಐಟಂ ಸಾಂಗ್ ಒಂದಕ್ಕೆ ನಟಿ ಐಶ್ವರ್ಯ ಸಿಂಧೋಗಿ ಅವರು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ.[ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ]

Prajwal Devaraj's 'Bhujanga' movie release in July 1st week

ಇನ್ನು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಂತೋಷ್, ಸಾಧು ಕೋಕಿಲಾ, ಜೈ ಜಗದೀಶ್, ಬುಲೆಟ್ ಪ್ರಕಾಶ್, ತಬಲಾ ನಾಣಿ, ಭಜರಂಗಿ ಚೇತನ್, ಕರಿಸುಬ್ಬು ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ. 'ಭುಜಂಗ' ಚಿತ್ರದ ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

English summary
Kannada Actor Prajwal Devaraj, Kannada Actress Meghana Raj starrer Kannada Movie 'Bhujanga' release in July 1st week. The movie is directed by Jeeva.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada