For Quick Alerts
  ALLOW NOTIFICATIONS  
  For Daily Alerts

  ಪುಷ್ಪಕ ವಿಮಾನ ಏರಿದ ಪ್ರಜ್ವಲ್ ದೇವರಾಜ್

  By Pavithra
  |

  ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ನಟ ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಸಿನಿಮಾ ಸದ್ದಿಲ್ಲದೆ ಸೆಟ್ಟೇರಿದೆ. ಇತ್ತಿಚಿಗಷ್ಟೇ ಬಸವನಗುಡಿಯ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮಹೂರ್ತ ಮಾಡಿದೆ ಸಿನಿಮಾತಂಡ.

  ಇನ್ನೂ ಹೆಸರಿಡದ ಹೊಸ ಸಿನಿಮಾಗೆ ನವ ನಿರ್ದೇಶಕ ನರಸಿಂಹ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಜ್ವಲ್ ಅಭಿನಯದ 30ನೇ ಚಿತ್ರ ಇದಾಗಿದ್ದು ಈ ಹಿಂದೆ ಸಿನಿಮಾಗೆ ನಾಯಕಿಯಾಗಿ ಸಾಯಿಪಲ್ಲವಿ ಅವರನ್ನ ಕರೆತರುವ ಪ್ರಯತ್ನ ಮಾಡಿದ್ದರು ನಿರ್ಮಾಪಕರು.

  ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಚಿತ್ರವನ್ನ ನಿರ್ಮಾಣ ಮಾಡಿದ್ದ ಎ ಆರ್ ವಿಖ್ಯಾತ್, ಪ್ರಜ್ವಲ್ ಅಭಿನಯದ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಸದ್ಯ ಮಹೂರ್ತ ಮಾಡಿರುವ ತಂಡ ಟೀಸರ್ ಮತ್ತು ಚಿತ್ರದ ಶೀರ್ಷಿಕೆಯನ್ನ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದೆ.

  ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಮಫ್ತಿ ಸಿನಿಮಾ ಖ್ಯಾತಿಯ ನವೀನ್ ಕುಮಾರ್ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಮಹೂರ್ತ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಹಾಗೂ ನಟಿ ಕಾವ್ಯಾ ಶಾ ಇನ್ನೂ ಅನೇಕರು ಭಾಗಿ ಆಗಿದ್ದರು. ಸದ್ಯ ಪ್ರೀ ಪ್ರೊಡಕ್ಷನ್ಸ್ ಕೆಲಸವನ್ನ ಮುಗಿಸಿರುವ ಚಿತ್ರತಂಡ ಇದೇ ತಿಂಗಳ (ಜ.27)ರಿಂದ ಚಿತ್ರೀಕರಣವನ್ನ ಶುರು ಮಾಡಲಿದೆ.

  English summary
  Kannada Actor Prajwal Devaraj's new film Mahuratha ceremony has happened recently. director Narasimha is going to be direct Prajwal new movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X