For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 6 ರಿಂದ 'ವೀರಂ' ಚಿತ್ರೀಕರಣ ಆರಂಭಿಸಲಿದ್ದಾರೆ ಪ್ರಜ್ವಲ್ ದೇವರಾಜ್

  |

  'ಜಂಟಲ್ ಮ್ಯಾನ್' ಸಿನಿಮಾ ನಂತರ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ ಪೆಕ್ಟರ್ ವಿಕ್ರಂ' ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ಜೊತೆ ಅರ್ಜುನ್ ಗೌಡ ಹಾಗೂ ವೀರಂ ಎಂಬ ಚಿತ್ರಗಳಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ.

  ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ವೀರಂ ಕುತೂಹಲ ಹುಟ್ಟಿದೆ. ವಿಷ್ಣುವರ್ಧನ್ ಅವರ ಅಭಿಮಾನಿಯಂತೆ ಕಾಣಿಸಿಕೊಂಡಿರುವ ಪ್ರಜ್ವಲ್ ಚಿತ್ರದ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ.

  ಚಿರು ಸರ್ಜಾ ಜೊತೆ ಮಲ್ಟಿಸ್ಟಾರ್ ಚಿತ್ರ ಪ್ಲಾನ್ ಮಾಡಿದ್ದ ಪನ್ನಗಾಭರಣ

  ಲಾಕ್‌ಡೌನ್‌ನಿಂದ ಚಿತ್ರೀಕರಣ ಆರಂಭಿಸದೇ ಇದ್ದ ವೀರಂ ಈಗ ಡಿಸೆಂಬರ್ 6 ರಿಂದ ಕೆಲಸ ಶುರು ಮಾಡಲಿದ್ದಾರೆ. ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿದ್ದು, ಶ್ರೀನಗರ ಕಿಟ್ಟಿ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

  ಇನ್ನು ಈ ಚಿತ್ರವನ್ನ ಖಾದರ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಇದು ಇವರಿಗೆ ಮೊದಲ ಸಿನಿಮಾ. ಖಾದರ್ ಕುಮಾರ್ ಕೂಡ ವಿಷ್ಣುವರ್ಧನ್ ಅವರ ಅಭಿಮಾನಿ ಎನ್ನುವುದು ಗಮನಾರ್ಹ.

  ಈ ಹಿಂದೆ ಹರಿಪ್ರಿಯಾ ಮತ್ತು ಸುಮಲತಾ ನಟಿಸಿದ್ದ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ನಿರ್ಮಿಸಿದ್ದ ದಿಶಾ ಎಂಟರ್ ಟೈನ್ ಮೆಂಟ್ ಸಂಸ್ಥೆ ವೀರಂ ಚಿತ್ರಕ್ಕೆ ಬಂಡವಾಳ ಹಾಕಿದೆ.

  ಇನ್ಸ್‌ ಪೆಕ್ಟರ್ ವಿಕ್ರಂ ಹಾಗೂ ಅರ್ಜುನ್ ಗೌಡ ಚಿತ್ರದ ಬಳಿಕ ರಾಮ್ ನಾರಾಯಣ್ ಮತ್ತು ಪಿಸಿ ಶೇಖರ್ ಅವರ ಜೊತೆಯೂ ಪ್ರಜ್ವಲ್ ದೇವರಾಜ್ ಸಿನಿಮಾ ಮಾಡಲಿದ್ದಾರೆ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

  ಅಂದ್ಹಾಗೆ. ಪಿಸಿ ಶೇಖರ್ ನಿರ್ದೇಶನದ ಚಿತ್ರದ ಬಗ್ಗೆಯೂ ಒಂದಿಷ್ಟು ಮಾಹಿತಿ ಹೊರಬಿದ್ದಿದೆ. ನೈಜಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಲಿದ್ದು, ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಪ್ರಜ್ವಲ್ ಅಭಿನಯಿಸಲಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಈ ಚಿತ್ರವೂ ಡಿಸೆಂಬರ್ ಅಥವಾ ಜನವರಿಯಿಂದ ಆರಂಭವಾಗಲಿದೆ.

  English summary
  Kannada actor Prajwal Devaraj Upcoming Movie 'Veeram' will begin shooting from December 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X