For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ನಟನೆ 'ಜಂಟಲ್‌ಮ್ಯಾನ್' ರಿ-ರಿಲೀಸ್

  |

  ಅಕ್ಟೋಬರ್ 15ರ ನಂತರ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಚಿತ್ರಮಂದಿರ ಕಾರ್ಯನಿರ್ವಹಿಸಲು ಮಾರ್ಗಸೂಚಿ ಸಹ ಪ್ರಕಟ ಮಾಡಿದೆ. ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಮಾಡಿಕೊಡುವ ಮೂಲಕ ಸಿನಿಮಾ ಪ್ರದರ್ಶಿಸಬಹುದು.

  ಆದ್ರೆ, ಯಾವುದೇ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕ ಹಿಂದೇಟು ಹಾಕುತ್ತಿದ್ದಾರೆ. ಪ್ರೇಕ್ಷಕರ ಕೊರತೆ ಎದುರಾಗಬಹುದು ಎಂಬ ಕಾರಣಕ್ಕೆ ಹೊಸ ಸಿನಿಮಾಗಳನ್ನು ರಿಲೀಸ್ ಮಾಡಲು ಗಾಂಧಿನಗರ ಮುಂದಾಗುತ್ತಿಲ್ಲ.

  Gentleman Movie Review: ಕುತೂಹಲಕಾರಿಯಾಗಿದೆ ಜಂಟಲ್ ಮ್ಯಾನ್ ಜರ್ನಿGentleman Movie Review: ಕುತೂಹಲಕಾರಿಯಾಗಿದೆ ಜಂಟಲ್ ಮ್ಯಾನ್ ಜರ್ನಿ

  ಹೀಗಾಗಿ, ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದ್ದ ಚಿತ್ರಗಳನ್ನು ರಿ-ರಿಲೀಸ್ ಮಾಡುತ್ತಿದ್ದಾರೆ. ಅಕ್ಟೋಬರ್ 16 ರಂದು ಲವ್‌ ಮಾಕ್ಟೈಲ್ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ. ಚಿರಂಜೀವಿ ಸರ್ಜಾ ನಟನೆಯ ಶಿವಾರ್ಜುನ ಸಿನಿಮಾ ಸಹ ಅದೇ ದಿನ ಚಿತ್ರಮಂದಿರಕ್ಕೆ ಬರ್ತಿದೆ.

  ಈ ಎರಡು ಚಿತ್ರಗಳ ನಂತರ ಪ್ರಜ್ವಲ್ ದೇವರಾಜ್ ನಟಿಸಿದ್ದ ಜಂಟಲ್ ಮ್ಯಾನ್ ಸಿನಿಮಾ ಸಹ ರಿ-ರಿಲೀಸ್ ಆಗುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಜಂಟಲ್ ಮ್ಯಾನ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

  Recommended Video

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada

  ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ನಟಿಸಿದ್ದ ಈ ಚಿತ್ರವನ್ನು ಜಡೇಶ್ ಕುಮಾರ್ ನಿರ್ದೇಶಿಸಿದ್ದರು. ಗುರುದೇಶಪಾಂಡೆ ನಿರ್ಮಿಸಿದ್ದರು. ಫೆಬ್ರವರಿ 7ರಂದು ಈ ಸಿನಿಮಾ ತೆರೆಕಂಡಿತ್ತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು.

  English summary
  Kannada actor Prajwal devaraj and nishvika naidu starrer Gentleman movie will re-releasing on dasara.
  Thursday, October 8, 2020, 18:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X